“ಧ್ರುವ 369′ ಎಂಬ ಚಿತ್ರವೊಂದು ಆರಂಭವಾಗಿದ್ದು, ಈ ಚಿತ್ರದಲ್ಲಿ ರಾಘವೇಂದ್ರ ರಾಜ್ಕುಮಾರ್ ಮೊದಲ ಬಾರಿ ರಾಜ್ಯಪಾಲರಾಗಿ ಕಾಣಿಸಿಕೊಂಡಿದ್ದಾರೆ.
ಸಿನಿಮಾದ ಕ್ಲೈಮ್ಯಾಕ್ಸ್ ಹಂತದ ಚಿತ್ರೀಕರಣವು ನಂದಿಬೆಟ್ಟ ಬಳಿ ಇರುವ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದಿದ್ದು, ರಾಜ್ಯಪಾಲರ ದೃಶ್ಯವನ್ನು ಸೆರೆಹಿಡಿಯಲಾಯಿತು.
ತಮ್ಮ ಪಾತ್ರದ ಬಗ್ಗೆ ಮಾತನಾಡಿದ ರಾಘಣ್ಣ. ಎರಡು ದಿವಸದಿಂದ ಶೂಟಿಂಗ್ನಲ್ಲಿ ಪಾಲ್ಗೊಂಡಿದ್ದೇನೆ. ಪ್ರಥಮ ಬಾರಿ ಇಂತಹ ಪಾತ್ರವನ್ನು ಮಾಡುತ್ತಿರುವುದು ಖುಷಿ ತಂದಿದೆ ಎಂದರು.
ನಿರ್ದೇಶಕ ಶಂಕರ್ನಾಗ್ ಪ್ರಕಾರ ಕಥೆಗೆ ಮೂಲಧಾರ ರಾಘಣ್ಣ. ಪ್ರಾರಂಭ, ಮಧ್ಯಂತರ ಹಾಗೂ ಕೊನೆಯಲ್ಲಿ ಇರುತ್ತಾರೆ. ಪುರಾಣ ಕಾಲದ ಧ್ರುವ ನಕ್ಷತ್ರ ಕಥೆಗೂ ಈಗಿನ ಖಗೋಳ ಶಾಸ್ತ್ರಕ್ಕೂ ಸಂಬಂಧವಿರುವ ಕಥೆ ಇರುತ್ತದೆ. ಅಲ್ಲದೆ ಕುತೂಹಲಕಾರಿ ಅಂಶ ಅಡಗಿದೆ.
ಮುಖ್ಯ ಪಾತ್ರದಲ್ಲಿ ರಮೇಶ್ ಭಟ್, ಅತೀಶ್ ಶೆಟ್ಟಿ, ಚಂದನಾ, ನಮಿತಾ, ಸಂದೀಪ್ ಮಲಾನಿ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಶ್ರೀಕೃಷ್ಣ ಕಾಂತಿಲ ಅವರು ಅಚಿಂತ್ಯ ಸ್ಟುಡಿಯೋಸ್ ನಡಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.