Advertisement

Dharwad: 25 ಲಕ್ಷ ರೂ.‌ಮೌಲ್ಯದ ಅಕ್ರಮ ಸ್ಪಿರಿಟ್ ವಶ

09:58 PM Feb 28, 2024 | Team Udayavani |

ಧಾರವಾಡ : ಕಲಘಟಗಿ ತಾಲೂಕಿನ ದೇವಿಕೊಪ್ಪ ಬಳಿ ಅಕ್ರಮವಾಗಿ ಸ್ಪಿರಿಟ್ ಸಾಗಿಸುತ್ತಿದ್ದ ಟ್ಯಾಂಕರ್ ವಶಕ್ಕೆ ಪಡೆದ ಅಬಕಾರಿ ಪೊಲೀಸರು ಚಾಲಕನನ್ನು ಬಂಧಿಸಿದ ಘಟನೆ ನಡೆದಿದೆ.

Advertisement

ಗೋವಾ ಮೂಲದ ಟ್ಯಾಂಕರ್ ಮೂಲಕ 25 ಲಕ್ಷ ರೂ. ಮೌಲ್ಯದ 25 ಸಾವಿರ ಲೀಟರ್ ಸ್ಪಿರಿಟ್‌ನ್ನು ಅಂಕೋಲಾಕ್ಕೆ ಸಾಗಾಟ ಮಾಡಲಾಗುತ್ತಿತ್ತು. ಈ ಖಚಿತ ಮಾಹಿತಿ ಮೇರೆಗೆ ದಾಳಿ ಕೈಗೊಂಡು ಟ್ಯಾಂಕರ್ ಸಮೇತ ಜಾರ್ಖಂಡ್ ಮೂಲದ ದೀಪನಾರಾಯಣಸಿಂಗ್ ಎಂಬ ಚಾಲಕನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಲಾಗಿದೆ.

ದೇವಿಕೊಪ್ಪದ ಬಳಿ ಅನುಮಾನಾಸ್ಪದವಾಗಿ ಟ್ಯಾಂಕರ್ ಹೊರಟಿತ್ತು. ಆಗ ಚಾಕನನ್ನು ವಿಚಾರಿಸಲಾಗಿ ಆತನಿಂದ ಸ್ಪಷ್ಟ ಮಾಹಿತಿ ಸಿಗಲಿಲ್ಲ. ಪರ್ಮಿಟ್ ಕೂಡ ಇರಲಿಲ್ಲ. ಈ ಟ್ಯಾಂಕರ್ ಗೋವಾದ ರಾಜ್‌ಸಿಂಗ್ ಎಂಬುವರಿಗೆ ಸೇರಿದ್ದಾಗಿದೆ. ಚಾಲಕನ್ನು ವಿಚಾರಿಸಿದಾಗ ಧಾರವಾಡ ಬೈಪಾಸ್ ಬಳಿ ಒಂದು ಟ್ಯಾಂಕರ್ ಇದೆ. ಅದನ್ನು ನೀನು ಅಂಕೋಲಾಕ್ಕೆ ತಲುಪಿಸಬೇಕು ಎಂದು ನನಗೆ ದೂರವಾಣಿ ಮೂಲಕ ಹೇಳಿದ್ದರು. ಅದರಂತೆ ನಾನು ಹೋಗುತ್ತಿದ್ದೆ. ಆದರೆ ಇದು ಯಾರಿಗೆ ಸೇರಿದ್ದು ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದ್ದು ಅನುಮಾನಕ್ಕೆ ಕಾರಣವಾಯ್ತು‌. ಇದಲ್ಲದೇ ಇದು ಮಹಾರಾಷ್ಟ ಪಾಸಿಂಗ್ (ಎಂಎಚ್. 50, 8888) ಇರುವ ವಾಹನ ಇದ್ದು ಇದರ ಮೇಲೆ ಕರ್ನಾಟಕ ಪಾಸಿಂಗ್ ನಂಬರ್ ಅಳವಡಿಸಿ ಪೊಲೀಸರನ್ನು ಯಾಮಾರಿಸುವ ಪ್ರಯತ್ನವೂ ನಡೆದಿತ್ತು. ಹೆಚ್ಚಿನ ತನಿಖೆಗೆ ಅಧಿಕಾರಿಗಳ ತಂಡ ಗೋವಾಕ್ಕೆ ತೆರಳಲಿದ್ದು, ಆ ನಂತರವೇ ಈ ಬಗ್ಗೆ ಸತ್ಯಾಸತ್ಯತೆ ಹೊರಗೆ ಬರಲಿದೆ ಎಂದು ಅಬಕಾರಿ ಉಪ ಆಯುಕ್ತ ಕೆ. ಅರುಣಕುಮಾರ ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next