ಕೋಲ್ಕತ: ಬಹುದಿನಗಳ ನಂತರ ಫಾರ್ಮ್ಗೆ ಬಂದ ಶಿಖರ್ ಧವನ್ (97* ರನ್) ಮತ್ತು ರಿಷಭ್ ಪಂತ್ (46 ರನ್) ಆಕರ್ಷಕ ಬ್ಯಾಟಿಂಗ್‌ನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಶುಕ್ರವಾರದ ಐಪಿಎಲ್ ಪಂದ್ಯದಲ್ಲಿ ಕೋಲ್ಕತ ನೈಟ್‌ರೈಡರ್ಸ್
ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿದೆ.
ಇಲ್ಲಿನ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್ ತಂಡವು 7 ವಿಕೆಟಿಗೆ 178 ರನ್ ಗಳಿಸಿದ್ದರೆ ಡೆಲ್ಲಿ ತಂಡವು 18.5 ಓವರ್‌ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 180 ರನ್ ಗಳಿಸಿ ಜಯಭೇರಿ ಬಾರಿಸಿತು. ಧವನ್ ಮತ್ತು ಪಂತ್ ಅವರ ಭರ್ಜರಿ ಆಟದಿಂದ ಡೆಲ್ಲಿ ಸುಲಭ
ಗೆಲುವು ಕಾಣುವಂತಾಯಿತು. ಅವರಿಬ್ಬರು 2ನೇ ವಿಕೆಟಿಗೆ 105 ರನ್ ಜತೆಯಾಟ ನಡೆಸಿದರು. ಪಂತ್ 46 ರನ್ನಿಗೆ ಔಟಾದರೆ ಧವನ್ ಸ್ವಲ್ಪದರಲ್ಲಿ ಶತಕ ದಾಖಲಿಸಲು ವಿಫಲರಾದರು. ಕೊನೆ ಹಂತದಲ್ಲಿ ಇಂಗ್ರಾಮ್ ಸಿಕ್ಸರ್ ಬಾರಿಸಿದ್ದರಿಂದ ಧವನ್ 97 ರನ್ನಿಗೆ ಅಜೇಯರಾಗಿ ಉಳಿಯಬೇಕಾಯಿತು. 63 ಎಸೆತ ಎದುರಿಸಿದ ಅವರು 11 ಬೌಂಡರಿ ಮತ್ತು 2 ಸಿಕ್ಸರ್ ಬಾರಿಸಿದರು.
ಗಿಲ್, ರಸೆಲ್ ಮಿಂಚು: ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ ತಂಡ ಆರಂಭಕಾರ ಶುಭ್‌ಮನ್ ಗಿಲ್ ಹಾಗೂ ಸ್ಫೋಟಕ ಆಟಗಾರ ಆ್ಯಂಡ್ರೆ ರಸೆಲ್ ಸಿಡಿದು ನಿಂತರೂ 178 ರನ್‌ಗಳ ಸಾಧಾರಣ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಬೌಲರ್‌ಗಳು ಯಶಸ್ವಿಯಾದರು. ಟಾಸ್ ಗೆದ್ದು μàಲ್ಡಿಂಗ್ ಆಯ್ಕೆ ಮಾಡಿಕೊಂಡ ಡೆಲ್ಲಿ ಮೊದಲ ಎಸೆತದಲ್ಲೇ ಜೋ ಡೆನ್ಲಿ ಅವರ ವಿಕೆಟ್ ಹಾರಿಸಿತು.
ರಾಬಿನ್ ಉತ್ತಪ್ಪ 28 ರನ್ (30 ಎಸೆತ, 4 ಬೌಂಡರಿ, 1 ಸಿಕ್ಸರ್) ತಾಳ್ಮೆಯ ಆಟವಾಡಿದರೆ, ಗಿಲ್ (65 ರನ್, 39 ಎಸೆತ, 7 ಬೌಂಡರಿ, 2 ಸಿಕ್ಸರ್) ಸಿಡಿಯುತ್ತ ಸಾಗಿದರು. ಉತ್ತಪ್ಪ ವಿಕೆಟ್ ಪತನದ ಬಳಿಕ ಕ್ರೀಸ್‌ಗೆ ಬಂದ ನಿತೀಶ್ ರಾಣಾ ಗಳಿಕೆ 11ಕ್ಕೆ ಸೀಮಿತವಾಯಿತು. ಸ್ಟಾರ್ ಆಟಗಾರ ಆ್ಯಂಡ್ರೆ ರಸೆಲ್ ಮತ್ತೂಮ್ಮೆ ಮಿಂಚು ಹರಿಸಿದರು.
ಕೇವಲ 21 ಎಸೆತಗಳಲ್ಲಿ 45 ರನ್ ದೋಚಿದರು. ನಾಲ್ಕು ಸಿಕ್ಸರ್ ಹಾಗೂ 3 ಬೌಂಡರಿಗಳನ್ನು ಅವರ ಆಕರ್ಷಕ ಇನಿಂಗ್ಸ್ ಒಳಗೊಂಡಿತ್ತು. ಈ ನಡುವೆ ನಾಯಕ ದಿನೇಶ್ ಕಾರ್ತಿಕ್ ಹಾಗೂ ಕಾರ್ಲೋಸ್ ಬ್ರಾತ್‌ವೇಟ್ ವಿಫಲರಾಗುವ ಮೂಲಕ ಕೋಲ್ಕತದದ ದೊಡ್ಡ ಮೊತ್ತದ ಕನಸಿಗೆ ಅಂಕುಶ ಬಿತ್ತು. ಕೊನೆಗೆ ಅಬ್ಬರಿಸಿದ ಪೀಯೂಶ್ ಚಾವ್ಲಾ ಆರು ಎಸೆತಗಳಲ್ಲೇ ಎರಡು ಬೌಂಡರಿಗಳಿದ್ದ 14 ರನ್ ಸಂಪಾದಿಸಿ ಅಜೇಯರಾಗಿ ಉಳಿದರು ಡೆಲ್ಲಿ ಪರ ಅನುಭವಿ ವೇಗಿ ಇಶಾಂತ್ ಶರ್ಮಾ 4 ಓವರ್‌ಗಳಲ್ಲಿ ಕೇವಲ 21 ರನ್ ನೀಡುವುದಲ್ಲದೆ ಒಂದು ವಿಕೆಟ್ ಕಿತ್ತು ಗಮನ ಸೆಳೆದರು. ಕ್ರಿಸ್ ಮಾರಿಸ್, ಕ್ಯಾಗಿಸೊ ರಬಾಡ ಹಾಗೂ ಕೀಮೋ ಪೌಲ್ ತಲಾ 2 ವಿಕೆಟ್ ಗಳಿಸಿದರು