Advertisement
“ಆಸ್ಟ್ರೇಲಿಯ ಪ್ರವಾಸಕ್ಕೂ ಮುನ್ನ ಕೆಲವು ಆಟಗಾರರು ರನ್‌ಗಳಿಸುವುದು ಬಹಳ ಅಗತ್ಯವಾಗಿತ್ತು. ಮುಖ್ಯವಾಗಿ ಧವನ್ ಏಕದಿನ ಸರಣಿಗಳಲ್ಲಿ ಉತ್ತಮವಾಗಿ ಆಡುತ್ತಾರೆ. ಆದರೆ, ಉತ್ತಮ ಆರಂಭ ಕಂಡುಕೊಂಡರೂ ಹೆಚ್ಚು ರನ್‌ಗಳಿಸಲು ಸಾಧ್ಯವಾಗುತ್ತಿಲ್ಲ. ಆಸ್ಟ್ರೇಲಿಯದೆದುರಿನ ಕಠಿನ ಸರಣಿಗೂ ಮುನ್ನ ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಅವರ ಮ್ಯಾಚ್ ವಿನ್ನಿಂಗ್ ಆಟ ಉತ್ತಮವಾಗಿತ್ತು. ಈ ಪಂದ್ಯದಲ್ಲಿ ರಿಷಬ್ ಪಂತ್ ಕೂಡ ರನ್‌ಗಳಿಸಲು ಉತ್ಸುಕರಾಗಿದ್ದರು. 6 ಓವರ್ ಗಳಲ್ಲೇ ನಾವು 2 ವಿಕೆಟ್ ಕಳೆದುಕೊಂಡಿದ್ದೆವು. ಒತ್ತಡದ ಸನ್ನಿವೇಶವನ್ನು ಉತ್ತಮವಾಗಿ ನಿಭಾಯಿಸಿದ ಧವನ್-ಪಂತ್ ಮ್ಯಾಚ್ ವಿನ್ನಿಂಗ್ ಜತೆಯಾಟವಾಡಿ ದರು’ ಎಂದು ರೋಹಿತ್ ಶರ್ಮ ಅಭಿಪ್ರಾಯ ಪಟ್ಟರು.
“ಆಸ್ಟ್ರೇಲಿಯಕ್ಕೆ ತೆರಳಿ ಉತ್ತಮ ಪ್ರದರ್ಶನ ನೀಡುವುದು ಯಾವತ್ತೂ ಒಂದು ಸವಾಲು. ಅದೊಂದು ಡಿಫರೆಂಟ್ ಬಾಲ್ ಗೇಮ್. ಪ್ರತಿ ಬಾರಿಯೂ ಅಲ್ಲಿಗೆ ತೆರಳಿದಾಗ ಆಟಗಾರನಾಗಿ, ವ್ಯಕ್ತಿಯಾಗಿ ಹಾಗೂ ತಂಡವಾಗಿ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಆಸ್ಟ್ರೇಲಿಯ ಸರಣಿ ಉಳಿದ ಸರಣಿಗಿಂತಲೂ ವಿಭಿನ್ನ. ಇದೇ ಆತ್ಮವಿಶ್ವಾಸದೊಂದಿಗೆ ಆಸ್ಟ್ರೇ ಲಿಯಕ್ಕೆ ಪ್ರವಾಸ ಬೆಳೆಸಬೇಕು ಹಾಗೂ ಇಲ್ಲಿ ನೀಡಿದ ಪ್ರದರ್ಶನವನ್ನು ಮುಂದುವರಿಯಬೇಕು. ಇದೊಂದು ನಿರಂತಯರ ಪ್ರಕ್ರಿಯೆ…’ ಎಂದು ರೋಹಿತ್ ಹೇಳಿದರು.