Advertisement
‘ ಧೋನಿ ಕ್ರಿಕೆಟ್ ನಡೆಗಳಲ್ಲಿ ಬಹಳ ಜಾಣ. ವಿಶ್ವ ದರ್ಜೆಯ ವಿಕೆಟ್ ಕೀಪರ್ ಧೋನಿ ವಿಕೆಟ್ ಹಿಂದೆ ನಿಂತು ತಂಡವನ್ನು ನಿಯಂತ್ರಿಸಬಲ್ಲ ಆಟಗಾರ. ಧೋನಿ ಒಬ್ಬ ಅದ್ಭುತ ನಾಯಕ. ವಿಶ್ವಕಪ್ ತಂಡದಲ್ಲಿ ಧೋನಿ ಇದ್ದರೆ ಇದರಿಂದ ವಿರಾಟ್ ಕೊಹ್ಲಿಗೆ ತುಂಬಾ ಸಹಾಯವಾಗುತ್ತದೆ ಎಂದು ಯುವರಾಜ್ ಮಾತನಾಡಿದ್ದಾರೆ.
ವಿಶ್ವಕಪ್ ತಂಡದಲ್ಲಿ ಧೋನಿ ಇರಬೇಕೇ ಎಂಬ ಕೆಲವು ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳುತ್ತಿರುವುದರಿಂದ ಯುವರಾಜ್ ಈ ಮಾತುಗಳು ಮಹತ್ವ ಪಡೆದಿದೆ. ನಿಗದಿತ ಓವರ್ ಕ್ರಿಕೆಟ್ ನಲ್ಲಿ ಧೋನಿಯ ರನ್ ಗಳಿಸುವ ವೇಗ ಕಡಿಮೆಯಾಗಿದೆ ಹಾಗಾಗಿ ಧೋನಿ ಬದಲಿಗೆ ಯುವ ಆಟಗಾರರಿಗೆ ಅವಕಾಶ ನಿಡಬೇಕು ಎಂದು ಹಲವು ಮಾಜಿ ಆಟಗಾರರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ವಿಶ್ವಕಪ್ ನಲ್ಲಿ ತಂಡದ ಮಹತ್ವದ ನಿರ್ಧಾರ ತೆಗೆದುಕೊಳ್ಳುವಾಗ ಧೋನಿ ಪಾತ್ರ ಮಹತ್ವವಾಗುತ್ತದೆ. ಇತ್ತೀಚೆಗೆ ನಡೆದ ಆಸೀಸ್ ವಿರುದ್ಧದ ಧೋನಿ ಉತ್ತಮವಾಗಿ ಆಡಿದರು. ವಿಶ್ವಕಪ್ ಗಾಗಿ ನಾನು ಅವರಿಗೆ ಶುಭ ಹಾರೈಸುತ್ತೇನೆ ಎಂದು 37 ರ ಹರೆಯದ ಎಡಗೈ ಆಟಗಾರ ಹೇಳಿದರು.
Related Articles
ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಯ್ಕೆಯಾಗಿರುವ ಯುವಿ, ನಾನು ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ನೆರವಾಗಬಲ್ಲೆ. ಇದರಿಂದಾಗಿ ನಾಯಕ ರೋಹಿತ್ ಶರ್ಮಾಗೆ ಅನುಕೂಲವಾಗಬಹುದು ಮತ್ತು ಶರ್ಮಾ ಯಾವುದೇ ಒತ್ತಡವಿಲ್ಲದೆ ತನ್ನ ನೈಜ ಆಟ ಆಡಬಹುದು ಎಂದಿದ್ದಾರೆ.
Advertisement
2015 ರ ವಿಶ್ವಕಪ್ ನ ಸೆಮಿ ಫೈನಲ್ ನಲ್ಲಿ ಸೋಲುಂಡಿದ್ದ ಭಾರತ ಇದೇ ಬರುವ ಮೇ ಅಂತ್ಯದಲ್ಲಿ ಇಂಗ್ಲೆಂಡ್ ನಲ್ಲಿ ನಡೆಯಲಿರುವ ವಿಶ್ವಕಪ್ ಮೇಲೆ ಕಣ್ಣಿಟ್ಟಿದೆ. 2011ರ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಮಾತ್ರ ತಂಡಕ್ಕೆ ಆಯ್ಕೆಯಾಗುವುದು ಅನುಮಾನ ಎನ್ನಲಾಗಿದೆ.