Advertisement

Bank Of Bhagyalakshmi: ಬ್ಯಾಂಕ್‌ನತ್ತ ದೀಕ್ಷಿತ್‌ ಚಿತ್ತ

04:12 PM May 21, 2024 | Team Udayavani |

ಸದ್ಯ ವಿಭಿನ್ನ ಕಥಾಹಂದರವೊಂದಿರುವ ಸಿನಿಮಾಗಳ ಮೂಲಕ ಚಿತ್ರರಂಗದಲ್ಲಿ ನೆಲೆಕಂಡುಕೊಳ್ಳುತಿರುವ ನಟ ದೀಕ್ಷಿತ್‌ ಶೆಟ್ಟಿ ನಟನೆಯ ಮತ್ತೊಂದು ಚಿತ್ರ ಬಿಡುಗಡೆಯ ತಯಾರಿಯಲ್ಲಿದೆ. ಅದು “ಬ್ಯಾಂಕ್‌ ಆಫ್ ಭಾಗ್ಯಲಕ್ಷ್ಮೀ’.

Advertisement

ಇತ್ತೀಚೆಗೆ ಈ ಚಿತ್ರದ ಪೋಸ್ಟರ್‌ ಬಿಡುಗಡೆಯಾಗಿದೆ. “ರಂಗಿತರಂಗ’, “ಅವನೇ ಶ್ರೀಮನ್ನಾರಾಯಣ’ ಸಿನಿಮಾ ನಿರ್ಮಾಣ ಮಾಡಿರುವ ಹೆಚ್‌.ಕೆ ಪ್ರಕಾಶ್‌ ಈ ಸಿನಿಮಾದ ನಿರ್ಮಾಪಕರು.

ಬೃಂದಾ ಆಚಾರ್ಯ ಈ ಚಿತ್ರದ ನಾಯಕಿ. ಪ್ರೇಮಂ ಪೂಜ್ಯಂ ಹಾಗೂ ಕೌಸಲ್ಯ ಸುಪ್ರಜಾ ಯಶಸ್ಸಿನ ಬಳಿಕ ಬೃಂದಾ ಆಚಾರ್ಯ ಸನ್‌ ಆಫ್ ಸತ್ಯಮೂರ್ತಿ ಚಿತ್ರದಲ್ಲಿ ಬಿಝಿ ಆಗಿದ್ದಾರೆ.

ಚಿತ್ರಕ್ಕೆ ನವ ನಿರ್ದೇಶಕ ಅಭಿಷೇಕ ಎಂ. ಅವರ ನಿರ್ದೇಶನವಿದೆ. ನಿರ್ದೇಶಕ ಸಿಂಪಲ್‌ ಸುನಿ ಜೊತೆ “ಸಿಂಪಲ್‌ ಆಗಿ ಒಂದ್‌ ಲವ್‌ ಸ್ಟೋರಿ’, “ಬಹುಪರಾಕ್‌’ ಮತ್ತು “ಆಪರೇಷನ್‌ ಅಲಮೇಲಮ್ಮ’ ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ ಹಾಗೂ ಕೆಲವು ಸಿನಿಮಾಗಳಿಗೆ ಸಂಕಲನ ಮಾಡಿದ ಅನುಭವ ಇವರಿಗಿದೆ.

ಈಗ ಅಭಿಷೇಕ್‌ “ಬ್ಯಾಂಕ್‌ ಆಫ್ ಭಾಗ್ಯಲಕ್ಷ್ಮೀ’ ಮೂಲಕ ಚೊಚ್ಚಲ ಬಾರಿ ನಿರ್ದೇಶನಕ್ಕೆ ಇಳಿದಿದ್ದಾರೆ

Advertisement

ಬ್ಯಾಂಕ್‌ವೊಂದನ್ನು ದರೋಡೆ ಮಾಡಲು ಹೊರಟವರ ಸುತ್ತ ಹೆಣೆಯಲಾದ ಹಾಸ್ಯ ಪ್ರಧಾನ ಕಥಾಹಂದರ ಈ ಚಿತ್ರ ಒಳಗೊಂಡಿದೆ. ಚಿತ್ರದಲ್ಲಿ ಸಾಧುಕೋಕಿಲ, ಗೋಪಾಲ ಕೃಷ್ಣ ದೇಶಪಾಂಡೆ,ಉಷಾ ಭಂಡಾರಿ, ಭರತ್‌, ವಿಶ್ವನಾಥ್‌, ಹರೀಶ್‌ ಸಮಷ್ಟಿ, ಅಶ್ವಿ‌ನ್‌ ರಾವ್‌ ಪಲ್ಲಕ್ಕಿ, ಶ್ರೇಯಸ್‌ ಶರ್ಮಾ, ಶ್ರೀವತ್ಸ, ವಿನುತ್‌ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.

ಬೆಂಗಳೂರು, ತುಮಕೂರು ಹಾಗೂ ಚಿತ್ರದುರ್ಗ ಸುತ್ತ ಶೇ 80ರಷ್ಟು ಚಿತ್ರೀಕರಣ ಮುಗಿದಿದೆ. ಮುಂದಿನ ತಿಂಗಳಿನೊಳಗೆ ಚಿತ್ರೀಕರಣ ಮುಕ್ತಾಯವಾಗಲಿದೆ. ಈ ಚಿತ್ರವನ್ನು ಕನ್ನಡದ ಜೊತೆಗೆ ತೆಲುಗಿನಲ್ಲಿ ತೆರೆ ಮೇಲೆ ತರಲು ಸಜ್ಜಾಗಿದ್ದಾರೆ ನಿರ್ಮಾಪಕ ಪ್ರಕಾಶ್‌. ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನ, ಅಭಿಷೇಕ್‌ ಛಾಯಾಗ್ರಹಣ, ರಘು ಮೈಸೂರ್‌ ಕಲಾ ನಿರ್ದೇಶನ, ಭೂಷಣ್‌ ನೃತ್ಯ ಈ ಚಿತ್ರಕ್ಕಿದೆ.

 

Advertisement

Udayavani is now on Telegram. Click here to join our channel and stay updated with the latest news.

Next