ಬೆಂಗಳೂರು: ಸಿನಿಮಾ ಮಂದಿಗೆ ಅಭಿಮಾನಿಗಳು(Fans) ಹೆಚ್ಚಿರುತ್ತಾರೆ. ನಮ್ಮ ಕನ್ನಡದ ವಿಚಾರಕ್ಕೆ ಬಂದರೆ ತನ್ನ ಮೆಚ್ಚಿನ ನಟರ ಹೆಸರನ್ನು ಟ್ಯಾಟೋ ಹಾಕಿಕೊಂಡು, ಕೆಲವರು ಅವರ ಸಿನಿಮಾದ ಡೈಲಾಗ್ಸ್ ಹೇಳಿಕೊಂಡು ಅಭಿಮಾನವನ್ನು ಪ್ರದರ್ಶಿಸುತ್ತಾರೆ.
ಅಭಿಮಾನಿಗಳ ಅಭಿಮಾನಕ್ಕೆ ಪ್ರೀತಿಯಿಂದಲೇ ಸ್ಪಂದಿಸಿ ಅವರ ಆಸೆಯನ್ನು ಕಲಾವಿದರು ಪೂರ್ತಿಗೊಳಿಸುತ್ತಾರೆ. ಫೋಟೋ, ವಿಡಿಯೋಗೆ ಪೋಸ್ ಕೊಡುತ್ತಾರೆ.
ಸ್ಯಾಂಡಲ್ ವುಡ್ ನಟ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಅವರಿಗೆ ದೊಡ್ಡ ಅಭಿಮಾನಿಗಳ ವರ್ಗವೇವಿದೆ. ಧ್ರುವ ಯಾವ ಅಭಿಮಾನಿಗಳು ಸಿಕ್ಕರೂ ಅವರೊಂದಿಗೆ ಸಾಮಾನ್ಯರಂತೆ ವರ್ತಿಸಿ ಅವರ ಆಸೆಗಳನ್ನು ನೆರವೇರಿಸುತ್ತಾರೆ. ಅವರು ಹೇಳುವ ಡೈಲಾಗ್ಸ್, ಹಾಡುಗಳನ್ನು ಕೇಳಿ ಖುಷಿ ಆಗುತ್ತಾರೆ.
ಇತ್ತೀಚೆಗೆ ಧ್ರುವ ಸರ್ಜಾರ ಅಭಿಮಾನಿಯೊಬ್ಬರು ಹಾಡಿದ ʼಓಡ್ರೋ ಓಡ್ರೋ ಇದು ಸರ್ಜಾ ಅಡ್ಡʼ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿ ಸೋಶಿಯಲ್ ಮೀಡಿಯಾ ಪೇಜ್‌ಗಳಲ್ಲಿ, ಮಿಮ್ಸ್ ಗಳಲ್ಲಿ ಹರಿದಾಡಿತ್ತು.
ಈ ಬಗ್ಗೆ ಧ್ರುವ ಸರ್ಜಾ ಸರ್ಜಾ ಪ್ರತಿಕ್ರಿಯೆ ನೀಡಿದ್ದಾರೆ. ʼಫಿಲ್ಮಿ ಬೀಟ್ʼ ಸಂದರ್ಶನದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ.
“ಆತ ಬಂದು ಒಂದೇ ಹಾಡು ಹಾಡ್ತೀನಿ ಅಂದ. ಹಾಡು ಬೇಡ ನೀವು ಹಾಡಿದ್ರೆ ಜನ ಜಾಸ್ತಿ ಇದ್ದಾರೆ. ಎಲ್ಲರೂ ಹಾಡ್ತಾರೆ ಅಂದೆ. ಅದಕ್ಕೆ ಇಲ್ಲ ಬಾಸ್ ನಾನು ಹಾಡ್ಬೇಕು ಎಂದ. ಆಮೇಲೆ ಲಾಸ್ಟ್ ಗೆ ಅವರು ಹಾಡಿದ್ರು. ಒಂದು ನಿಮಿಷ, ಎರಡು, ಮೂರು ನಿಮಿಷ ಆಯಿತು. ನಾನೇನು ಅವರು ಹಾಡೋದನ್ನು ನಿಲ್ಲಿಸಿಲ್ಲ. ಮೂರು – ನಾಲ್ಕು ಗಂಟೆ ಆದ್ಮೇಲೆ ಮತ್ತೆ ಇನ್ನೊಂದು ಹಾಡು ಹಾಡ್ತೇನೆ ಅಂದ. ಗುರು ನೀನು ಪ್ರತಿ ಸಂಡೇ ಒಂದೊಂದು ಹಾಡು ಹಾಡು. ಈ ಸಂಡೇ ಬಿಟ್ಟು ಬಿಡು ಎಂದೆ. ಅವರು ನಮಗಾಗಿ ಟೈಮ್ ಕೊಡ್ತಾರೆ ಎಂದರು.
ಬೇರೆ ದೇಶದಿಂದ ಹೀಗೆ ನಿಮ್ಮನ್ನು ಹುಡುಕಿಕೊಂಡು ಬಂದು ಹಾಡು ಹಾಡಿದರೆ ನಿಮ್ಮ ರಿಯಾಕ್ಷನ್ ಹೇಗಿರುತ್ತದೆನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, “ಏನಿಲ್ಲ ಕೇಳ್ತೀನಿ. ಅರ್ಥ ಆಗಲ್ಲ ಆದ್ರೂ ಕೇಳ್ತೀನಿ. ನಾವು ಎಲ್ಲರಿಂದ ಏನಾದರೂ ಕಲಿಯುವುದು ಇರುತ್ತದೆ. ಇಂತಹವರಿಂದ ನಾನು ಆತ್ಮವಿಶ್ವಾಸವನ್ನು ಕಲಿಯುತ್ತೇನೆ. ಚೆನ್ನಾಗಿತ್ತೋ, ಇಲ್ಲವೋ ಅದನ್ನು ಆತ್ಮವಿಶ್ವಾಸದಿಂದ ಬಂದು ಹೇಳ್ತಾರೆ. ಇವರೆನ್ನಲ್ಲ ರೇಗಿಸುತ್ತಿದ್ದಾರೆ ಅಲ್ವಾ ಆ ಮಂದಿಗೆ ಈ ಕಾನ್ಫಿಡೆಸ್ ಇದೆಯಾ? ಇಲ್ಲ 100% ಇಲ್ಲ. ಅದಕ್ಕವರು ಅಲ್ಲಿ ಇರೋದು ಇವರು ಇಲ್ಲಿರೋದು” ಎಂದು ಅಭಿಮಾನಿಗಳ ಪ್ರೀತಿಗೆ ಪ್ರತಿಕ್ರಿಯೆ ನೀಡಿದರು.
ಧ್ರುವ ಸರ್ಜಾ ಸದ್ಯ ಮಾರ್ಟಿನ್ (Martin) ಸಿನಿಮಾದ ಪ್ರಚಾರದಲ್ಲಿದ್ದಾರೆ. ಇತ್ತೀಚೆಗೆ ಸಿನಿಮಾದ ಮೊದಲ ಟ್ರೇಲರ್ ರಿಲೀಸ್ ಆಗಿದ್ದು, ಜನರಿಂದ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ. ಡಿಸೆಂಬರ್ 22ರಂದು ರಿಲೀಸ್ ಆಗಲಿದೆ.