Advertisement

ಧಾರವಾಡ: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ: ಓರ್ವ ಬಂಧನ

11:20 PM Sep 16, 2020 | mahesh |

ಧಾರವಾಡ: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಗೊಲ್ಲರ ಕಾಲನಿಯಲ್ಲಿ ನಡೆದಿದೆ.
ಈ ಕೃತ್ಯ ಎಸಗಿದ ಗೊಲ್ಲರ ಕಾಲನಿಯ ಶಂಕರ ಪರಶುರಾಮ ಗೊಲ್ಲರ (25) ವಿರುದ್ದ ಪೋಸ್ಕೋ ಕಾಯ್ದೆಯಡಿ ದೂರು ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

Advertisement

ಬಾಲಕಿಗೆ ಮೊಬೈಲ್ ಆಸೆ ತೋರಿಸಿ ಈ ಕೃತ್ಯ ನಡೆಸಿದ್ದಾನೆ ಎನ್ನಲಾಗಿದೆ. ಮಂಗಳವಾರ ಮಧ್ಯಾಹ್ನ ಮನೆಯಿಂದ ತೆರಳಿದ್ದ ಬಾಲಕಿ ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಪೋಷಕರು ಸಂಬಂಧಿಕರ ಮನೆ ಸೇರಿ ಎಲ್ಲೆಡೆ ಹುಡುಕಿದರೂ ಸಿಕ್ಕಿರಲಿಲ್ಲ. ಕೊನೆಗೆ ಶಂಕರ ಅವರ ಮನೆಯಲ್ಲಿ ಪತ್ತೆಯಾಗಿದ್ದಾಳೆ.

ಪಾಲಕರನ್ನು ಕಂಡು ಅಳುತ್ತಿದ್ದ ಬಾಲಕಿಯನ್ನು ವಿಚಾರಿಸಿದಾಗ ಘಟನೆ ವಿವರಿಸಿದ್ದಾಳೆ. ಇದಲ್ಲದೆ ಪಾಲಕರಿಗೆ ವಿಷಯ ಹೇಳದಂತೆ ಜೀವ ಬೆದರಿಕೆ ಸಹ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next