Advertisement

ಫೋನ್‌ ಮಾಡಿದ್ರೆ ಮನೆ ಬಾಗಿಲಿಗೇ ಬರುತ್ತೆ ಔಷಧಿ

11:47 AM Apr 08, 2020 | Naveen |

ಧಾರವಾಡ: ಕೊರೊನಾ ವೈರಸ್‌ ತಡೆಯಲು ಜನರ ಆರೋಗ್ಯದ ಹಿತದೃಷ್ಟಿಯಿಂದ ಮನೆಯಲ್ಲಿಯೇ ಕುಳಿತು ಫೋನ್‌ ಕರೆಯ ಮೂಲಕ ಮನೆ ಬಾಗಿಲಿಗೆ
ಔಷಧಿ ತಲುಪಿಸಲು ಜಿಲ್ಲಾಡಳಿತ ಸೂಕ್ತ ವ್ಯವಸ್ಥೆ ಮಾಡಿದೆ. ಹುಬ್ಬಳ್ಳಿಯ 22ಕ್ಕೂ ಹೆಚ್ಚು ಹಾಗೂ ಧಾರವಾಡದ 12ಕ್ಕೂ ಹೆಚ್ಚು ಪ್ರದೇಶಗಳ ಮೆಡಿಕಲ್‌ ಶಾಪ್‌ ಮಾಲೀಕರು ಫೋನ್‌ ಮತ್ತು ಆನ್‌ಲೈನ್‌ ನಲ್ಲಿ ಗ್ರಾಹಕರ ಬೇಡಿಕೆ ಸ್ವೀಕರಿಸಿ ಅವರ ಮನೆಯ ಬಾಗಿಲಿಗೆ ಔಷಧಿ ತಲುಪಿಸಲು ಸಿದ್ಧರಾಗಿದ್ದಾರೆ.

Advertisement

ತರಿಸಿಕೊಳ್ಳುವ ವಿಧಾನ: ಪಟ್ಟಿಯಲ್ಲಿರುವ ಔಷಧೀಯ ಅಂಗಡಿಗಳ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ ಹೆಸರು ಹಾಗೂ ವಿಳಾಸ ನೋಂದಾಯಿಸಿ
ಬೇಕಾದ ಔಷಧ ವಿವರಗಳ ಬೇಡಿಕೆ ನೀಡಬೇಕು. 24 ಗಂಟೆಯೊಳಗೆ ಪ್ರತಿಕ್ರಿಯೆ ಬರುತ್ತದೆ. ನಗದು ಅಥವಾ ಕಾರ್ಡ್‌ ಅಥವಾ ಯುಪಿಐ ಮೂಲಕ ಔಷಧೀಯ ಹಣ ಪಾವತಿಸಬಹುದು. ಅಥವಾ www.supportdharwad.in  ಮೂಲಕವೂ ಈ ಸಂಪರ್ಕ ಪಡೆಯಬಹುದು. ಸಾರ್ವಜನಿಕರ ಬಳಕೆಗೆ ಈ ವಿಧಾನ ಸುಲಭವಾಗಿದೆ. ಹೆಚ್ಚಿನ ವಿವರಗಳಿಗೆ 1077 ಸಹಾಯವಾಣಿ ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next