Advertisement
ಮಧ್ಯರಾತ್ರಿ ದ್ವಿಚಕ್ರ ವಾಹನದಲ್ಲಿ ಬಂದ ಅಪರಿಚಿತ ಮುಸುಕುಧಾರಿ ಯುವಕರಿಬ್ಬರು ಕೂಡು ರಸ್ತೆಗಳ ಮಧ್ಯೆ ಕುಂಬಳ ಕಾಯಿಗಳನ್ನು ಒಡೆದು ಲಿಂಬೆಹಣ್ಣುಗಳನ್ನಿಟ್ಟು ಅದರ ಮೇಲೆ ಗುಲಾಲ ಎರಚಿ ಹೋಗಿದ್ದಾರೆ ಎಂದು ತಿಳಿದುಬಂದಿದೆ. ಗ್ರಾಮದ ಮನ್ನೂರ ರಸ್ತೆ ಹತ್ತಿರ ಕೂಡ ವಾಮಾಚಾರ ಮಾಡಿ ಎರಡು ಹುಂಜಗಳನ್ನು ಬಲಿಕೊಟ್ಟಿರುವುದು ಗ್ರಾಮಸ್ಥರಲ್ಲಿ ಆತಂಕಮೂಡಿಸಿದೆ. ಯಾರೋ ಕಿಡಿಗೇಡಿಗಳು ಗ್ರಾಪಂ ಚುನಾವಣೆಯಲ್ಲಿ ಜನರನ್ನು ಹೆದರಿಸುವ ಉದ್ದೇಶದಿಂದ ಈ ರೀತಿ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ.