“ಧೀರನ್’ – ನೀವು ಈ ಸಿನಿಮಾದ ಹೆಸರು ಕೇಳಿರಬಹುದು. ಈಗ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಮೊದಲ ಹಂತವಾಗಿ ಚಿತ್ರತಂಡ ಚಿತ್ರದ ಫಸ್ಟ್‌ಲುಕ್ ಬಿಡುಗಡೆ ಮಾಡಿದೆ. ನಿರ್ದೇಶಕ ಸಿಂಪಲ್ ಸುನಿ ಫಸ್ಟ್‌ಲುಕ್ ರಿಲೀಸ್ ಮಾಡಿ, ಶುಭಕೋರಿದ್ದಾರೆ.
ಈ ಚಿತ್ರದ ಮೂಲಕ ವೈ.ಬಿ.ಎನ್.ಸ್ವಾಮಿ ನಿರ್ದೇಶಕರಾಗಿದ್ದಾರೆ. ಜರ್ನಿಯಲ್ಲಿ ನಡೆಯುವ ಕಳ್ಳ ಪೊಲೀಸ್, ಕಳ್ಳ-ಕಳ್ಳ ಹಾಗೂ ಪೊಲೀಸ್- ಪೊಲೀಸ್ ಆಟ… ಹೀಗೆ 3 ಆಯಾಮಗಳಲ್ಲಿ ಧೀರನ್ ಕಥೆ ಹೇಳಿದ್ದಾರಂತೆ. ಇದರ ಜೊತೆಗೆ ಚಿತ್ರದಲ್ಲಿ ಲವ್‌ಸ್ಟೋರಿ ಯನ್ನು ಬೆಸೆದಿದ್ದಾರೆ. ಚಿತ್ರದಲ್ಲಿ ನಿರ್ದೇಶನದ ಜೊತೆಗೆ ನಾಯಕರಾಗಿಯೂ ನಟಿಸಿರುವ ಸ್ವಾಮಿ, ” ಇದು ಚಿತ್ರಕಥೆಯ ಮೇಲೆ ನಿಂತಿರುವ ಸಿನಿಮಾ, ಚಿತ್ರಕ್ಕೆ ಮಾಸ್ತಿ ಉತ್ತಮ ಡೈಲಾಗ್ ಬರೆದಿದ್ದಾರೆ.
5 ಪಾತ್ರಗಳ ಜರ್ನಿ ಮೂಲಕ ಕಥೆ ಆರಂಭವಾಗುವ ಕಥೆಯಲ್ಲಿ ಯಾರು ಗೆಳೆಯರು, ಯಾರು ವಿಲನ್‌ಗಳು ಎಂಬುದೇ ಗೊತ್ತಾಗುವುದಿಲ್ಲ. ಚಿತ್ರ ನೋಡಿದ ಮೇಲೆ ಜನ ಸಂಗೀತ, ಛಾಯಾಗ್ರಹಣದ ವಿಶೇಷತೆ ಬಗ್ಗೆ ಖಂಡಿತ ಮಾತನಾಡುತ್ತಾರೆ. ಧೀರನ್ ಒಂದೊಳ್ಳೆ ಸಿನಿಮಾ ಆಗುತ್ತದೆ. ಎಲ್ಲಾ ವರ್ಗದ ಪ್ರೇಕ್ಷಕರಿಗೂ ನಮ್ಮಚಿತ್ರ ಇಷ್ಟವಾಗುತ್ತದೆ. ನಾವು ಹೊಸಬರಾದರೂ ಅಚ್ಚುಕಟ್ಟಾಗಿ ಸಿನಿಮಾ ಮಾಡಿದ್ದೇವೆ. ಈಗಾಗಲೇ ಚಿತ್ರದ ಸೆನ್ಸಾರ್ ಮುಗಿದಿದ್ದು, ಸದ್ಯದಲ್ಲೇ ಪ್ರೇಕ್ಷಕರ ಮುಂದೆ ಬರುತ್ತೇವೆ’ ಎಂದರು. ಚಿತ್ರದಲ್ಲಿ ಮಿಮಿಕ್ರಿ ದಯಾನಂದ್ ಕೂಡಾ ನಟಿಸಿದ್ದಾರೆ.
ಇದನ್ನೂ ಓದಿ: ಅವತಾರದಲ್ಲಿ ತಾರಾ ದಂಡು
” ಈ ಸಿನಿಮಾ ಶುರುವಾದಾಗಿನಿಂದಲೂ ಚಿತ್ರತಂಡದ ಜೊತೆ ಇರುವ ನಾನು ಚಿತ್ರದಲ್ಲಿ ತಾತನಾಗಿ ಕಾಣಿಸಿಕೊಂಡಿದ್ದೇನೆ. ಚಿತ್ರದಲ್ಲಿ ಸಾಕಷ್ಟು ಹೊಸ ಕಲಾವಿದರಿದ್ದು, ಹೊಸಬರು ಬೆಳೆದಾಗ ಚಿತ್ರರಂಗ ಬೆಳೆಯುತ್ತದೆ’ ಎಂದರು. ಮಂಗಳೂರು ಮೂಲದ ನಟಿ ಲಕ್ಷಾ ಶೆಟ್ಟಿ ಈ ಚಿತ್ರದಲ್ಲಿ ನಾಯಕಿ ಯಾಗಿ ಕಾಣಿಸಿಕೊಂಡಿದ್ದು, ಇದು ನನ್ನ 2ನೇ ಚಿತ್ರ. ಕಥೆಯಲ್ಲಿ ಬರುವ ಚಿಕ್ಕ ಲವ್‌ಸ್ಟೋರಿಯಲ್ಲಿ ನಾನು ಕಾಣಿಸಿಕೊಳ್ಳುತ್ತೇನೆ ಎಂದು ಹೇಳಿದರು.
ಬೆಂಗಳೂರು, ಸಕಲೇಶಪುರ, ಕುಂದಾಪುರ, ಮಂಗಳೂರು, ಹಿರಿಯೂರು, ದಾವಣಗೆರೆ, ಮೈಸೂರು ಮುಂತಾದ ಕಡೆ ಚಿತ್ರದ ಶೂಟಿಂಗ್ ನಡೆಸಲಾಗಿದೆ. ಚಿತ್ರದ ಇತರೆ ತಾರಾಗಣ ದಲ್ಲಿ ಭಾಸ್ಕರ್, ಪ್ರಮೋದ್ ಶೆಟ್ಟಿ ರಘು ಪಾಂಡೇಶ್ವರ್, ತೇಜಸ್ವಿನಿ ಪ್ರಕಾಶ್, ವಿದ್ಯಾಮೂರ್ತಿ, ವೀಣಾಸುಂದರ್ ಮುಂತಾದವರಿದ್ದಾರೆ. ಈ ಚಿತ್ರವನ್ನು ಡಯಾಸ್ ಎಂಟರ್‌ಟೈನ್ಮೆಂಟ್ ಅಡಿಯಲ್ಲಿ ಧೀರನ್ ಸಿನಿ ಸರ್ವೀ ಸಸ್ ಬ್ಯಾನರ್ ಮೂಲಕ ನಿರ್ಮಿಸಲಾಗಿದೆ.