Advertisement

ಆಸೀಸ್‌ ಸರಣಿಗೂ ಮುನ್ನ  ಫ‌ುಟ್‌ಬಾಲ್‌ ಆಡಿದ ಧೋನಿ

05:12 AM Feb 20, 2019 | |

ಮುಂಬಯಿ: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂ.ಎಸ್‌. ಧೋನಿ ಮುಂಬರುವ ಆಸ್ಟ್ರೇಲಿಯ ಸರಣಿಗೂ ಮೊದಲು ಮುಂಬಯಿಯಲ್ಲಿ ಚಾರಿಟಿ ಫ‌ುಟ್‌ಬಾಲ್‌ ಕೂಟವೊಂದರಲ್ಲಿ ಪಾಲ್ಗೊಂಡಿದ್ದಾರೆ. ಬಾಲಿವುಡ್‌ ತಾರೆಯರು ಮತ್ತು ಫ‌ುಟ್‌ಬಾಲ್‌ ತಾರೆಯರ ನಡುವೆ ನಡೆದ ಈ ಪಂದ್ಯದಲ್ಲಿ ಧೋನಿ ಕೂಡ ಭಾಗವಹಿಸಿ ಗಮನ ಸೆಳೆದರು.

Advertisement

ಬಾಲಿವುಡ್‌ ತಾರೆಯರಾದ ದಿನು ಮೊರಿಯ, ಅಪರಶಕ್ತಿ ಖುರಾನ, ನಟ-ರೂಪದರ್ಶಿ ಮಾರ್ಕ್‌ ರಾಬಿನ್ಸನ್‌ ದಿಗ್ಗಜ ಕ್ರಿಕೆಟಿಗನ ಜತೆಗೆ ಆಡಿ ಖುಷಿಪಟ್ಟರು. ಧೋನಿ ಆಗಮಿಸುತ್ತಿದ್ದಂತೆ ಕ್ರೀಡಾಂಗಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದರು. ಫೋಟೋ ತೆಗೆಸಿಕೊಳ್ಳಲು ಮುಗಿಬಿದ್ದರು. ಒಂದು ಹಂತದಲ್ಲಿ ಜನರನ್ನು ನಿಯಂತ್ರಿಸುವುದು ಭದ್ರತಾ ಪಡೆಗಳಿಗೆ ಭಾರೀ ಸವಾಲಿನ ಕೆಲಸವಾಯಿತು. ಫೆ. 24ರಿಂದ ಭಾರತ-ಆಸ್ಟ್ರೇ ಲಿಯ ನಡುವಿನ ಟಿ20 ಸರಣಿ ಆರಂಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next