Advertisement

ಆಸಿಡ್‌ ಕಾನ್ಸನ್‌ ಟ್ರೇಟ್‌ ಇಲ್ಲದೆ ಡಯಾಲಿಸಿಸ್‌ ಘಟಕ ಸ್ಥಗಿತ

02:31 PM May 18, 2021 | Team Udayavani |

ಕೋಲಾರ: ಆಸಿಡ್‌ ಕಾನ್ಸನ್‌ಟ್ರೇಟ್‌ ಸರಬರಾಜು ಆಗದ ಕಾರಣ ಎಸ್ಸೆನ್ನಾರ್‌ ಜಿಲ್ಲಾಸ್ಪತ್ರೆಯಲ್ಲಿನ ಡಯಾಲಿಸಿಸ್‌ ಘಟಕದಲ್ಲಿ ಸೇವೆ ಸ್ಥಗಿತಗೊಂಡಿದ್ದು,ಚಿಕಿತ್ಸೆಗೆ ಬಂದಿದ್ದ ರೋಗಿಗಳು ಆಸ್ಪತ್ರೆಯ ಆಡಳಿತಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ಸೋಮವಾರ ಜರುಗಿತು.

Advertisement

ಬೆಳಗ್ಗೆ 6 ಗಂಟೆ ವೇಳೆಗೆ ಗ್ರಾಮೀಣ ಪ್ರದೇಶ ಸೇರಿದಂತೆ ನಗರ ಪ್ರದೇಶಗಳಿಂದಲೂ ಅನೇಕಮಂದಿ ಡಯಾಲಿಸಿಸ್‌ ಚಿಕಿತ್ಸೆಗಾಗಿ ಆಸ್ಪತ್ರೆಗೆ ಆಗಮಿಸಿದ್ದರು. ಆದರೆ, ಇಲ್ಲಿಗೆ ಆಸಿಡ್‌ಸರಬರಾಜು ಆಗದ ಹಿನ್ನೆಲೆಯಲ್ಲಿ ಚಿಕಿತ್ಸೆ ನೀಡಲು ಸಾಧ್ಯವಿಲ್ಲ ಎಂದು ಸಿಬ್ಬಂದಿ ತಿಳಿಸಿದ್ದಾರೆ. ಅತ್ತ ಆರೋಗ್ಯಾಧಿಕಾರಿಗಳನ್ನು ಪ್ರಶ್ನಿಸಿದರೆ ಆಸಿಡ್‌ ಬರಬೇಕಿದ್ದು, ಬರುತ್ತದೆ. ಬಂದ ಕೂಡಲೇ ಚಿಕಿತ್ಸೆನೀಡುವುದಾಗಿ ಉತ್ತರಿಸಿದ್ದು, ಇದರಿಂದಾಗಿ ತೀವ್ರ ಆಕ್ರೋಶ ವ್ಯಕ್ತಪಡಿಸುವಂತಾಯಿತು.

ಗೊತ್ತಿದ್ದರೂ ಮುಂಜಾಗ್ರತೆ ವಹಿಸಿಲ್ಲ: ಡಯಾಲಿಸಿಸ್‌ಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆದುಕೊಳ್ಳಲೇಬೇಕಾಗಿದೆ. ಆದ ಕಾರಣಕ್ಕಾಗಿ ಬಸ್‌ವ್ಯವಸ್ಥೆಯಿಲ್ಲದಿದ್ದರೂ ಪರ್ಯಾಯ ವ್ಯವಸ್ಥೆ ಮಾಡಿಕೊಂಡು, ನಾವು ಬೆಳಗ್ಗೆಯೇ ಇಲ್ಲಿಗೆಹಳ್ಳಿಗಳಿಂದ ಬಂದಿದ್ದೇವೆ. ಆಸಿಡ್‌ ಖಾಲಿಯಾಗುವಬಗ್ಗೆ ಮೊದಲೇ ಗೊತ್ತಿದ್ದರೂ ಅದನ್ನು ಕೂಡಲೇಸರಬರಾಜು ಮಾಡಿಸಿಕೊಳ್ಳಲು ಸಾಧ್ಯವಾಗಿಲ್ಲ.

ಮೊದಲೇ ಮಾಹಿತಿ ನೀಡಬೇಕಿತ್ತು: ಆಸಿಡ್‌ಖಾಲಿಯಾಗಿದೆ. ಆಸ್ಪತ್ರೆಗೆ ಬರಬೇಡಿ ಎಂಬ ಮಾಹಿತಿಯನ್ನೂ ರೋಗಿಗಳಿಗೆ ನೀಡಿಲ್ಲ. ಮೊದಲೇಹೇಳಿದ್ದರೆ ನಮ್ಮ ಪಾಡಿಗೆ ನಾವು ಬೇರೆ ಕಡೆಗೆಹೋಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೆವು. ಆದರೆ, ಈರೀತಿ ತೊಂದರೆ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದರು.

ಹೈದ್ರಾಬಾದ್‌ನಿಂದ ಬರಬೇಕು: ಕೋಲಾರದಎಸ್‌ಎನ್‌ಆರ್‌ ಜಿಲ್ಲಾಸ್ಪತ್ರೆಯಲ್ಲಿನ ಖಾಸಗಿ ಬಿಆರ್‌ಎಸ್‌ ಏಜೆನ್ಸಿಯ ಡಯಾಲಿಸಿಸ್‌ ಘಟಕಕ್ಕೆ ಹೈದ್ರಾಬಾದಿನಿಂದ ಆಸಿಡ್‌ ಸರಬರಾಜು ಆಗಬೇಕಿದೆ. ಆ ನಂತರಕೆಜಿಎಫ್‌, ಮುಳಬಾಗಿಲು,ಶ್ರೀನಿವಾಸಪುರ, ಮಾಲೂರು ಆಸ್ಪತ್ರೆಗಳಿಗೆ ಇಲ್ಲಿಂದಲೇ ನೀಡಲಾಗುತ್ತದೆ.

Advertisement

ಆಸಿಡ್‌ ಸಿಗುತ್ತಿಲ್ಲ: ಎಸ್‌ಎನ್‌ಆರ್‌ನಲ್ಲಿ ಖಾಲಿಯಾಗುತ್ತಿದ್ದಂತೆಯೇ ಆಸಿಡ್‌ ಪ್ಯಾಕೇಟ್‌ಗಳನ್ನು ಬೇರೆ ತಾಲೂಕುಗಳಿಂದ ತಂದುಕೊಳ್ಳುವುದಕ್ಕೆಇಲ್ಲಿನ ಸಿಬ್ಬಂದಿ ಪ್ರಯತ್ನಿಸಿದರಾದರೂ ಅಲ್ಲಿಯೂಒಂದು ದಿನಕ್ಕೆ ಆಗುವಷ್ಟು ಮಾತ್ರವೇ ಲಭ್ಯವಿದೆಎನ್ನುವ ಮಾಹಿತಿ ಬಂದ ಹಿನ್ನೆಲೆಯಲ್ಲಿ ಏನೂ ಮಾಡಲಾಗದೆ ಸುಮ್ಮನಾಗಿದ್ದಾರೆ.

ಎಷ್ಟು ಹೊತ್ತಾದ್ರೂ ಬರಲಿಲ್ಲ: ಇತ್ತ ಬೆಳಗ್ಗೆ 6 ಗಂಟೆಯಿಂದಲೂ ಕಾದು ಕುಳಿತಿದ್ದ ರೋಗಿಗಳಿಗೆಪ್ರಭಾರ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಜಗದೀಶ್‌, ಆಸಿಡ್‌ ಸರಬರಾಜು ಆಗಲಿದ್ದು, ಅದು ಬಂದ ಕೂಡಲೇ ಚಿಕಿತ್ಸೆ ಕಲ್ಪಿಸಲಾಗುವುದು. ನಾವು ಈಗಾಗಲೇಸಂಬಂಧಪಟ್ಟವರ ಜತೆ ಚರ್ಚಿಸಿದ್ದೇವೆ ಎಂದುಭರವಸೆ ನೀಡಿದರಾದರೂ ಸಮಯ ಮಧ್ಯಾಹ್ನ 1.30 ಆದರೂ ಆಸಿಡ್‌ ಬರಲೇ ಇಲ್ಲ.ಅಲ್ಲಿನ ಸಿಬ್ಬಂದಿಯು ಆಸಿಡ್‌ ಬಂದ ಕೂಡಲೇ ನಿಮಗೆ ಕರೆ ಮಾಡಿ ತಿಳಿಸುವುದಾಗಿ ಹೇಳಿದ ಬಳಿಕವಿಧಿಯಿಲ್ಲದೆ ಇಲ್ಲಿನ ಅವ್ಯವಸ್ಥೆಗೆ ಹಿಡಿಶಾಪಹಾಕಿಕೊಂಡು ರೋಗಿಗಳು ಮನೆಗಳಿಗೆ ವಾಪಸ್ಸಾಗುವಂತಾಯಿತು.

Advertisement

Udayavani is now on Telegram. Click here to join our channel and stay updated with the latest news.

Next