ಉತ್ತರಪ್ರದೇಶ: ಬಲ್ಲಿಯಾ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿ ಧೀರೇಂದ್ರ ಸಿಂಗ್ ನನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಈತನ ಜೊತೆಗೆ ಇತರ ಆರೋಪಿಗಳಾದ ಸಂತೋಷ್ ಯಾದವ್ ಮತ್ತು ಮರಜೀತ್ ಯಾದವ್ ನನ್ನು ಉತ್ತರಪ್ರದೇಶ ವಿಶೇಷ ಪೊಲೀಸ್ ಪಡೆ(ಎಸ್ ಟಿಎಫ್ ) ಲಕ್ನೋದ ಜನೇಶ್ವರ ಮಿಶ್ರಾ ಪಾರ್ಕ್ ನ ಬಳಿ ವಶಕ್ಕೆ ಪಡೆದಿದ್ದಾರೆ.
ಆ ಮೂಲಕ ಬಲ್ಲಿಯಾ ಶೂಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೂ 10 ಮಂದಿಯನ್ನು ಬಂಧಿಸಲಾಗಿದೆ. ಅಕ್ಟೋಬರ್ 16ರಂದು ಪಡಿತರ ಅಂಗಡಿಗಳನ್ನು ಅಧಿಕಾರಿಗಳ ಸುಪರ್ದಿಗೆ ವಹಿಸುವ ಕಾರ್ಯಕ್ರಮವೊಂದರಲ್ಲಿ ಮಾತಿನ ಚಕಮಕಿ ನಡೆದು ಓರ್ವನ ಕೊಲೆಯಲ್ಲಿ ಅಂತ್ಯವಾಗಿತ್ತು.
ಪೊಲೀಸರು ಮತ್ತು ಸ್ಥಳೀಯ ಅಧಿಕಾರಿಗಳ ಸಮ್ಮುಖದಲ್ಲೇ ಬಿಜೆಪಿ ಕಾರ್ಯಕರ್ತ ಧೀರೇಂದ್ರ ಸಿಂಗ್ ಎಂಬಾತ 46 ವರ್ಷದ ಜೈಪ್ರಕಾಶ್ ಎಂಬ ವ್ಯಕ್ತಿಗೆ ಗುಂಡು ಹಾರಿಸಿ ಹತ್ಯೆಗೈದಿದ್ದ. ಈತ ಶಾಸಕ ಸುರೇಂದ್ರ ಸಿಂಗ್ ನಿಕಟವರ್ತಿ ಎಂದು ವರದಿ ನಂತರ ತಿಳಿದುಬಂದಿತ್ತು. ಘಟನೆ ನಡೆದ ಕೂಡಲೇ ಧೀರೇಂದ್ರ ಸಿಂಗ್ ತಲೆಮರೆಸಿಕೊಂಡಿದ್ದ. ಇದಕ್ಕೆ ಸಂಬಂಧಿಸಿದಂತೆ ಸ್ಥಳೀಯ ಅಧಿಕಾರಿಯನ್ನು ಅಮಾನತುಗೊಳಿಸಿ ಮುಖ್ಯಮಂತ್ರಿ ಆದಿತ್ಯನಾಥ್ ಆದೇಶ ಹೊರಡಿಸಿದ್ದರು.
ಇದನ್ನೂ ಓದಿ: ರಂಗೇರಿದ ರಾಜರಾಜೇಶ್ವರಿ ಚುನಾವಣಾ ಕಣ: ಮಾತಿನ ಸಮರದ ನಡುವೆ ಪಕ್ಷಾಂತರ ಪ್ರಹಸನ
ಘಟನೆಯ ಕುರಿತು ಕಾಂಗ್ರೆಸ್ ನಾಯಕ ಪ್ರೀಯಾಂಕ ಗಾಂಧಿ ಕೂಡ ಆಕ್ರೋಶ ವ್ಯಕ್ತಪಡಿಸಿ, ಬಿಜೆಪಿ ಬಲ್ಲಿಯಾ ಶೂಟಿಂಗ್ ಪ್ರಕರಣದ ಆರೋಪಿ ತಪ್ಪಿಸಿಕೊಳ್ಳಲು ನೆರವಾಗುತ್ತಿದೆ ಎಂದು ಕಿಡಿಕಾರಿದ್ದರು.
ಇದನ್ನೂ ಓದಿ: ಅ.21ರಂದು ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಬಿಎಸ್ ವೈ ವೈಮಾನಿಕ ಸಮೀಕ್ಷೆ