Advertisement

ಅಂಜಿಕೆ ಬಿಟ್ಟು ವ್ಯಾಕ್ಸಿನ್‌ ಹಾಕಿಸಿಕೊಳ್ಳಿ: ಧವನ್‌

11:23 PM May 06, 2021 | Team Udayavani |

ಹೊಸದಿಲ್ಲಿ,: ಟೀಮ್‌ ಇಂಡಿಯಾದ ಎಡಗೈ ಆರಂಭಕಾರ ಶಿಖರ್‌ ಧವನ್‌ ಗುರುವಾರ ಮೊದಲ ಸುತ್ತಿನ ಕೋವಿಡ್‌-19 ವ್ಯಾಕ್ಸಿನ್‌ ಹಾಕಿಸಿಕೊಂಡಿದ್ದಾರೆ. ಜತೆಗೆ ಯಾವುದೇ ಅಂಜಿಕೆ ಇಲ್ಲದೆ ವ್ಯಾಕ್ಸಿನ್‌ ಹಾಕಿಸಿಕೊಳ್ಳುವಂತೆ ಜನರಿಗೆ ಮನವಿ ಮಾಡಿದ್ದಾರೆ.

Advertisement

“ನಾನು ವ್ಯಾಕ್ಸಿನ್‌ ಹಾಕಿಸಿಕೊಂಡಿದ್ದೇನೆ. ಕೋವಿಡ್ ವಾರಿಯರ್ಸ್‌ ತ್ಯಾಗ, ಬದ್ಧತೆಗೆ ಸಾಟಿಯಿಲ್ಲ. ಯಾರೂ ಅಂಜುವ ಅಗತ್ಯವಿಲ್ಲ. ಸಾಧ್ಯವಾದಷ್ಟು ಬೇಗ ವ್ಯಾಕ್ಸಿನ್‌ ಹಾಕಿಸಿಕೊಳ್ಳಿ. ಇದು ವೈರಸ್‌ ಸೋಲಿಸಲು ಖಂಡಿತ ನೆರವಾಗಲಿದೆ’ ಎಂದು ಧವನ್‌ ಟ್ವೀಟ್‌ ಮಾಡಿದ್ದಾರೆ.

ಕಿವೀಸ್‌ ಕ್ರಿಕೆಟಿಗರು ಇಂಗ್ಲೆಂಡಿಗೆ  :

ಕ್ರೈಸ್ಟ್‌ಚರ್ಚ್‌: ಐಪಿಎಲ್‌ನಲ್ಲಿ ಪಾಲ್ಗೊಂಡ ನ್ಯೂಜಿಲ್ಯಾಂಡ್‌ ಟೆಸ್ಟ್‌ ತಂಡದ ಸದಸ್ಯರು ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗಾಗಿ ಮೇ 11ರಂದು ಭಾರತದಿಂದ ಲಂಡನ್ನಿಗೆ ಪ್ರಯಾಣಿಸಲಿದ್ದಾರೆ. ಇವರಲ್ಲಿ ನಾಯಕ ಕೇನ್‌ ವಿಲಿಯಮ್ಸನ್‌ ಕೂಡ ಸೇರಿದ್ದಾರೆ. ಉಳಿದವರು ಶುಕ್ರವಾರ ನ್ಯೂಜಿಲ್ಯಾಂಡಿಗೆ ಆಗಮಿಸಲಿದ್ದಾರೆ ಎಂದು ಅಲ್ಲಿನ ಕ್ರಿಕೆಟ್‌ ಮಂಡಳಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next