Advertisement

ವಿದ್ಯಾರ್ಥಿನಿ ಅತ್ಯಾಚಾರ-ಕೊಲೆ ಖಂಡಿಸಿ ಪ್ರತಿಭಟನೆ

12:43 PM Apr 20, 2019 | Naveen |

ದಾವಣಗೆರೆ: ರಾಯಚೂರು ಜಿಲ್ಲೆಯಲ್ಲಿ ಇಂಜಿನಿಯರಿಂಗ್‌ ವಿದ್ಯಾರ್ಥಿನಿ ಮೇಲೆ ನಡೆದಿರುವ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಖಂಡಿಸಿ ನಗರದಲ್ಲಿ ಶುಕ್ರವಾರ ಎಐಡಿಎಸ್‌ಓ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Advertisement

ನಗರದ ಜಯದೇವ ವೃತ್ತದಲ್ಲಿ ಆಲ್‌ ಇಂಡಿಯಾ ಡೆಮಾಕ್ರಟಿಕ್‌ ಸ್ಟೂಡೆಂಟ್‌ ಆರ್ಗನೈಜೇಷನ್‌, ಆಲ್‌ ಇಂಡಿಯಾ ಡೆಮಾಕ್ರಟಿಕ್‌ ಯೂತ್‌ ಆರ್ಗನೈಜೇಷನ್‌ ಹಾಗೂ ಆಲ್‌ ಇಂಡಿಯಾ ಮಹಿಳಾ ಸಾಂಸ್ಕೃತಿಕ ಸಂಘಟನೆ ನೇತೃತ್ವದಲ್ಲಿ ಜಮಾಯಿಸಿದ ಕಾರ್ಯಕರ್ತರು, ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಇಂಜಿನಿಯರಿಂಗ್‌ ವಿದ್ಯಾರ್ಥಿನಿ ಅತ್ಯಾಚಾರ-ಕೊಲೆ ಪ್ರಕರಣ ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ದುಷ್ಕೃತ್ಯ. ಇಂತಹ ಘಟನೆ ನಡೆದು ವಾರ ಕಳೆದರೂ ಎಲ್ಲೂ ಸಹ ಮಾಹಿತಿ ನೀಡದಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಘಟನೆ ಮರೆಮಾಚಲು ಎಲ್ಲಾ ತರಹದ ಪಿತೂರಿಗಳು ನಡೆದಿವೆ. ಆದರೆ ವಾಟ್ಸ್‌ ಆ್ಯಪ್‌, ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲ
ತಾಣದಲ್ಲಿ ಈ ವಿಚಾರ ಹರಿದಿದ್ದು, ಇದು ಈಗ ಮನೆಮಾತಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಸುದರ್ಶನ್‌ ಯಾದವ್‌ ಎಂಬುವನನ್ನು ಬಂಧಿಸಿದ್ದು, ಈ ಬಗ್ಗೆ ಸೂಕ್ತ ತನಿಖೆ ಆಗಬೇಕೆಂದು ಆಗ್ರಹಿಸಿದರು.

2012ರಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯ ಘಟನೆಯಿಂದ ಹಿಡಿದು ಸಾಕಷ್ಟು ಅತ್ಯಾಚಾರ ಪ್ರಕರಣಗಳಾಗಿವೆ. ದಾನಮ್ಮ , ಆಸಿಫಾ ಮತ್ತು ರಕ್ಷಿತಾ ಪ್ರಕರಣ, ಈಚೆಗೆ ಕಕ್ಕರಗೊಳ್ಳದಲ್ಲಿ ನಡೆದ ಘಟನೆ ಇವೆಲ್ಲವೂ ನಮ್ಮ ದೇಶದ ರಾಜಕೀಯ ಪಕ್ಷಗಳ ತಾತ್ಸಾರಕ್ಕೆ ಹಿಡಿದ ಕೈಗನ್ನಡಿಯಾಗಿವೆ. ಅತ್ಯಾಚಾರ, ಕೊಲೆ ಪ್ರಕರಣಗಳು ದೇಶದೆಲ್ಲೆಡೆ
ಹೆಚ್ಚಾಗುತ್ತಿವೆ. ಚುನಾವಣೆಗಳಿರುವ ಕಾರಣದಿಂದಾಗಿ ಇಂತಹ ಪ್ರಕರಣಗಳ ಕಡೆಗೆ ಯಾರೂ ಗಮನಹರಿಸುತ್ತಿಲ್ಲ . ಕೂಡಲೇ ಈ
ಗುಂಪು ಅತ್ಯಾಚಾರಗೈದ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಉಗ್ರ ಶಿಕ್ಷೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

Advertisement

ಎಐಡಿಎಸ್‌ಓ ನಗರಾಧ್ಯಕ್ಷೆ ಸೌಮ್ಯ, ಜಂಟಿ ಕಾರ್ಯದರ್ಶಿ ನಾಗಜ್ಯೋತಿ, ಸಂಘಟನಾಕಾರರಾದ ಪರಶುರಾಮ್‌, ಜ್ಯೋತಿ
ಕುಕ್ಕುವಾಡ, ಕಾರ್ಯದರ್ಶಿ ಭಾರತಿ, ಪೂಜಾ, ವಸಂತ, ಭವಾನಿರಾವ್‌, ಕಾವ್ಯ, ಪುಷ್ಪ, ಸ್ವಪ್ನ ಮಂಜುನಾಥ್‌, ತ್ರಿವೇಣಿ, ಸತೀಶ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next