Advertisement

ಡಯಾಲಿಸಿಸ್‌ ಯಂತ್ರ: ಗಮನ ಸೆಳೆದ ಶಾಸಕ ಉಮಾನಾಥ್‌ ಕೋಟ್ಯಾನ್‌

11:03 PM Feb 21, 2023 | Team Udayavani |

ಬೆಂಗಳೂರು: ಮೂಡುಬಿದರೆ ಹಾಗೂ ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಸಿಎಸ್‌ಆರ್‌ ಫ‌ಂಡ್‌ ಮೂಲಕ ಒದಗಿಸಿರುವ ಡಯಾಲಿಸಿಸ್‌ ಯಂತ್ರಗಳು ಸೂಕ್ತ ನಿರ್ವಹಣೆ ಇಲ್ಲದೇ ಹಾಳಾಗುತ್ತಿರುವ ಬಗ್ಗೆ ಮೂಡಬಿದರೆ ಶಾಸಕ ಉಮಾನಾಥ್‌ ಕೋಟ್ಯಾನ್‌ ವಿಧಾನಸಭೆಯಲ್ಲಿ ಪ್ರಸ್ತಾವಸಿದ್ದಾರೆ.

Advertisement

ಶೂನ್ಯವೇಳೆಯಲ್ಲಿ ಈ ವಿಚಾರ ಪ್ರಸ್ತಾವಿಸಿದ ಅವರು, ಮೂಡುಬಿದರೆ ತಾಲೂಕು ಆಸ್ಪತ್ರೆಯಲ್ಲಿ 2 ಹಾಗೂ ಮೂಲ್ಕಿ ತಾಲೂಕು ಆಸ್ಪತ್ರೆಯಲ್ಲಿ 2 ಡಯಾಲಿಸಿಸ್‌ ಕೇಂದ್ರಗಳನ್ನು ಸಿಎಸ್‌ಆರ್‌ ಫ‌ಂಡ್‌ ಮೂಲಕ ಸ್ಥಾಪಿಸಲಾಗಿದೆ. ಆದರೆ ತಾಂತ್ರಿಕ ಸಿಬಂದಿ ಕೊರತೆಯಿಂದ ಸೂಕ್ತ ನಿರ್ವಹಣೆ ಇಲ್ಲದೇ ಇವುಗಳು ಹಾಳಾಗುತ್ತಿವೆ. ಇದರಿಂದ ಅನಾರೋಗ್ಯಕ್ಕೆ ಒಳಗಾದವರು ನೆರೆಯ ತಾಲೂಕುಗಳಿಗೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಅಲೆದಾಟ ತಪ್ಪಿಸುವುದಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಸರಕಾರದ ಪರವಾಗಿ ಉತ್ತರ ನೀಡಿದ ಸಚಿವ ಮಾಧುಸ್ವಾಮಿ, ಡಯಾಲಿಸಿಸ್‌ ಕೇಂದ್ರಗಳಿಗೆ ಸಿಬಂದಿ ನಿಯೋಜನೆಗೆ ಟೆಂಡರ್‌ ಕರೆಯಲಾಗಿದೆ. ಕಾರ್ಯಾದೇಶ ನೀಡಿದ ಬಳಿಕ ಸೇವೆ ಆರಂಭಿಸಲಾಗುವುದು ಎಂದು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next