Advertisement

ಸೆ.17 ರಿಂದ ಧಾರವಾಡ ಕೃಷಿ ಮೇಳ

05:58 PM Sep 14, 2022 | Team Udayavani |

ಧಾರವಾಡ : ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ರೈತರ ಆದಾಯ ದ್ವಿಗುಣಗೊಳಿಸಲು ಕೃಷಿ ತಾಂತ್ರಿಕತೆಗಳು ಎಂಬ ಶೀರ್ಷಿಕೆಯಡಿಯಲ್ಲಿ ನಾಲ್ಕು ದಿನಗಳ ಕಾಲ ಕೃಷಿ ಮೇಳ ಆಯೋಜಿಸಲಾಗಿದ್ದು, ಸೆ.17 ರಿಂದ ಕೃಷಿ ಮೇಳಕ್ಕೆ ಚಾಲನೆ ದೊರೆಯಲಿದೆ ಎಂದು ಕುಲಪತಿ ಡಾ|ಆರ್.ಬಸವರಾಜಪ್ಪ ಹೇಳಿದರು.

Advertisement

ನಗರದ ಕೃಷಿ ವಿವಿ ಕುಲಪತಿಗಳ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೃಷಿ ಮೇಳದ ಬಗ್ಗೆ ಅವರು ಮಾಹಿತಿ ನೀಡಿದರು.

ಸೆ.17 ರಂದು 10:30 ಗಂಟೆಗೆ ಫಲಪುಷ್ಪ ಮತ್ತು ಗಡ್ಡೆ-ಗೆಣಸು ಜತೆಗೆ ವಿಸ್ಮಯಕಾರಿ ಕೀಟ ಪ್ರಪಂಚ ಪ್ರದರ್ಶನವು ಉದ್ಘಾಟನೆಗೊಳ್ಳಲಿದೆ. ಇದಾದ ಬಳಿಕ 11:30 ಗಂಟೆಗೆ ಕರ್ನಾಟಕ ಪ್ರದೇಶ ಕೃಷಿ ಸಮಾಜದ ಆಡಳಿತ ಅಧ್ಯಕ್ಷ ಜಿ.ಶಿವನಗೌಡರು ಬೀಜ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಆ ಬಳಿಕ ಮಧ್ಯಾಹ್ನ 2:00 ಗಂಟೆಗೆ ಕೃಷಿ ಮೇಳದ ವೇದಿಕೆಯಲ್ಲಿ ಸೂರ್ಯಕಾಂತಿ ಬೆಳೆ ವಿಚಾರಗೋಷ್ಠಿ ಹಾಗೂ 3:00 ಗಂಟೆಗೆ ರೈತರಿಂದ ರೈತರಿಗಾಗಿ ಕಾರ್ಯಕ್ರಮದಲ್ಲಿ ಅನ್ವೇಷಣಾ ರೈತರ ಅನುಭವ ಹಂಚಿಕೆ ಕಾರ್ಯಕ್ರಮ ಇರಲಿದೆ ಎಂದರು.

ಸಿಎಂ ಬೊಮ್ಮಾಯಿ ಉದ್ಘಾಟನೆ :

ಸೆ.18 ರಂದು ಬೆಳಿಗ್ಗೆ 11:30 ಗಂಟೆಗೆ ಕೃಷಿ ಮೇಳ ವೇದಿಕೆಯಲ್ಲಿ ಕೃಷಿ ಮೇಳವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪಾಲ್ಗೊಳ್ಳಲಿದ್ದು, ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಕೃಷಿ ಪ್ರಕಟಣೆಗಳನ್ನು ಬಿಡುಗಡೆ ಮಾಡಲಿದ್ದಾರೆ. ಶಾಸಕ ಅಮೃತ ದೇಸಾಯಿ ಅಧ್ಯಕ್ಷತೆ ವಹಿಸಲಿದ್ದು, ಇದರ ಜತೆಗೆ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.

Advertisement

ಎಲ್ಲ ಕೃಷಿ ತಂತ್ರಜ್ಞಾನಗಳ ಮಾಹಿತಿಯನ್ನು  ಕೃಷಿ ಮೇಳದ ಮೂಲಕ ಅಲ್ಪ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ರೈತರಿಗೆ ತಲುಪಿಸುವುದು ಈ ಮೇಳದ ಮುಖ್ಯ ಉದ್ದೇಶವಾಗಿದೆ. ನಾಲ್ಕು ದಿನಗಳ ಈ ಮೇಳದಲ್ಲಿ ಸುಮಾರು ೧೦ ಲಕ್ಷ ರೈತರು ಭಾಗವಹಿಸುವ ನಿರೀಕ್ಷೆಯಿದೆ. ಕೃಷಿ ವಿವಿ ವ್ಯಾಪ್ತಿಯ 7 ಜಿಲ್ಲೆಗಳಿಂದ ಶ್ರೇಷ್ಠ ಕೃಷಿಕ ಹಾಗೂ ಶ್ರೇಷ್ಠ ಕೃಷಿ ಮಹಿಳೆ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಲಾಗಿದ್ದು, ಮೇಳದ ಮುಖ್ಯ ವೇದಿಕೆಯಲ್ಲಿ ಪ್ರಶಸ್ತಿಪ್ರದಾನ ನೆರವೇರಲಿದೆ ಎಂದರು.

ಇದನ್ನೂ ಓದಿ: ಉತ್ತರಾಖಂಡದಲ್ಲಿ ಪತಂಜಲಿ ಯೋಗಪೀಠದಿಂದ 1,000 ಕೋಟಿ ರೂ ಹೂಡಿಕೆ

ಪತ್ರಿಕಾಗೋಷ್ಠಿಯಲ್ಲಿ ವಿಸ್ತರಣಾ ನಿರ್ದೇಶಕ ಡಾ|ಪಿ.ಎಸ್.ಹೂಗಾರ, ಸಂಶೋಧನಾ ನಿರ್ದೇಶಕ ಡಾ|ಪಿ.ಎಲ್. ಪಾಟೀಲ ಸೇರಿದಂತೆ ವಿವಿಧ  ವಿಭಾಗದ ಡೀನ್ ಮುಖ್ಯಸ್ಥರು ಇದ್ದರು.

ಶ್ರೇಷ್ಠ ಕೃಷಿಕ-ಶ್ರೇಷ್ಠ ಕೃಷಿ ಮಹಿಳೆ ಪ್ರಶಸ್ತಿ ಪುರಸ್ಕೃತರು :

ಬೆಳಗಾವಿ ಜಿಲ್ಲೆ-ಗೋಕಾಕ ತಾಲೂಕಿನ ರಾಜಾಪೂರದ ಚಿದಾನಂದ ಪರಸಪ್ಪ ಪವಾರ, ದುರದುಂಡಿಯ ಸಿದ್ದವ್ವ ಲಕ್ಷ್ಮೀಕಾಂತ ಸೊಲ್ಲಾಪೂರ, ಹಾವೇರಿ ಜಿಲ್ಲೆ-ರಟ್ಟಿಹಳ್ಳಿ ತಾಲೂಕಿನ ಬತ್ತಿಕೊಪ್ಪದ ಪರಮೇಶಪ್ಪ ಬಸಪ್ಪ ಹಲಗೇರಿ, ಬ್ಯಾಡಗಿ ತಾಲೂಕಿನ ಹೆಡಿಗ್ಗೊಂಡದ ದಿವ್ಯಾ ಶಿವಕುಮಾರ ತೋಟದ, ಗದಗ ಜಿಲ್ಲೆ-ಶಿರಹಟ್ಟಿ ತಾಲೂಕಿನ ಮಾಡ್ಡಳ್ಳಿಯ ಹನಮಂತಪ್ಪ ಚಿಂಚಲಿ, ಮುಳಗುಂದದ ಮಂಗಳಾ ಕಿರಣ ನೀಲಗುಂದ, ವಿಜಯಪುರ ಜಿಲ್ಲೆ-ಕೊಲ್ಲಾರ ತಾಲೂಕಿನ ಮುಳವಾಡದ ಬಸವರಾಜ ಪರಗೊಂಡ ಸಿದ್ದಾಪುರ, ತಿಕೋಟಾ ತಾಲೂಕಿನ ತೊರವಿಯ ಸುಲೋಚನಾ ಸಾಬು ಮಮದಾಪುರ, ಬಾಗಲಕೋಟೆ ಜಿಲ್ಲೆ- ಕುಳಲಿಯ ಶಂಬು ಬಸಪ್ಪ ಬೆಳಗಾವ, ಬದಾಮಿ ತಾಲೂಕಿನ ಜಾಲಿಹಾಳದ ವಿಜಯಲಕ್ಷ್ಮೀ ಲಿಂಗರೆಡ್ಡಿ, ಉತ್ತರ ಕನ್ನಡ ಜಿಲ್ಲೆ-ಶಿರಸಿ ತಾಲೂಕಿನ ತಾರಗೋಡದ ಕಲ್ಲಳ್ಳಿ ಮನೆಯ ಮಧುಕೇಶ್ವರ ಜನಕ ಹೆಗಡೆ, ಅರಸಪುರದ ಹುಳಗೋಳದ ರಾಜೇಶ್ವರಿ ರಾಮಚಂದ್ರ ಹೆಗಡೆ, ಧಾರವಾಡ ಜಿಲ್ಲೆ-ಅಣ್ಣಿಗೇರಿ ತಾಲೂಕಿನ ಭದ್ರಾಪೂರದ ಉಮೇಶ ಬಸವಂತ ಗುಡ್ಡದ, ಅಳ್ನಾವರ ತಾಲೂಕಿನ ಹೊನ್ನಾಪುರದ ಲತಾ ರಾಮಪ್ಪ ನಂದನವಾಡಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next