ಹೊಸದಿಲ್ಲಿ: “ಕೋವಿಡ್ ವೈರಾಣುಗಳ ದಾಳಿಯಿಂದ ಮನುಷ್ಯರಲ್ಲಿ ಹೊಸ ಬಗೆಯ ಮಧುಮೇಹ ಕಾಣಿಸಿಕೊಳ್ಳಬಹುದು. ಜತೆಗೆ ವೈರಸ್‌ನಿಂದಲೇ ಮಧುಮೇಹ ಕಾಣಿಸಿಕೊಳ್ಳಬಹುದು. ಈಗಾಗಲೇ ಮಧು ಮೇಹ ಇರುವವರಿಗೆ ಆ ವೈರಾಣುಗಳು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟು ಮಾಡಬಹುದು’ ಎಂಬ ವಿಚಾರವೊಂದನ್ನು ಅಂತಾರಾಷ್ಟ್ರೀಯ ತಜ್ಞರು ಹೊರಗೆಡವಿದ್ದಾರೆ. “ಇಂಟರ್‌ನ್ಯಾಷನಲ್ ಗ್ರೂಪ್ ಆಫ್ 17′ ಎಂಬ ತಂಡದಲ್ಲಿರುವ ತಜ್ಞರು, ಸೋಂಕುತಾಗಿರುವ ಹಲವಾರು ಪ್ರಕರಣಗಳನ್ನು ಅಧ್ಯಯನ ನಡೆಸಿ ಹೊಸ ಸಾಧ್ಯತೆಗಳನ್ನು ಮುಂದಿಟ್ಟಿದ್ದಾರೆ. ಈ ಕುರಿತಂತೆ ವಿವರಣೆ ನೀಡಿರುವ ತಂಡದ ಸದಸ್ಯರಲ್ಲೊಬ್ಬರಾಗಿರುವ ಸ್ಟಿಫಾನಿ ಎ. ಅಮಿಲ್, “ಮಧುಮೇಹಿಗಳು ಕೊರೊನಾಕ್ಕೆ ಬೇಗನೇ ತುತ್ತಾಗುವ ಅಪಾಯವಿದೆ. ಅಲ್ಲದೆ, ಕೊರೊನಾಕ್ಕೆ ಒಳಗಾದ ಮಧುಮೇಹಿಗಳಲ್ಲಿ ಶೇ. 20-30ರಷ್ಟು ಜನರು ಸಾವಿಗೀಡಾಗಿದ್ದಾರೆ ಎಂದು ಈವರೆಗೆ ಹೇಳಲಾಗಿತ್ತು. ಇತ್ತೀಚಿನ ಅಧ್ಯಯನಗಳ ಪ್ರಕಾರ, ಕೋವಿಡ್ ದಿಂದಲೇ ಮಧುಮೇಹ ಬರುವ ಸಾಧ್ಯತೆಗಳಿವೆ ಎಂಬ ಹೊಸ ವಿಚಾರ ಪತ್ತೆಯಾಗಿದೆ.