Advertisement

ಧೋನಿ ಆಟಕ್ಕೆ ಮಾಜಿಗಳ ಟೀಕೆ; ಕೊಹ್ಲಿ ಬೆಂಬಲ

01:45 AM Jul 02, 2019 | Team Udayavani |

ಬರ್ಮಿಂಗ್‌ಹ್ಯಾಮ್‌: ಇಂಗ್ಲೆಂಡ್‌ ವಿರುದ್ಧದ ಮಹತ್ವದ ಪಂದ್ಯದ ವೇಳೆ ಧೋನಿ ಅವರ ಬ್ಯಾಟಿಂಗ್‌ ವೈಖರಿಯನ್ನು ಮಾಜಿ ಕ್ರಿಕೆಟಿಗರು ಟೀಕಿಸಿದ್ದಾರೆ. ಆದರೆ ನಾಯಕ ವಿರಾಟ್ ಕೊಹ್ಲಿ ಮಾತ್ರ ಧೋನಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಗೆಲ್ಲಲು 338 ರನ್‌ ಗಳಿಸುವ ಗುರಿ ಪಡೆದ ಭಾರತವು 5 ವಿಕೆಟಿಗೆ 306 ರನ್‌ ಗಳಿಸಲಷ್ಟೇ ಶಕ್ತವಾಗಿತ್ತು. ಕೊನೆಯ 5 ಓವರ್‌ಗಳಲ್ಲಿ ಭಾರತ ಗೆಲ್ಲಲು 71 ರನ್‌ ಗಳಿಸಬೇಕಿತ್ತು. ಕ್ರೀಸ್‌ನಲ್ಲಿದ್ದ ಧೋನಿ ಸ್ಫೋಟಕ ಆಟಕ್ಕೆ ಮುಂದಾಗದೇ 31 ಎಸೆತಗಳಿಂದ 42 ರನ್‌ ಗಳಿಸಿ ಅಜೇಯರಾಗಿ ಉಳಿದರು.

Advertisement

ಗಂಗೂಲಿ, ಹುಸೇನ್‌ ಪ್ರಶ್ನೆ
ಧೋನಿ ಬ್ಯಾಟಿಂಗ್‌ ವೈಖರಿಯನ್ನು ಮಾಜಿ ನಾಯಕ ಸೌರವ್‌ ಗಂಗೂಲಿ ಪ್ರಶ್ನಿಸಿದ್ದಾರೆ. ‘ಇದು ನಮ್ಮ ಮನಃಸ್ಥಿತಿಯನ್ನು ಮತ್ತು ಪಂದ್ಯವನ್ನು ಹೇಗೆ ನೋಡುತ್ತೀರಿ ಎಂಬುದನ್ನು ಹೊಂದಿ ಕೊಂಡಿರುತ್ತದೆ. ಗುರಿ ಸಿಕ್ಕಿದ ಮೇಲೆ ಸಂದೇಶ ಸ್ಪಷ್ಟವಾ ಗಿತ್ತು. ಹಾಗಾಗಿ ಚೆಂಡು ಎಲ್ಲಿ ಮತ್ತು ಹೇಗೆ ಬಂತೋ ಅದನ್ನು ಬೌಂಡರಿಗಟ್ಟಲು ಪ್ರಯತ್ನಿಸಬೇಕಿತ್ತು’ ಎಂದಿದ್ದಾರೆ.

‘ಭಾರತದ ಆಟದಿಂದ ಅಭಿಮಾನಿಗಳಿಗೆ ನಿರಾಶೆಯಾಗಿದೆ. ಧೋನಿ ಅವರಿಂದ ಸ್ಫೋಟಕ ಆಟವನ್ನು ಅಭಿಮಾನಿಗಳು ನಿರೀಕ್ಷಿಸುತ್ತಿದ್ದರು. ಆದರೆ ಅವರು ಸಿಂಗಲ್ ಮತ್ತು ಅವಳಿ ರನ್ನಿಗೆ ಹೆಚ್ಚಿನ ಗಮನ ನೀಡಿದರು’ ಎಂಬುದು ಇಂಗ್ಲೆಂಡಿನ ಮಾಜಿ ನಾಯಕ ನಾಸೆರ್‌ ಹುಸೇನ್‌ ಅಭಿಪ್ರಾಯ.

ಇಂಗ್ಲೆಂಡ್‌ ಮಾತ್ರ ಸಮರ್ಥ
‘ಭಾರತೀಯ ವಿಜಯದ ಓಟವನ್ನು ತಡೆಗಟ್ಟಲು ಇಂಗ್ಲೆಂಡಿಗೆ ಮಾತ್ರ ಸಾಮರ್ಥ್ಯವಿದೆ ಎಂಬುದು ಸಾಬೀತಾಯಿತು. ಕೊನೆಯ ಕೆಲವು ಓವರ್‌ಗಳಲ್ಲಿ ಧೋನಿ ಅವರ ಆಟ ಆಶ್ಚರ್ಯವನ್ನುಂಟು ಮಾಡಿತು’ ಎಂದು ಸಂಜಯ್‌ ಮಾಂಜ್ರೇಕರ್‌ ಟ್ವೀಟ್ ಮಾಡಿದ್ದಾರೆ.

ಪಿಚ್ ನಿಧಾನ ಗತಿಯಲ್ಲಿತ್ತು
ಧೋನಿ ಆಟವನ್ನು ಟೀಕಿಸುತ್ತಿದ್ದರೂ ಕೊಹ್ಲಿ ಮಾತ್ರ ಬೆಂಬಲಕ್ಕೆ ನಿಂತಿದ್ದಾರೆ. ಪಂದ್ಯದ ಕೊನೆ ಹಂತದಲ್ಲಿ ಪಿಚ್ ನಿಧಾನ ಗತಿಯಲ್ಲಿ ಇತ್ತು. ಇದರಿಂದ ದೊಡ್ಡ ಹೊಡೆತಗಳಿಗೆ ಕಷ್ಟವಾಗುತ್ತಿತ್ತು ಎಂದಿದ್ದಾರೆ. ಧೋನಿ ಬೌಂಡರಿ ಬಾರಿಸಲು ಬಹಳಷ್ಟು ಪ್ರಯತ್ನ ಪಡುತ್ತಿದ್ದರು. ಆದರೆ ಬರುತ್ತಿರಲಿಲ್ಲ. ಇದೇ ವೇಳೆ ಇಂಗ್ಲೆಂಡ್‌ ಬೌಲರ್‌ಗಳೂ ನಿಖರ ದಾಳಿ ನಡೆಸಿದ್ದರಿಂದ ಬ್ಯಾಟಿಂಗ್‌ ಕಷ್ಟವಾಯಿತು ಎಂಬುದಾಗಿ ಕೊಹ್ಲಿ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next