Advertisement

ಧಾರವಾಡ ಕೃಷಿ ವಿವಿ ರಾಜ್ಯಕ್ಕೆ ನಂ.1

11:08 PM Aug 03, 2019 | Team Udayavani |

ಧಾರವಾಡ: ಇಲ್ಲಿನ ಕೃಷಿ ವಿಶ್ವವಿದ್ಯಾಲಯವು ಸಂಶೋಧನೆ ಮತ್ತು ಪ್ರಯೋಗಗಳ ಮೂಲಕ ಮತ್ತೆ ದೇಶದ ಗಮನ ಸೆಳೆದಿದ್ದು ರಾಜ್ಯದಲ್ಲಿ ನಂ.1 ಸ್ಥಾನ ಪಡೆದಿದೆ. ನವದೆಹಲಿಯಲ್ಲಿರುವ ಭಾರತೀಯ ಕೃಷಿ ಅನುಸಂಧಾನ ಪರಿಷತ್ತು ನೀಡುವ ರ್‍ಯಾಂಕ್‌ ಪಟ್ಟಿಯಲ್ಲಿ ದೇಶದಲ್ಲಿಯೇ 16ನೇ ಸ್ಥಾನ ಪಡೆದಿದೆ. ಕಳೆದ ವರ್ಷ 17ನೇ ಸ್ಥಾನ ಪಡೆದಿತ್ತು.

Advertisement

ಕೃಷಿಮೇಳದ ಮೂಲಕ ದೇಶದ ಗಮನ ಸೆಳೆದ ಧಾರವಾಡ ಕೃಷಿ ವಿವಿ, ಬೀಜೋತ್ಪಾದನೆ ಮತ್ತು ವಿನೂತನ ಜೈವಿಕ ರಸಾಯನ ಸಂಶೋಧನೆಗಳಿಂದ ಹೆಸರು ಪಡೆದಿದೆ. ಕೃಷಿ ಅನುಸಂಧಾನ ಪರಿಷತ್ತು ಇಡೀ ವರ್ಷ ಕೃಷಿ ವಿವಿ ಮಾಡುವ ಕೆಲಸ ಕಾರ್ಯಗಳನ್ನು ನೋಡಿ, ಪ್ರಗತಿ ಪರಿಶೀಲನೆ ನಡೆಸಿ, ಶ್ರೇಯಾಂಕ ನೀಡುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next