Advertisement

“ಧೋನಿ ಸಮಯ ಮುಗಿದಿದೆ’

12:28 AM Sep 21, 2019 | Team Udayavani |

ಹೊಸದಿಲ್ಲಿ: ಮಹೇಂದ್ರ ಸಿಂಗ್‌ ಧೋನಿ ನಿವೃತ್ತಿ ಬಗ್ಗೆ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಮಾಜಿ ಆಟಗಾರ ಸುನೀಲ್‌ ಗಾವಸ್ಕರ್‌ ಹೇಳಿಕೆಯೊಂದನ್ನು ನೀಡಿದ್ದು, ಧೋನಿ ಸಮಯ ಮುಗಿದಿದೆ ಎಂಬ ರೀತಿಯಲ್ಲಿ ಮಾತಾಡಿದ್ದಾರೆ.

Advertisement

“ಧೋನಿ ಸಮಯ ಮುಗಿದಿದೆ. ಭಾರತ ಧೋನಿಯನ್ನು ಆಯ್ಕೆ ವ್ಯಾಪ್ತಿಯಿಂದ ಹೊರಗಿರಿಸಿ ಸೂಕ್ತ ಆಟಗಾರರನ್ನು ಹುಡುಕಬೇಕು. ನನ್ನ ನೆಚ್ಚಿನ ಆಯ್ಕೆ ರಿಷಭ್‌ ಪಂತ್‌ ಆಗಿದ್ದಾರೆ. ಇದನ್ನು ನಾನು ಧೋನಿ ಮೇಲಿನ ಎಲ್ಲ ಗೌರವದಿಂದ ಹೇಳುತ್ತಿದ್ದೇನೆ’ ಎಂದಿದ್ದಾರೆ.

“ಧೋನಿ ಮನಸ್ಸಿನಲ್ಲಿ ಏನಿದೆ ಎಂಬುದು ಯಾರಿಗೂ ತಿಳಿದಿಲ್ಲ. ಭಾರತೀಯ ಕ್ರಿಕೆಟ್‌ನೊಂದಿಗಿನ ತನ್ನ ಭವಿಷ್ಯ ಏನೆಂಬುದನ್ನು ಅವರೇ ಸ್ಪಷ್ಟಪಡಿಸಬೇಕು. ಅವರು ಈಗಲೇ 38ರ ಹರೆಯದಲ್ಲಿದ್ದು, ಟೀಮ್‌ ಇಂಡಿಯಾ ಭವಿಷ್ಯದತ್ತ ದೃಷ್ಟಿ ಹಾಯಿಸಬೇಕು. ಮುಂದಿನ ಟಿ20 ವಿಶ್ವ ಕಪ್‌ ಬರುವ ಹೊತ್ತಿಗೆ ಅವರಿಗೆ 39 ವರ್ಷ ದಾಟಿರಲಿದೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next