Advertisement

ಧ್ರುವನಾರಾಯಣ ಸೋಲು ಕ್ಷೇತ್ರಕ್ಕೆ ನಷ್ಟ: ಯತೀಂದ್ರ

09:27 PM Jun 02, 2019 | Lakshmi GovindaRaj |

ತಿ.ನರಸೀಪುರ: ದೇಶದ ಅತ್ಯುತ್ತಮ ಸಂಸದರು ಎನಿಸಿಕೊಂಡಿದ್ದ ಆರ್‌.ಧ್ರುವನಾರಾಯಣ ಅವರು ರಾಜಕಾರಣದ ಕಾರಣಗಳಿಗಾಗಿ ಕಳೆದ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಸೋತಿರುವುದು ಜನರಿಗೆ ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ತುಂಬಲಾರದ ನಷ್ಟವೆಂದು ವರುಣ ಶಾಸಕ ಡಾ.ಎಸ್‌.ಯತೀಂದ್ರ ಹೇಳಿದರು.

Advertisement

ಪಟ್ಟಣದ ಶ್ರೀ ಮಹದೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ರಂಜಾನ್‌ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರಿಗೆ ಪಡಿತರ ಆಹಾರ ಪದಾರ್ಥ ವಿತರಣೆ ಮಾಡಿ ಹಬ್ಬದ ಶುಭಕೋರಿದ ನಂತರ ಮಾತನಾಡಿದರು.

ದುರಾದೃಷ್ಟ ಸೋತಿದ್ದಾರೆ: ಜೆಡಿಎಸ್‌ ಬೆಂಬಲಿತ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಆರ್‌.ಧ್ರುವನಾರಾಯಣ ಅವರ ಸೋಲನ್ನು ನಿರೀಕ್ಷಿಸಿರಲಿಲ್ಲ. ದುರಾದೃಷ್ಟವಶಾತ್‌ ಅವರು ಸೋತಿರುವುದು ಕ್ಷೇತ್ರದ ಜನತೆ ಹಾಗೂ ರಾಜಕಾರಣಕ್ಕೆ ನಷ್ಟವೆಂದು ಬೇಸರ ವ್ಯಕ್ತಪಡಿಸಿದರು.

ಸದಾ ಜನರೊಂದಿಗೆ: ಚುನಾವಣೆಯಲ್ಲಿ ಧ್ರುವನಾರಾಯಣ ಅವರು ಸೋತಿದ್ದರೂ ಜನರ ಮನಸ್ಸಿನಲ್ಲಿ ಇನ್ನೂ ಅಚ್ಚಳಿಯದೇ ಉಳಿದಿದ್ದಾರೆ. ಸೋಲಿನ ನ್ಯೂನತೆ ಕಾರಣ ಸರಿಪಡಿಸಿಕೊಂಡು ಕಾಂಗ್ರೆಸ್‌ ಸಂಘಟನೆ ಬಲಪಡಿಸುವ ಕೆಲಸವನ್ನು ಮಾಡುತ್ತೇವೆ. ಧ್ರುವ ಅವರು ಸದಾಕಾಲ ಜನರೊಂದಿಗೆ ಇರುವುದರಿಂದ ಮುಂದಿನ ಯಾವುದೇ ಚುನಾವಣೆಯಲ್ಲಿ ಮತ್ತೆ ಜನಪ್ರತಿನಿಧಿಯಾಗುತ್ತಾರೆ. ಜನರಿಗೆ ಸಾಮಾಜಿಕ ಮತ್ತು ರಾಜಕೀಯ ಸೇವೆ ಮಾಡುತ್ತಾರೆ ಎಂಬ ವಿಶ್ವಾಸದೆ ಎಂದರು.

ಸಂಭ್ರಮದಲ್ಲಿ ಭಾಗಿ: ಉಪವಾಸ ರೋಜಾ ಆಚರಣೆಯಿಂದ ನಡೆಯುವ ರಂಜಾನ್‌ ಹಬ್ಬಕ್ಕೆ ಶಾಂತಿ ಸೌಹಾರ್ದತೆ ಬೆಸೆಯುವ ಶಕ್ತಿಯಿದೆ. ಅಲ್ಪಸಂಖ್ಯಾತ ಸಮುದಾಯದ ಜನರು ಹಬ್ಬ ಆಚರಣೆ ಮಾಡುವಾಗ ನಾವೂ ನಿಮ್ಮ ಸಂಭ್ರಮದಲ್ಲಿ ಭಾಗಿಯಾಗುತ್ತೇವೆ ಎಂಬ ಆತ್ಮಸ್ಥೆರ್ಯ ತುಂಬಲು ವಿವಿಧೆಡೆ ಅವರನ್ನು ಭೇಟಿ ಮಾಡುತ್ತಿದ್ದೇವೆ. ಸಹೋದರ ದಿ.ರಾಕೇಶ್‌ ಸಿದ್ದರಾಮಯ್ಯ ಅವರು ರಂಜಾನ್‌ ಹಬ್ಬದ ಸಂದರ್ಭದಲ್ಲಿ ಮುಸ್ಲಿಮರಿಗೆ ಪಡಿತರ ಆಹಾರ ಪದಾರ್ಥ ವಿತರಿಸುತ್ತಿದ್ದ ಕಾರ್ಯ ಮುಂದುವರಿಸಿಕೊಂಡು ಬರುತ್ತಿದ್ದೇವೆ ಎಂದು ಡಾ.ಎಸ್‌.ಯತೀಂದ್ರ ತಿಳಿಸಿದರು.

Advertisement

ಈ ವೇಳೆ ಪುರಸಭಾ ಸದಸ್ಯರಾದ ಟಿ.ಎಂ.ನಂಜುಂಡಸ್ವಾಮಿ, ಆರ್‌.ನಾಗರಾಜು, ಮೃಗಾಲಯ ಪ್ರಾಧಿಕಾರದ ಮಾಜಿ ನಿರ್ದೇಶಕ ಅಮ್ಜದ್‌ ಖಾನ್‌, ಕೆಪಿಸಿಸಿ ಅಲ್ಪಸಂಖ್ಯಾತ ಸಂಚಾಲಕ ಬಿ.ಮನ್ಸೂರ್‌ ಆಲಿ, ಗ್ರಾಪಂ ಮಾಜಿ ಅಧ್ಯಕ್ಷ ಮನ್ನೇಹುಂಡಿ ಮಹೇಶ, ಮುಖಂಡರಾದ ವಿದ್ಯಾನಗರ ಸ್ವಾಮಿ, ಮುನ್ನ, ಅಕರ್‌, ಶಕೀಲ್‌, ಬಾಬಣ್ಣ, ಶಾಂತಕುಮಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next