Advertisement

ಮೊದಲ ಬಾರಿಗೆ ಮಗಳನ್ನು ಪರಿಚಯಿಸಿದ ಧ್ರುವ ಸರ್ಜಾ

03:52 PM May 16, 2023 | Team Udayavani |

ಕಳೆದ ವರ್ಷ ಅಕ್ಟೋಬರ್‌ ತಿಂಗಳಿನಲ್ಲಿ ನಟ ಧ್ರುವ ಸರ್ಜಾ ಮತ್ತು ಪ್ರೇರಣಾ ದಂಪತಿಯ ಜೀವನದಲ್ಲಿ ಹೆಣ್ಣು ಮಗುವಿನ ಆಗಮನವಾಗಿತ್ತು. ಈ ವಿಷಯವನ್ನು ನಟ ಧ್ರುವ ಸರ್ಜಾ ಕೂಡ ತುಂಬ ಖುಷಿಯಿಂದ ಸೋಶಿಯಲ್‌ ಮಿಡಿಯಾದಲ್ಲಿ, ತಮ್ಮ ಅಭಿಮಾನಿಗಳ ಮುಂದೆ ಹಂಚಿಕೊಂಡಿದ್ದರು. ಇನ್ನು ಆಗಾಗ ಮಗಳೊಂದಿಗೆ ಕೆಲವು ಫೋಟೊಗಳನ್ನು ಧ್ರುವ ಸರ್ಜಾ ಶೇರ್‌ ಮಾಡಿದ್ದರೂ, ಆ ವೇಳೆ ಮಗಳ ಮುಖವನ್ನು ಎಲ್ಲೂ ರಿವೀಲ್‌ ಮಾಡಿರಲಿಲ್ಲ. ಇದೀಗ, ಅಂದ್ರೆ ಮಗಳು ಹುಟ್ಟಿದ ಸುಮಾರು ಏಳು ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಧ್ರುವ ಸರ್ಜಾ ತಮ್ಮ ಅಭಿಮಾನಿಗಳಿಗೆ ತಮ್ಮ ಮುದ್ದಿನ ಮಗಳನ್ನು ಪರಿಚಯಿಸಿದ್ದಾರೆ.

Advertisement

ಹೌದು, ಸೋಮವಾರ (ಮೇ 15) ಬೆಳಗ್ಗೆ ಧ್ರುವ ಸರ್ಜಾ ತಮ್ಮ ಅಭಿಮಾನಿಗಳಿಗೆ ಸ್ಪೆಷಲ್‌ ಸಪ್ರೈಸ್‌ ಕೊಟ್ಟಿದ್ದಾರೆ. ತಮ್ಮ ಸೋಶಿಯಲ್‌ ಮೀಡಿಯಾ ಖಾತೆಯಲ್ಲಿ ಮಗಳ ಫೋಟೊವನ್ನು ಶೇರ್‌ ಮಾಡಿರುವ ಧ್ರುವ, ತಮ್ಮ ಮಗಳ ಬಗ್ಗೆ ಬರೆದುಕೊಂಡಿದ್ದಾರೆ.

ಅಂದಹಾಗೆ, ಧ್ರುವ ಸರ್ಜಾ ಹಂಚಿಕೊಂಡಿರುವ ಈ ಫೋಟೊಗಳು 7 ತಿಂಗಳ ಫೋಟೊ ಅಲ್ಲ. ಒಂದು ತಿಂಗಳ ಫೋಟೊ ಶೂಟ್‌ನ ಫೋಟೋಗಳು. ಇಂತಹ ಇನ್ನೂ ಹಲವು ಫೋಟೊಗಳಿದ್ದು, ಅವುಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ. ಸದ್ಯ ಧ್ರುವ ಸರ್ಜಾ ಶೇರ್‌ ಮಾಡಿರುವ ಈ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

Advertisement

Udayavani is now on Telegram. Click here to join our channel and stay updated with the latest news.

Next