Advertisement
ಸೈನಿಕರ ಸಮವಸ್ತ್ರದಲ್ಲಿ ಧೋನಿ ಪ್ರತ್ಯಕ್ಷಒಂದು ಕಡೆ ಭಾರತ-ಶ್ರೀಲಂಕಾ ನಡುವೆಭಾರತ ಆತಿಥ್ಯದಲ್ಲಿ ಟೆಸ್ಟ್ ಸರಣಿ ನಡೆಯು ತ್ತಿದೆ. ಧೋನಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿರುವುದರಿಂದ ವಿಶ್ರಾಂತಿಯಲ್ಲಿದ್ದಾರೆ. ಹಾಗಂತ ನೋಡಿದರೆ ಧೋನಿ ವಿಶ್ರಾಂತಿ ತೆಗೆದು ಕೊಂಡಿಲ್ಲ!, ಶ್ರೀನಗರ, ಜಮ್ಮು-ಕಾಶ್ಮೀರದಲ್ಲಿ ಸೈನಿಕ ಸಮವಸ್ತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಸೈನಿಕ ಶಾಲೆ ಹಾಗೂ ಸೈನಿಕರಲ್ಲಿಗೆ ತೆರಳಿದ್ದಾರೆ. ಮುಕ್ತವಾಗಿ ಮಾತನಾಡಿದ್ದಾರೆ. ಕೆಲ ಹೊತ್ತು ಕಳೆದಿದ್ದಾರೆ.
ಧೋನಿ ಶ್ರೀನಗರದ ಚಿನ್ನಾರ್‌ನಲ್ಲಿರುವ ಸೈನಿಕ ಶಾಲೆಗೆ ಎರಡು ವಾರಗಳ ಹಿಂದೆ ಹಠಾತ್ ಬೇಟಿ ನೀಡಿದ್ದಾರೆ. ಧೋನಿ ಆ ಶಾಲೆಗೆ ಆಗಮಿಸುತ್ತಾರೆ ಎನ್ನುವುದು ಯಾರಿಗೂ ಗೊತ್ತಿರಲಿಲ್ಲ. ಧೋನಿಯನ್ನು ಕಂಡ ಮಕ್ಕಳು ಫುಲ್ ಖುಷಿಗೊಂಡರು. ಎಲ್ಲರೊಂದಿಗೂ ಧೋನಿ ಬೆರೆತರು. ತಾಳ್ಮೆಯಿಂದ ಆಟೋಗ್ರಾಫ್ ನೀಡಿದರು. ಸೆಲ್ಫಿà ತೆಗೆದುಕೊಂಡರು. ಇದೇ ವೇಳೆ ಧೋನಿ ಮಕ್ಕಳಿಗೆ ಶಿಕ್ಷಣದ ಮಹತ್ವದ ಬಗ್ಗೆ ಪಾಠ ಮಾಡಿದರು. ದೇಶಕ್ಕಾಗಿ ಸಾಧನೆ ಮಾಡಬೇಕು. ಎಲ್ಲರೂ ಗುರುತಿಸುವಂತಹ ಕೆಲಸವನ್ನು ಮಾಡಿ ತಂದೆ-ತಾಯಿಗೆ, ದೇಶಕ್ಕೆ ಒಳ್ಳೆ ಹೆಸರು ಬರುವಂತಹ ಕಾರ್ಯವನ್ನು ಮಾಡಿ ಎಂದು ಕಿವಿಮಾತು ಹೇಳಿದರು. ಅಫ್ರಿದಿಗೆ ಜೈಕಾರ: ತಾಳ್ಮೆ ಕಳೆದುಕೊಳ್ಳದ ಧೋನಿ
ಧೋನಿ ಸದಾ ಕೂಲ್. ಎಲ್ಲಿಯೂ ತಾಳ್ಮೆ ಕಳೆದು ಕೊಳ್ಳುವುದಿಲ್ಲ. ಜಮ್ಮು-ಕಾಶ್ಮೀರಕ್ಕೆ ಭೇಟಿ ಕೊಟ್ಟಾಗ ಇವರು ತಾಳ್ಮೆ ಪ್ರದರ್ಶಿಸಿ ಮತ್ತೂಮ್ಮ ತಾನು ಕೂಲ್ ಕ್ಯಾಪ್ಟನ್ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಧೋನಿ ಆಗಮಿಸಿದ ವೇಳೆ ಕೆಲ ಕಿಡಿಗೇಡಿಗಳು “ಅಫ್ರಿದಿ…ಅಫ್ರಿದಿ’ ಎಂದು ಕೂಗಿದರು. ಭಾರತ ಸೈನಿಕರು ಈ ವೇಳೆ ಅವರನ್ನೆಲ್ಲ ತಡೆದು ಧೋನಿ ಆಗಮನಕ್ಕೆ ದಾರಿ ಮಾಡಿಕೊಟ್ಟರು. ಕೆಲವರು “ಬೂಮ್….ಬೂಮ್ ಅಫ್ರಿದಿ’ ಎಂದರು, ಆಗ ಕೂಡ ಧೋನಿ ತಾಳ್ಮೆಯಿಂದಲೇ ಇದ್ದರು.
Related Articles
36 ವರ್ಷದ ಧೋನಿ ಜಮ್ಮು-ಕಾಶ್ಮೀರದಲ್ಲಿ ಸ್ಥಳೀಯ ಕ್ರಿಕೆಟ್ ಪಂದ್ಯದ ಫೈನಲ್ ವೀಕ್ಷಿ$ಸಿದರು. ಇದೇ ವೇಳೆ ಅವರು ಸೈನಿಕರ ಜತೆ ಸಮಾಲೋಚನೆ ನಡೆಸಿದರು. ಸೈನಿಕರ ಕಾರ್ಯವೈಖರಿ ಬಗ್ಗೆ ಖುದ್ದಾಗಿ ಅನುಭವ ಪಡೆದುಕೊಂಡರು.
Advertisement
ಹೇಮಂತ್ ಸಂಪಾಜೆ