Advertisement

Paris Olympics; ನೀರಿಗಿಳಿಯಲು ಹೆದರುತ್ತಿದ್ದ ಧಿನಿಧಿ ಈಗ ಒಲಿಂಪಿಕ್ಸ್‌ನಲ್ಲಿ ಈಜುಪಟು!

04:20 PM Jul 25, 2024 | Team Udayavani |

ನವದೆಹಲಿ: ಪ್ರತಿಷ್ಠಿತ ಪ್ಯಾರಿಸ್‌ ಒಲಿಂಪಿಕ್ಸ್‌ ನಲ್ಲಿ ಭಾರತಕ್ಕೆ ಪದಕ ಗೆಲ್ಲಲು ಕನ್ನಡತಿ ಈಜುಗಾರ್ತಿ ಧಿನಿಧಿ ದೇಸಿಂಗೂ ಸಿದ್ಧರಾಗಿದ್ದಾರೆ. ಆದರೆ ಇದೇ ಧಿನಿಧಿ, ಹಿಂದೆ ನೀರಿಗಿಳಿಯಲು ಅಂಜುತ್ತಿದ್ದರು ಎಂಬ ಅಚ್ಚರಿಯ ಸಂಗತಿ ಬಹಿರಂಗಗೊಂಡಿದೆ. ಈ ವಿಚಾರವನ್ನು ಸ್ವತಃ ಧಿನಿಧಿಯೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

Advertisement

14 ವರ್ಷದ ಧಿನಿಧಿ, ಈಜಿನಲ್ಲಿ ಆಸಕ್ತಿ ಬೆಳೆದ ಬಗ್ಗೆ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ನೀರಿಗೆ ಕಾಲು ತಾಗಿಸಲು ಹೆದರು ತ್ತಿದ್ದ ಸಂಕೋಚದ ಹುಡುಗಿ, ಒಲಿಂಪಿಕ್ಸ್‌ಗೆ ಆಯ್ಕೆಯಾಗುವಲ್ಲಿಗೆ ಬೆಳೆದು ನಿಂತ ಅವರ ಕತೆಯೇ ಸ್ಫೂರ್ತಿದಾಯಕ.

ನೀರೆಂದರೆ ಇಷ್ಟವಿರಲಿಲ್ಲ: ಬಾಲ್ಯದ ದಿನಗಳನ್ನು ನೆನಪಿಸಿಕೊಂಡೊಡಿರುವ ಧಿನಿಧಿ, ನನಗೆ ನೀರೆಂದರೇನೇ ಇಷ್ಟವಾಗುತ್ತಿರಲಿಲ್ಲ. ನೀರಿಗಿಳಿಯಲು ನನ್ನಿಂದ ಆಗುತ್ತಿರಲಿಲ್ಲ. ಸ್ವಿಮ್ಮಿಂಗ್‌ ಪೂಲ್‌ಗೆ ಕಾಲಿಡಲು ಭಯವಾಗಿ ಪರದಾಡುತ್ತಿದ್ದೆ. ಆದರೆ ನಾನು ಈಜು ಕಲಿತಿದ್ದೇ ನನ್ನ ಹೆತ್ತವರಿಂದ. ನನ್ನನ್ನು ಸಮಾಧಾನ ಗೊಳಿಸಲು ಅವರೇ ಈಜುಕೊಳಕ್ಕಿಳಿಯುತ್ತಿದ್ದರು. ಬಳಿಕ ನಾನು ಈಜಲು ಕಲಿತೆ ಎಂದಿದ್ದಾರೆ.

Advertisement

ಹೆಚ್ಚು ಮಾತನಾಡದ ಹುಡುಗಿ: 3 ವರ್ಷ ತುಂಬುವವರೆಗೂ ಧೀನಿಧಿಗೆ ಸರಿಯಾಗಿ ಮಾತನಾಡಲು ಆಗುತ್ತಿರಲಿಲ್ಲ. ಆ ಬಳಿಕ ಕೂಡ ಇತರರೊಂದಿಗೆ ಮಾತ ನಾಡಲು, ಬೆರೆಯಲು ಧಿನಿಧಿ ಸಂಕೋಚ ಪಡುತ್ತಿದ್ದರಂತೆ. ಇದೇ ಕಾರಣಕ್ಕೆ, ಧಿನಿಧಿಯ ಸ್ವಭಾವ ಬದಲಾಯಿಸಲು ಯೋಚಿಸಿದ ಹೆತ್ತವರು, ಅವರನ್ನು ಈಜು ಕ್ರೀಡೆಗೆ ಪರಿಚಯಿಸದರಂತೆ.

ಧಿನಿಧಿ ಹೆಸರಲ್ಲಿ ರಾಷ್ಟ್ರೀಯ ದಾಖಲೆ: ಈಜಿನಲ್ಲಿ ಅಪ್ರತಿಮ ಪ್ರತಿಭೆಯಾಗಿರುವ ಧಿನಿಧಿ, ನ್ಯಾಷನಲ್‌ ಗೇಮ್ಸ್‌ನಲ್ಲಿ 7 ಚಿನ್ನದ ಪದಕಗಳನ್ನು ಗೆದ್ದ ಸಾಧನೆ ಹೊಂದಿದ್ದಾರೆ. ಮಹಿಳೆಯರ 200 ಮೀ. ಫ್ರೀಸ್ಟೈಲ್‌ ನಲ್ಲಿ ರಾಷ್ಟ್ರೀಯ ದಾಖಲೆ (2:04.24) ಹೊಂದಿರುವ ಅವರು, 2022ರ ಹಾಂಗ್‌ಝೌ ಏಷ್ಯನ್‌ ಗೇಮ್ಸ್‌ನಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next