Advertisement

ಧಾರವಾಡ: ಮೊದಲ ದಿನ ಸಿಇಟಿ ಸುಗಮ

07:02 AM Jul 31, 2020 | mahesh |

ಧಾರವಾಡ: ಕೋವಿಡ್ ವಿಪರೀತವಾಗಿ ಹರಡುತ್ತಿರುವ ಆತಂಕದ ಮಧ್ಯೆಯೇ ಜಿಲ್ಲೆಯ 23 ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ಗುರುವಾರ ಬೆಳಿಗ್ಗೆ ಜೀವಶಾಸ್ತ್ರ ಹಾಗೂ ಮಧ್ಯಾಹ್ನ ಗಣಿತ ವಿಷಯದಲ್ಲಿ ಸಿಇಟಿ ಪರೀಕ್ಷೆಗಳು ಸಗುಮವಾಗಿ ಜರುಗಿದವು.

Advertisement

ಧಾರವಾಡ ಶಹರದ 12 ಹಾಗೂ ಹುಬ್ಬಳ್ಳಿಯಲ್ಲಿ 11 ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ಬೆಳಿಗ್ಗೆ ನಡೆದ ಜೀವಶಾಸ್ತ್ರ ಪರೀಕ್ಷೆಗೆ ಪ್ರವೇಶ ಪಡೆದಿದ್ದ ಜಿಲ್ಲೆಯ ಒಟ್ಟು 7799 ಅಭ್ಯರ್ಥಿಗಳ ಪೈಕಿ
1685 ವಿದ್ಯಾರ್ಥಿಗಳು ಗೈರಾದರೆ 6114 ಅಭ್ಯರ್ಥಿಗಳು ಹಾಜರಾಗಿ ಪರೀಕ್ಷೆ ಬರೆದರು. ಇನ್ನೂ ಮಧ್ಯಾಹ್ನ ನಡೆದ ಗಣಿತ ವಿಷಯ ಪರೀಕ್ಷೆಗೆ 732 ಅಭ್ಯರ್ಥಿಗಳು ಗೈರಾದರೆ
7067 ಅಭ್ಯರ್ಥಿಗಳು ಹಾಜರಾಗಿ ಪರೀಕ್ಷೆ ಬರೆದರು.

ಇನ್ನೂ ಇಬ್ಬರು ಕೋವಿಡ್‌ ಸೋಂಕಿತ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಜಿಲ್ಲಾಧಿಕಾರಿ ಆದೇಶದ ಮೇರೆಗೆ ಪ್ರತ್ಯೇಕ ಕೇಂದ್ರ ನಿಗದಿ ಮಾಡಲಾಗಿತ್ತು. ಆದರೆ ಮತ್ತೂಬ್ಬ ಅಭ್ಯರ್ಥಿಗೆ ಗುರುವಾರ ಬೆಳಿಗ್ಗೆಯಷ್ಟೇ ಸೋಂಕು ಪತ್ತೆಯಾದ ಕಾರಣ ಒಟ್ಟು ಮೂರು ಜನ ಸೋಂಕಿತ ಅಭ್ಯರ್ಥಿಗಳು ಗುರುವಾರ ಪ್ರತ್ಯೇಕ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿ ಪರೀಕ್ಷೆ ಬರೆದಿದ್ದಾರೆ. ಈ ಮೂಲಕ ಧಾರವಾಡದ 1, ಹುಬ್ಬಳ್ಳಿಯ ಇಬ್ಬರು ಸೋಂಕಿತರು ಸಿಇಟಿ ಪರೀಕ್ಷೆ ಬರೆದಂತಾಗಿದೆ. ಮಹಾನಗರ ಪಾಲಿಕೆ ವತಿಯಿಂದ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸ್ಯಾನಿಟೈಸ್‌ ಮಾಡಲಾಗಿದ್ದು, ಅಭ್ಯರ್ಥಿಗಳ ಆರೋಗ್ಯ ತಪಾಸಣೆ ಮಾಡಿದ ಬಳಿಕವಷ್ಟೇ ಪರೀಕ್ಷೆ  ಬರೆಯಲು ಅವಕಾಶ ನೀಡಲಾಯಿತು. ಶುಕ್ರವಾರಭೌತಶಾಸ್ತ್ರ ಹಾಗೂ ರಸಾಯನಶಾಸ್ತ್ರ ವಿಷಯದ ಪರೀಕ್ಷೆಗಳು
ನಡೆಯಲಿವೆ.

Advertisement

Udayavani is now on Telegram. Click here to join our channel and stay updated with the latest news.

Next