ದರ್ಬೆ: ದೇವರ ಅನುಗ್ರಹವೇ ಶಿಕ್ಷಣ ಸಂಸ್ಥೆಯ ಮಹತ್ವಪೂರ್ಣ ಬೆಳವಣಿ ಗೆಗೆ ಶ್ರೀರಕ್ಷೆ. ದಿವ್ಯಚೇತನ ಮೊ| ಆ್ಯಂಟನಿ ಪತ್ರಾವೊ ಅವರ ದೂರದರ್ಶಿತ್ವದ ಫಲವಾಗಿ ಸಂತ ಫಿಲೋಮಿನಾ ಕಾಲೇಜು ಶಿಕ್ಷಣಾಸಕ್ತರ ಕನಸು ನನಸಾಗಿಸಿದೆ ಎಂದು ಕೆಥೋ ಲಿಕ್ ಶಿಕ್ಷಣ ಮಂಡಳಿ ಮಾಜಿ ಕಾರ್ಯದರ್ಶಿ ಜೆರಾಲ್ಡ್ ಡಿ’ಸೋಜಾ ಅವರು ಹೇಳಿದರು.ಸಂತ ಫಿಲೋಮಿನಾ ಕಾಲೇಜಿನ ವಜ್ರ ಮಹೋತ್ಸವ ಆಚರಣೆಯ ಸಮಾರೋಪ ಸಮಾರಂಭದ ಬಲಿಪೂಜೆಯ ಪ್ರಧಾನ ಅರ್ಚಕರಾಗಿ ಭಾಗವಹಿಸಿ ಅವರು ಮಾತನಾಡಿದರು.
ಈ ಶಿಕ್ಷಣ ಸಂಸ್ಥೆಯ ಸಾಧನೆಯ ಹಿಂದೆ ಹಲವಾರು ಸಾಧಕರ ಶ್ರಮ ಅಡಗಿದೆ. ಆರು ದಶಕಗಳ ಅವಧಿಯಲ್ಲಿ ಈ ಸಂಸ್ಥೆಯ ಅಭಿವೃದ್ಧಿಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಎಲ್ಲ ಸಂಚಾಲಕರು, ಪ್ರಾಂಶುಪಾಲರು, ಪ್ರಾಧ್ಯಾಪಕರು, ಸಿಬಂದಿ ವರ್ಗವನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.
ದೇಲಂತಬೆಟ್ಟಿನ ವಂ| ಪೀಟರ್ ಸೆರಾವೊ, ಧರ್ಮಾಧ್ಯಕ್ಷರ ನಿವಾಸದ ಧರ್ಮಗುರು ವಂ| ಫ್ರಾನ್ಸಿಸ್ ಅಸ್ಸೀಸಿ ಅಲ್ಮೇಡಾ, ನಿಡ್ಪಳ್ಳಿ ಚರ್ಚ್‌ನ ಧರ್ಮಗುರು ವಂ| ಜೋನ್ ಡಿ’ಸೋಜಾ, ಬನ್ನೂರು ಚರ್ಚ್‌ನ ಧರ್ಮಗುರು ವಂ| ಪ್ರಶಾಂತ್ ಫೆರ್ನಾಂಡಿಸ್, ಮರೀಲ್ ಚರ್ಚ್‌ನ ಧರ್ಮಗುರು ವಂ| ವಲೇರಿಯನ್ ಫ್ರಾಂಕ್, ಪೆರ್ಮುದೆ ಚರ್ಚ್‌ನ ಧರ್ಮಗುರು ವಂ| ಎಡ್ವಿನ್ ಕೊರೆಯಾ, ಮುಡಿಪು ಚರ್ಚ್‌ನ ಧರ್ಮಗುರು ವಂ| ಬೆಂಜಮಿನ್ ಪಿಂಟೊ, ಪಂಜ ಚರ್ಚ್‌ನ ಧರ್ಮಗುರು ವಂ| ಅನಿಲ್ ಲೋಬೊ, ಸೆಮಿನರಿಯ ಪ್ರಾಧ್ಯಾಪಕ ವಂ| ಜೆನ್ಸನ್ ಚಾರ್ಲಿ, ಸುಳ್ಯ ಚರ್ಚ್‌ನ ಧರ್ಮಗುರು ವಂ| ವಿನ್ಸೆಂಟ್ ಡಿ’ಸೋಜಾ, ಪೆರುವಾಯಿ ಚರ್ಚ್‌ನ ಧರ್ಮಗುರು ವಂ| ವಿಶಾಲ್ ಮೋನಿಸ್, ಒಲವಿನ ಹಳ್ಳಿಯ ಧರ್ಮಗುರು ವಂ| ಲಾರೆನ್ಸ್ ಡಿ’ಸೋಜಾ, ಮನೇಲ ಚರ್ಚ್‌ನ ಧರ್ಮಗುರು ವಂ| ಪ್ರಕಾಶ್ ಡಿ’ಸೋಜಾ, ಸಂತ ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ವಂ| ಡಾ| ಆ್ಯಂಟನಿ ಪ್ರಕಾಶ್ ಮೊಂತೆರೊ, ಪ.ಪೂ. ಕಾಲೇಜು ಪ್ರಾಂಶುಪಾಲ ವಂ| ವಿಜಯ್ ಲೋಬೊ, ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಾಣಿಜ್ಯಶಾಸ್ತ್ರ ವಿಭಾಗದ ಸಂಯೋಜಕ ವಂ| ರಿತೇಶ್‌ರೋಡ್ರಿಗಸ್, ಸಹಾಯಕ ಪ್ರಾಧ್ಯಾಪಕ ವಂ| ಜಾರ್ಜ್ ಸುನಿಲ್ ಡಿ’ಸೋಜಾ, ವಂ| ಪೀಟರ್ ಗೊನ್ಸಾಲ್ವಿಸ್, ವಂ| ವಲೇರಿಯನ್ ಮಸ್ಕರೇನ್ಹಸ್, ಬ್ರದರ್ ರೋಬಿನ್ ಮತ್ತು ವಿವಿಧ ಕಾನ್ವೆಂಟ್‌ಗಳ ಧರ್ಮ ಭಗಿನಿಯರು ಭಾಗವಹಿಸಿದರು. ಪ್ರಾಂಶುಪಾಲ ಪ್ರೊ| ಲಿಯೋ ನೊರೊನ್ಹಾ ವಂದಿಸಿದರು.
ದೈವಾನುಗ್ರಹ ಅಗತ್ಯ
ಪ್ರವಚನಕಾರರಾಗಿದ್ದ ಮುಡಿಪು ಚರ್ಚ್‌ನ ಸಹಾಯಕ ಧರ್ಮಗುರು ವಂ| ಶಾನ್ ರೋಡ್ರಿಗಸ್ ಮಾತನಾಡಿ, ಮಾನವನು ಕೈಗೊಳ್ಳುವ ಎಲ್ಲ ಕಾರ್ಯಕ್ರಮಗಳ ಯಶಸ್ಸಿಗೆ ದೈವಾನುಗ್ರಹ ಅತಿ ಮುಖ್ಯ. ಈ ಸಂಸ್ಥೆಯ ಅಭ್ಯುದಯಕ್ಕೆ ಹಲವಾರು ಮಂದಿ ಕಾರಣೀಭೂತ ರಾಗಿದ್ದಾರೆ. ಸಂಸ್ಥೆಯ ಸ್ಥಾನಮಾನ ಬಾನೆತ್ತರಕ್ಕೆ ತಲುಪುವಂತಾಗಲಿ ಎಂದು ಹಾರೈಸಿದರು.