Advertisement
ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಸೋತಿದ್ದ ಭಾರತಕ್ಕೆ ಫೈನಲ್ ತಲುಪಲು ಈ ಜಯ ಅನಿವಾರ್ಯವಾಗಿತ್ತು ಎನ್ನುವುದರಿಂದ ಈ ಜಯ ಮಹತ್ವ ಪಡೆದಿದೆ. ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 139 ರನ್ ಗಳಿಸಿತು. ಇದನ್ನು ಬೆನ್ನತ್ತಿದ ಭಾರತ 18.4 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 140 ರನ್ ಗಳಿಸಿತು.
Related Articles
Advertisement
ಬಾಂಗ್ಲಾದ ಆರಂಭ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ತಮೀಮ್ ಇಕ್ಬಾಲ್ (15) ಮತ್ತು ಸೌಮ್ಯ ಸರ್ಕಾರ್ (14) ವಿಕೆಟ್ ಬೇಗನೇ ಉರುಳಿತು. ಪವರ್-ಪ್ಲೇ ಅವಧಿಯಲ್ಲಿ ಬಾಂಗ್ಲಾ 2 ವಿಕೆಟಿಗೆ 47 ರನ್ ಮಾಡಿತ್ತು. ಭಾರತದ μàಲ್ಡಿಂಗ್ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ವಿಜಯ್ ಶಂಕರ್ ಬೌಲಿಂಗ್ ದಾಳಿಯ ವೇಳೆಯಲ್ಲೇ 3 ಕ್ಯಾಚ್‌ಗಳನ್ನು ನೆಲಕ್ಕೆ ಹಾಕಲಾಗಿತ್ತು.
2ನೇ ಪಂದ್ಯದಲ್ಲೇ ಮಿಂಚಿದಆಲೌÅಂಡರ್ ವಿಜಯ್ ಶಂಕರ್ ತಮಿಳುನಾಡಿನ ಆಲ್‌ರೌಂಡರ್ ವಿಜಯ್ ಶಂಕರ್‌ಗೆ ಇದು 2ನೇ ಅಂತಾರಾಷ್ಟ್ರೀಯ ಟಿ20 ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ಭರ್ಜರಿ ಮಿಂಚಿ ಗಮನ ಸೆಳೆದಿದ್ದಾರೆ. ಒಟ್ಟು 4 ಓವರ್ ಎಸೆದ ವಿಜಯ್ ಶಂಕರ್ 32 ರನ್‌ಗೆ 2 ವಿಕೆಟ್ ಪಡೆದಿದ್ದಾರೆ. ಒಟ್ಟು 32 ರನ್ ಬಿಟ್ಟುಕೊಟ್ಟರು. ಮಧ್ಯಮ ಕ್ರಮಾಂಕದ ಬಲಾಡ್ಯ ಬ್ಯಾಟ್ಸ್‌ಮನ್‌ಗಳಾದ ಮುಶ್ಫಿಕರ್ ರಹೀಮ್ ಮತ್ತು ಮೊಹಮ್ಮದುಲ್ಲಾಹಗೆ ಪೆವಿಲಿಯನ್ ದಾರಿ ತೊರಿಸಿದರು. ಇವರು ತಮಿಳುನಾಡು ತಂಡದ ನಾಯಕನಾಗಿದ್ದಾರೆ. ಪ್ರಸಕ್ತ ವರ್ಷದ ರಣಜಿ, ವಿಜಯ್ ಹಜಾರೆ ಟ್ರೋಫಿಯಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ರಾಷ್ಟ್ರೀಯ ತಂಡದ ಆಯ್ಕೆ ಮಂಡಳಿಯ ಗಮನ ಸೆಳೆದಿದ್ದರು. ಹೀಗಾಗಿ ತ್ರಿಕೋನ ಟಿ20 ಸರಣಿ ಆಯ್ಕೆಯಾಗಿದ್ದಾರೆ. ಸ್ಕೋರ್ ವಿವರ
ಬಾಂಗ್ಲಾದೇಶ 20 ಓವರ್‌ಗೆ 139/8
ತಮೀಮ್ ಇಕ್ಬಾಲ್ ಸಿ ಉನಾಡ್ಕತ್ ಬಿ ಠಾಕೂರ್ 15
ಸೌಮ್ಯ ಸರ್ಕಾರ್ ಸಿ ಚಹಲ್ ಬಿ ಉನಾಡ್ಕತ್ 14
ಲಿಟ್ಟನ್ ದಾಸ್ ಸಿ ರೈನಾ ಬಿ ಚಹಲ್ 34
ಮುಶ್ಫಿàಕರ್ ರಹೀಮ್ ಸಿ ಕಾರ್ತಿಕ್ ಬಿ ಶಂಕರ್ 18
ಮಹಮ್ಮದುಲ್ಲಾ ಸಿ ಠಾಕೂರ್ ಬಿ ಶಂಕರ್ 1
ಶಬ್ಬೀರ್ ರೆಹಮಾನ್ ಸಿ ಕಾರ್ತಿಕ್ ಬಿ ಉನಾಡ್ಕತ್ 30
ಮೆಹದಿ ಹಸನ್ ಸಿ ಪಾಂಡ್ಯ ಬಿ ಉನಾಡ್ಕತ್ 3
ತಸ್ಕಿನ್ ಅಹ್ಮದ್ ಅಜೇಯ 8
ರುಬೆಲ್ ಹೊಸೈನ್ ರನೌಟ್ 0
ಮುಸ್ತಫಿಜುರ್ ರೆಹಮಾನ್ ಅಜೇಯ 1
ಇತರೆ 15
ವಿಕೆಟ್ ಪತನ: 1-20, 2-35, 3-66, 4-72, 5-107, 6-118, 7-134, 8-135
ಬೌಲಿಂಗ್
ಜೈದೇವ್ ಉನಾಡ್ಕತ್ 4 0 38 3
ವಾಷಿಂಗ್ಟನ್ ಸುಂದರ್ 4 0 23 0
ಶಾದೂìಲ್ ಠಾಕೂರ್ 4 0 25 1
ಯಜುವೇಂದ್ರ ಚಹಲ್ 4 0 19 1
ವಿಜಯ್ ಶಂಕರ್ 4 0 32 2 ಭಾರತ 18.4 ಓವರ್‌ಗೆ 140/4
ರೋಹಿತ್ ಶರ್ಮ ಬಿ ಮುಸ್ತಫಿಜೂರ್ 17
ಶಿಖರ್ ಧವನ್ ಸಿ ದಾಸ್ ಬಿ ತಸ್ಕಿನ್ 55
ರಿಷಭ್ ಪಂತ್ ಬಿ ರುಬೆಲ್ ಹುಸೇನ್ 7
ಸುರೇಶ್ ರೈನಾ ಸಿ ಮಿರಾಜ್ ಬಿ ರುಬೆಲ್ 28
ಮನೀಶ್ ಪಾಂಡೆ ಅಜೇಯ 27
ದಿನೇಶ್ ಕಾರ್ತಿಕ್ ಅಜೇಯ 2
ಇತರೆ 4
ವಿಕೆಟ್: 1-28, 2-40, 3-108, 4-123
ಬೌಲಿಂಗ್
ಮುಸ್ತಫಿಜೂರ್ ರೆಹಮನ್ 4 0 31 1
ತಸ್ಕಿನ್ ಅಹ್ಮದ್ 3 0 28 1
ರುಬೆಲ್ ಹುಸೇನ್ 3.4 0 24 2
ಹಸನ್ ಮಿರಜ್ 4 0 21 0
ಸೌಮ್ಯ ಸರ್ಕಾರ್ 1 0 8 0
ಮೊಹಮ್ಮದುಲ್ಲಾ 1 0 11 0
ನಜ್ಮುಲ್ ಇಸ್ಲಾಮ್ 2 0 15 0