Advertisement
ಸ್ಟಾರ್ ನ್ಪೋರ್ಟ್ಸ್ ಸಂದರ್ಶನದಲ್ಲಿ ಮಾತನಾಡಿದ ಗಂಭೀರ್, ಒಂದು ವೇಳೆ ಈ ವರ್ಷ ಐಪಿಎಲ್ ನಡೆಯದಿದ್ದರೆ, ಧೋನಿ ತಂಡಕ್ಕೆ ಮರಳುವುದು ತುಂಬಾ ಕಠಿನ. ಏಕೆಂದರೆ ಸುಮಾರು ಒಂದೂವರೆ ವರ್ಷದಿಂದ ಧೋನಿ ಕ್ರಿಕೆಟ್‌ನಲ್ಲಿ ಪಾಲ್ಗೊಂಡಿರದ ಕಾರಣ ಅವರ ಆಯ್ಕೆ ಕಷ್ಟ. ಹೀಗಾಗಿ ಅವರ ಸ್ಥಾನಕ್ಕೆ ಕೆ.ಎಲ್ ರಾಹುಲ್ ಸೂಕ್ತ ಸಂಭಾವ್ಯ ಆಟಗಾರರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ನಾನು ಭಾರತೀಯ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥನಾಗಿದ್ದರೆ ಧೋನಿಯನ್ನು ಟಿ20 ವಿಶ್ವಕಪ್‌ಗೆ ಆಯ್ಕೆ ಮಾಡುತ್ತಿರಲಿಲ್ಲ ಎಂದು ಆಯ್ಕೆ ಸಮಿತಿಯ ಮಾಜಿ ಪ್ರಧಾನ ಮುಖ್ಯಸ್ಥ ಕೃಷ್ಣಮಾಚಾರಿ ಶ್ರೀಕಾಂತ್ ಅಭಿಪ್ರಾಯ ಪಟ್ಟಿದ್ದಾರೆ. ಸದ್ಯದ ಮಟ್ಟಿಗೆ ಟೀಮ್ ಇಂಡಿಯಾದ ವಿಕೆಟ್ ಕೀಪಿಂಗ್‌ಗೆ ಕೆ.ಎಲ್. ರಾಹುಲ್ ಸೂಕ್ತ ಆಟಗಾರ. ಕಳೆದ ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಯಲ್ಲಿ ರಾಹುಲ್ ಉತ್ತಮವಾಗಿ ಕೀಪಿಂಗ್ ನಡೆಸಿದ್ದಾರೆ. ಆದ್ದರಿಂದ ಅವರನ್ನು ನಾನು ಆಯ್ಕೆ ಮಾಡುವೆ. ಉಳಿದಂತೆ ರಿಷಭ್ ಪಂತ್ ಅವರಲ್ಲಿ ಅಪಾರ ಪ್ರತಿಭೆ ಇದೆ. ಅವರನ್ನು ಕಡೆಗಣಿಸಲು ಸಾಧ್ಯವಿಲ್ಲ. ಆದರೆ ಅವರನ್ನು ತಂಡದ ಒಂದು ಭಾಗವಾಗಿ ಆಯ್ಕೆಮಾಡಿದರೂ ಕೀಪಿಂಗ್ ಜವಾಬ್ದಾರಿಯನ್ನು ರಾಹುಲ್‌ಗೆ ವಹಿಸಲಿದ್ದೇನೆ ಎಂದು ಅವರು ಹೇಳಿದ್ದಾರೆ.
Related Articles
Advertisement