Advertisement

ಧಾರವಾಡ: ಸ್ವಯಂ ಗುಂಡು ಹಾರಿಸಿಕೊಂಡು ನಿವೃತ್ತ ಯೋಧ ಆತ್ಮಹತ್ಯೆ

09:54 AM Mar 22, 2018 | Team Udayavani |

 ಧಾರವಾಡ: ನಿವೃತ್ತ ಯೋಧರೊಬ್ಬರು ಬಂಧೂಕಿನಿಂದ ಎದೆಗೆ ಸ್ವಯಂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಗರದಲ್ಲಿ ನಡೆದಿದೆ. 

Advertisement

ಚನ್ನಮಲ್ಲಯ್ಯ ಹಿರೇಮಠ(45) ಆತ್ಮಹತ್ಯೆ ಮಾಡಿಕೊಂಡಿದ್ದು, ಕಳೆದ 2 ದಿನಗಳಿಂದ ಖನ್ನತೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. 

ಆತ್ಮಹತ್ಯೆ ಮಾಡಿಕೊಳ್ಳುವ ವೇಳೆ ಅಳಿಯ ತಪ್ಪಿಸಲು ಮುಂದಾಗಿದ್ದು ಆತನನ್ನು ಪಕ್ಕಕ್ಕೆ ತಳ್ಳಿ  ಟ್ರಿಗರ್‌ ಒತ್ತಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 

2 ವರ್ಷದ ಹಿಂದೆ ಸೇನೆಯಿಂದ ನಿವೃತ್ತರಾಗಿದ್ದ ಚನ್ನಮಲ್ಲಯ್ಯ ಖಾಸಗಿ ಬ್ಯಾಂಕ್‌ವೊಂದರಲ್ಲಿ ಸೆಕ್ಯುರಿಟಿ ಆಗಿ ಕೆಲಸ ಮಾಡುತ್ತಿದ್ದರು. 

ಉಪನಗರ ಪೊಲೀಸರು ಸ್ಥಳಕ್ಕೆ ತೆರಳಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next