Advertisement
3 ವರ್ಷಗಳ ಹಿಂದೆ ತಾಲೂಕಿನ ಮೂತ್ರಪಿಂಡರೋಗಿಗಳ ಅನುಕೂಲಕ್ಕಾಗಿ ಶಾಸಕ ಎಚ್.ಕೆಕುಮಾರಸ್ವಾಮಿ 2 ಯಂತ್ರಗಳಿರುವ ಡಯಾಲಿಸಿಸ್‌ಕೇಂದ್ರವನ್ನು ಲೋಕಾರ್ಪಣೆ ಮಾಡಿದ್ದರು. ಹಲವಾರುಮೂತ್ರಪಿಂಡದ ರೋಗಿಗಳು ಇದರ ಪ್ರಯೋಜನಪಡೆದಿದ್ದಾರೆ.
Related Articles
Advertisement
ಇನ್ನು ಐದಾರು ಮಂದಿಡಯಾಲಿಸಿಸ್‌ಗೆ ನೊಂದಣಿ ಮಾಡಿಸಿಕೊಂಡಿದ್ದರೂಸೇವೆ ಒದಗಿಸಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಕೇವಲ2 ಯಂತ್ರಗಳುಮಾತ್ರ ಇಲ್ಲಿದೆ.ಬೆಳಗ್ಗೆ7 ಗಂಟೆಯಿಂದಲೆಡಯಾಲಿಸಿಸ್ ಸೇವೆ ಆರಂಭಿಸಿ ನಿತ್ಯ 3 ಸುತ್ತುಗಳಲ್ಲಿಡಯಾಲಿಸಿಸ್ ಸೇವೆ ನೀಡಲಾಗುತ್ತಿದೆ. ಆದರೂಪ್ರತಿನಿತ್ಯ ಕೇವಲ 6 ರೋಗಿಗಳಿಗೆ ಮಾತ್ರ ಸೇವೆ ನೀಡಲುಸಾಧ್ಯವಾಗುವುದರಿಂದ ವಾರದಲ್ಲಿ ಪ್ರತಿ ರೋಗಿಗಳಿಗೆ 2ಬಾರಿ ಮಾತ್ರ ಡಯಾಲಿಸಿಸ್ ಮಾಡಲುಸಾಧ್ಯವಾಗುತ್ತಿದೆ.
ಕೆಲವೊಂದು ರೋಗಿಗಳಿಗೆ ವಾರದಲ್ಲಿ3 ಬಾರಿ ಡಯಾಲಿಸಿಸ್ ಅಗತ್ಯವಿದ್ದರೂ ಸೇವೆ ನೀಡಲುಸಾಧ್ಯವಾಗುವುದಿಲ್ಲ. ಜತೆಗೆ ಇರುವ ಎರಡುಯಂತ್ರದಲ್ಲಿ ಒಂದು ಕೆಟ್ಟು ಹೋದರೆ ರೋಗಿಗಳಕಥೆ ಏನು?. ಈ ಹಿನ್ನೆಲೆಯಲ್ಲಿ ಕೂಡಲೆಮತ್ತೂಂದು ಡಯಾಲಿಸಿಸ್ ಯಂತ್ರದ ವ್ಯವಸ್ಥೆಜನಪ್ರತಿನಿಧಿಗಳು ಮಾಡಬೇಕಿದೆ.
ಮೂತ್ರಪಿಂಡ ವೈದ್ಯರ ಕೊರತೆ: ಕಿಡ್ನಿರೋಗಿಗಳಿಗೆ ಚಿಕಿತ್ಸೆ ನೀಡಲು ಮೂತ್ರತಜ್ಞರುಹಾಸನದ ಜಿಲ್ಲಾಸ್ಪತ್ರೆಯÇÉೆ ಇಲ್ಲ, ಇನ್ನುತಾಲೂಕು ಆಸ್ಪತ್ರೆಯಲ್ಲಿ ತಜ್ಞರನ್ನು ನಿರೀಕ್ಷಿಸುವುದುಕನಸಿನಮಾತೆ,ಈ ಹಿನ್ನೆಲೆಯಲ್ಲಿ ಸರ್ಕಾರಇತ್ತ ಗಮನವರಿಸಿ ಕನಿಷ್ಠ 15 ದಿನಕ್ಕೊಮ್ಮೆ ಮೂತ್ರತಜ್ಞರು ತಾಲೂಕು ಕೇಂದ್ರಕ್ಕೆ ಬರಲು ಕ್ರಮಕೈಗೊಳ್ಳಬೇಕಾಗಿದೆ. ಒಟ್ಟಾರೆಯಾಗಿ ಡಯಾಲಿಸಿಸ್‌ಕೇಂದ್ರ ತಾಲೂಕುಆಸ್ಪತ್ರೆಯಲ್ಲಿ ಇರುವುದರಿಂದ ಹಲವುಡಯಾಲಿಸಿಸ್ ಮಾಡಿಸಿಕೊಳ್ಳುವ ರೋಗಿಗಳಿಗೆ ನೆಮ್ಮದಿತಂದಿದ್ದರು ಇನ್ನುಷ್ಟು ಅಗತ್ಯ ಸೌಲಭ್ಯಗಳನ್ನು ನೀಡಿದಲ್ಲಿರೋಗಿಗಳ ಮನಸ್ಸಿಗೆ ಮತ್ತಷ್ಟು ನೆಮ್ಮದಿ ದೊರಕಬೇಕಿದೆ.
ಸುಧೀರ್ ಎಸ್.ಎಲ್