Advertisement

ಧೊನಿ ತರಬೇತಿಗೆ ಅನುಮತಿ ನೀಡಿದ ಸೇನೆ

01:21 PM Jul 22, 2019 | keerthan |

ಹೊಸದೆಹಲಿ: ಸೇನೆಯಲ್ಲಿ ತರಬೇತಿ ಪಡೆಯಬೇಕೆಂಬ ಭಾರತೀಯ ಕ್ರಿಕೆಟಿಗ ಮಹೇಂದ್ರ ಸಿಂಗ್‌ ಧೋನಿಯ ಅಭಿಲಾಷೆಗೆ ಈಗ ಅನುಮತಿ ಸಿಕ್ಕಿದೆ.

Advertisement

ಭಾರತೀಯ ಸೇನಾ ಚೀಫ್‌ ಜನರಲ್‌ ಬಿಪಿನ್‌ ರಾವತ್‌, ಧೊನಿಗೆ ಎರಡು ತಿಂಗಳು ಪ್ಯಾರಾಚೂಟ್‌ ರೆಜಿಮೆಂಟ್‌ ನಲ್ಲಿ ತರಬೇತಿ ಪಡೆಯಲು ಅನುಮತಿ ನೀಡಿದ್ದಾರೆ ಎಂದು ಸೇನಾ ಮೂಲಗಳು ವರದಿ ಮಾಡಿದೆ.

ಭಾರತೀಯ ಸೇನೆಯ ಲೆಫ್ಟಿನೆಂಟ್‌ ಕರ್ನಲ್‌ ಗೌರವ ಹೊಂದಿರುವ ಮಹೇಂದ್ರ ಸಿಂಗ್‌ ಧೋನಿ, ಬಿಸಿಸಿಐನಿಂದ ಎರಡು ತಿಂಗಳು ರಜೆ ಪಡೆದು ಸೇನೆಯಲ್ಲಿ ತರಬೇತಿ ಪಡೆಯಲು ಬಯಸಿದ್ದರು. ಇದೇ ಕಾರಣಕ್ಕಾಗಿ ವಿಂಡೀಸ್‌ ಸರಣಿಗೆ ಧೋನಿಯನ್ನು ಪರಿಗಣಿಸಲಾಗಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next