Advertisement

ತುರ್ತು ಸೇವಾ ಸಂಖ್ಯೆ ‘100’ ಇಂದಿನಿಂದ ಉತ್ತರಪ್ರದೇಶದಲ್ಲಿ ಸ್ಥಗಿತ: ಕಾರಣವೇನು ?

09:47 AM Oct 27, 2019 | Team Udayavani |

ಲಕ್ನೋ: ಸಾಂಪ್ರದಾಯಿಕ ತುರ್ತು ಸೇವಾ ಸಂಖ್ಯೆ 100 ಇಂದಿನಿಂದ ಉತ್ತರಪ್ರದೇಶದಲ್ಲಿ ಸ್ಥಗಿತಗೊಳ್ಳಲಿದೆ. ಇದಕ್ಕೆ ಬದಲಾಗಿ 112 ಹೆಲ್ಪ್ ಲೈನ್ ನಂಬರ್ ಅನ್ನು ಜಾರಿಗೆ ತರಲಾಗಿದ್ದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕೃತವಾಗಿ ಬಿಡುಗಡೆ ಮಾಡಲಿದ್ದಾರೆ.

Advertisement

ಪ್ರಸ್ತುತ 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಏಕ  ತುರ್ತು ಸೇವಾ ಸಂಖ್ಯೆ 112 ಜಾರಿಗೆ ತರಲಾಗಲಿದೆ.

ತಕ್ಷಣದ ಸೇವೆ ನೀಡುವ 100 ಹೆಲ್ಪ್ ಲೈನ್ ನಂಬರ್ ಅನ್ನು 2016 ರಲ್ಲಿ ಅಖಿಲೇಶ್ ಯಾದವ್ ಸರ್ಕಾರ ಜಾರಿಗೆ ತಂದಿತ್ತು. ಅದನ್ನು ನಿಯಂತ್ರಣ ಕೊಠಡಿಯಲ್ಲಿ ಸ್ವೀಕರಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಪೊಲೀಸ್ ಠಾಣೆಗೆ ವರ್ಗಾಯಿಸಲಾಗುತ್ತಿತ್ತು. ಅದರ ಜೊತೆಗೆ ಸಮಸ್ಯೆ ಬಗೆಹರಿಯುವವರೆಗೂ  ಅದರ ಮೇಲ್ವೀಚಾರಣೆಗೆ ನಡೆಸಲಾಗುತ್ತಿತ್ತು.

ಇಂದಿನಿಂದ 100, 101(ಅಗ್ನಿಶಾಮಕ), ಮತ್ತು 1090( ಮಹಿಳಾ ಸಹಾಯವಾಣಿ) ತುರ್ತು ಸೇವಾ ಸಂಖ್ಯೆಗಳು ಸಂಯೋಜಿತವಾಗಿ ಅದರ ಬದಲಾಗಿ 112 ಸಹಾಯ ಸಂಖ್ಯೆ ಜಾರಿಗೆ ಬರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next