Advertisement

ಲಂಚದ ಹಣ ಪಡೆಯುವಾಗಲೇ ಎಸಿಬಿ ಬಲೆಗೆ ಬಿದ್ದ ಡಿಎಚ್ಓ ಕಛೇರಿ ವ್ಯವಸ್ಥಾಪಕ ಮನೋಹರ

10:40 PM Jan 27, 2021 | Team Udayavani |

ವಿಜಯಪುರ : ನೌಕರರೊಬ್ಬರ ನೇಮಕ ತಾನೇ ಮಾಡಿಸಿದ್ದಾಗಿ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದ ಡಿಎಚ್ಓ ಕಛೇರಿ ವ್ಯವಸ್ಥಾಪಕ ಲಂಚದ ಹಣ ಪಡೆಯುವಾಗಲೇ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

Advertisement

ವಿಜಯಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ದಂತ ಸಹಾಯಕರಾಗಿ ಸಂತೋಷ ಸದಾಶಿವ ಚಲವಾದಿ ಎಂಬವರು ಆಯ್ಕೆಯಾಗಿದ್ದರು. ಕರ್ತವ್ಯಕ್ಕೆ ಹಾಜರಾಗಿ ವರದಿ ಮಾಡಿಕೊಂಡ ಬಳಿಕ ನಿನ್ನ ನೇಮಕ ನನ್ನಿಂದಲೇ ಆಗಿದ್ದು, ಇದಕ್ಕಾಗಿ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಜಿಲ್ಲಾ ಮಕ್ಕಳ ಮತ್ತು ತಾಯಂದಿರ ಪುನರ್ವಸತಿ ಅಧಿಕಾರಿಗೆ ತಲಾ 15 ಸಾವಿರ ರೂ. ಲಂಚ ಕೊಡಬೇಕು. ಇದಕ್ಕಾಗಿ ಒಟ್ಟು 30 ಸಾವಿರ ರೂ. ಹಣ ನೀಡುವಂತೆ ಆರೋಪಿ ಜಿಲ್ಲಾ ಆರೋಗ್ಯಾಧಿಕಾರಿ ಕಛೇರಿಯ ವ್ಯವಸ್ಥಾಪಕ ಮನೋಹರ ಪಾಟೀಲ ಪದೇ ಪದೇ ಹಣಕ್ಕೆ ಬೇಡಿಕೆ ಇಟ್ಟು ಹಣ ಕೊಡಲು ಪೀಡಿಸುತ್ತಿದ್ದ.

ಇದಲ್ಲದೇ ಸಂತೋಷ ಅವರ ಚಿಕ್ಕಪ್ಪ ಬಾಬಾಸಾಹೇಬ ಅವರಿಗೂ ಒತ್ತಡ ಹೇರುತ್ತಿದ್ದ. ಈ ವಿಷಯ ತಿಳಿದ ಸಂತೋಷ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದು, ಬುಧವಾರ ತಮ್ಮ ಕಛೇರಿಯಲ್ಲಿ ಲಂಚ ಪಡೆಯುತ್ತಿದ್ದಾಗಲೇ ಮನೋಹರ ಹಣದ ಸಮೇತ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ.

ಎಸಿಬಿ ವಿಜಯಪುರ ಡಿಎಸ್ಪಿ ಎಂ.ಕೆ.ಗಂಗಲ್, ಸಿಪಿಐ ಗಳಾದ ಹರಿಶ್ಚಂದ್ರ, ರಮೇಶ್ವರ, ಕವಟಗಿ ನೇತೃತ್ವದಲ್ಲಿ ಅಶೋಕ ಸಿಂಧೂರ, ಸುರೇಶ ಜಾಲಗೇರಿ, ಸದಾಶಿವ ಕೋಟ್ಯಾಳ, ಮಾಳಪ್ಪ ಸಲಗೊಂಡ ಇತರರು ಇದ್ದ ತಂಡ ದಾಳಿ ನಡೆಸಿ, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next