Advertisement

ಮೌಲ್ಯ ಮರೆಯಾಗಿದೆ, ಹಣ ಮೇಲಾಗಿದೆ!

12:08 AM Feb 13, 2023 | Team Udayavani |

ಚಂದ್ರಕಾಂತ ಗುರಪ್ಪ ಬೆಲ್ಲದ,
ಮಾಜಿ ಶಾಸಕರು

Advertisement

ರಾಜಕಾರಣ ನಮ್ಮ ಕಾಲಕ್ಕೆ ಸೇವೆ ಮಾಡುವ ಮಾರ್ಗವಾಗಿತ್ತು. ಆದರೆ ಇಂದು ಇದು ಹಣ ಮಾಡುವ ಉದ್ಯಮವಾಗಿ ಪರಿವರ್ತ ನೆಯಾಗುತ್ತಿದೆ. ರಾಷ್ಟ್ರ ನಾಯಕ ಎಸ್‌. ನಿಜಲಿಂಗಪ್ಪ, ರಾಮಕೃಷ್ಣ ಹೆಗಡೆ, ಅಂದಾನಪ್ಪ ದೊಡ್ಡಮೇಟಿ, ಗುದೆÉಪ್ಪ ಹಳ್ಳಿಕೇರಿ ಅಂದು ನಮಗೆ ಮಾದರಿ ಯಾಗಿದ್ದರು. ಅವರೆಲ್ಲ ನಾವು ಜನಸೇವೆ ಹೇಗೆ ಮಾಡಬೇಕು ಎಂದು ಕಿವಿ ಹಿಂಡಿ ಬುದ್ಧಿ ಹೇಳು ತ್ತಿದ್ದರು. ಎಲ್ಲ ಪಕ್ಷಗಳ ರಾಜಕಾರಣಿಗಳ ಮಧ್ಯೆ ಒಳ್ಳೆಯ ಸಂಬಂಧವಿರುತ್ತಿತ್ತು. ನಮ್ಮ ಸಿದ್ಧಾಂತಗಳು ಬೇರೆಯಾದರೂ ಧ್ಯೇಯ ಒಂದೇ ಆಗಿತ್ತು. ಅದು ರಾಜ್ಯದ ಮತ್ತು ಜನರ ಕಲ್ಯಾಣವೇ ಆಗಿರುತ್ತಿತ್ತು.
ಆದರೆ ಕೋಟಿ ಕೋಟಿ ಕೊಟ್ಟು ಟಿಕೆಟ್‌ ತರುವುದು, ಕೋಟಿ ಕೋಟಿ ಖರ್ಚು ಮಾಡಿ ಚುನಾವಣೆ ನಡೆಸುವುದು ಇಂದಿನ ವಿಪರ್ಯಾಸ. ಮೌಲ್ಯಾಧಾರಿತ ರಾಜಕಾರಣವನ್ನು ಎಂದಿಗೂ ಬಿಟ್ಟು ಕೊಡಲಿಲ್ಲ. ಹೀಗಾಗಿಯೇ ಬಹುಶಃ ನನಗೆ ಸಚಿವ ಸ್ಥಾನ ಸಿಕ್ಕಿರಲಿಕ್ಕಿಲ್ಲ. ನಾನು ಬಡವರ ಕಲ್ಯಾಣವನ್ನೇ ಧ್ಯೇಯ ಮಾಡಿಕೊಂಡಿದ್ದೆ. ಹೀಗಾಗಿಯೇ ನನಗೆ ಪಕ್ಷಗಳು ಟಿಕೆಟ್‌ ನೀಡಲು ನಿರಾಕರಿಸಿದಾಗ ಜನರೇ ಸ್ವತಂತ್ರವಾಗಿ ನಿಲ್ಲಿಸಿ ಅವರೇ ಕೈಯಿಂದ ಕೇವಲ ಎಂಟØತ್ತು ಸಾವಿರ ರೂ. ಖರ್ಚು ಮಾಡಿ ವಿಧಾನಸಭೆಗೆ ಆಯ್ಕೆ ಮಾಡಿದರು.

ನಾನು ಅಂದಾನಪ್ಪ ದೊಡ್ಡಮೇಟಿ,  ಹಳ್ಳಿಕೇರಿ ಮತ್ತು ಎಸ್‌.ನಿಜಲಿಂಗಪ್ಪ ಅವರ ಗರಡಿಯಲ್ಲಿ ತಯಾರಾಗಿ ರಾಜಕೀಯಕ್ಕೆ ಧುಮುಕಿದಾಗ ನೆಲೆ ಸಿಕ್ಕುವುದು ಕಷ್ಟವಾಗಿತ್ತು. ಧಾರವಾಡ ಸುತ್ತಮುತ್ತಲಿನ ಹಳ್ಳಿಗಳಿಗೆ ಸೈಕಲ್‌ ಮೇಲೆ ಸಂಚಾರ ಮಾಡುತ್ತಿದ್ದೆ. ಜನರನ್ನು ಭೇಟಿಯಾಗಿ, ರೈತರು, ಕೂಲಿ ಕಾರ್ಮಿಕರು, ಬಡವರ ಕಷ್ಟಗಳೇನು ಎಂದು ಪ್ರಶ್ನಿಸಿ ಕೇಳುತ್ತಿದ್ದೆ. ಅವರ ಸಮಸ್ಯೆಗಳನ್ನು ಅಂದಿನ ರಾಜಕೀಯ ವೇದಿಕೆಗಳಲ್ಲಿ ತೆರೆದಿಟ್ಟು ಇದಕ್ಕೆ ಪರಿಹಾರ ಸಿಕ್ಕಬೇಕೆಂದು ಆಗ್ರಹಿಸುತ್ತಿದ್ದೆ. ಕೊನೆಗೆ ಒಂದು ದಿನ ನಾನೇ ಶಾಸಕನಾಗಿ ಆಯ್ಕೆಯಾಗಿ ಅವರ ಸಮಸ್ಯೆ ಗಳಿಗೆ ಸ್ಪಂದಿಸುವ ಅವಕಾಶ ಸಿಕ್ಕಿತು.

1985, 1994, 1999 ಹಾಗೂ 2008 ಒಟ್ಟು ನಾಲ್ಕು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದೆ. ಈಗ ಮಗ ಅರವಿಂದ ಬೆಲ್ಲದ ಸತತ ಎರಡು ಬಾರಿ ಹು-ಧಾ ಪಶ್ಚಿಮ ವಿಧಾನಸಭಾ ಕ್ಷೇತ್ರದಿಂದ ಆಯ್ಕೆ ಯಾಗಿದ್ದಾನೆ. ನಾವು ಅಂದು ಮೌಲ್ಯಗಳನ್ನು ಬಿತ್ತಿ, ಮೌಲ್ಯಗಳನ್ನು ಬೆಳೆದವು. ಆದರೆ ಇಂದು ಹಣವನ್ನು ಬಿತ್ತಿ ಹಣ ಬೆಳೆಯುವ ಪ್ರವೃತ್ತಿ ರಾಜಕಾರಣದಲ್ಲಿ ಸೇರಿಕೊಂಡಿದೆ. ನಾನು ಉದ್ಯಮಿಯಾಗಿ ಯಶಸ್ವಿಯಾಗಿದ್ದು ಒಂದು ಕಡೆಯಾದರೆ, ಸಾರ್ವಜನಿಕ ಜೀವನದಲ್ಲಿ ನಿಷ್ಕಳಂಕವಾಗಿ ರಾಜಕೀಯ ಜೀವನ ನಡೆಸಿದ ಆತ್ಮತೃಪ್ತಿ ನನಗಿದೆ. ಆರೋಪ ಮಾಡುವ ವಿಪಕ್ಷಗಳನ್ನು ಸಹ ವಿಶ್ವಾಸಕ್ಕೆ ತೆಗೆದುಕೊಂಡು ರಾಜಕಾರಣ ಮಾಡಿದೆ. ಆದರೆ ಕೊನೆವರೆಗೂ ಸಚಿವನಾಗುವ ಅವಕಾಶ ಸಿಕ್ಕಲೇ ಇಲ್ಲ.

ಉತ್ತರ ಕರ್ನಾಟಕ ಭಾಗ ಅದರಲ್ಲೂ ಹುಬ್ಬಳ್ಳಿ-ಧಾರವಾಡ ಅಭಿವೃದ್ಧಿ ಗಗನ ಕುಸುಮವಾಗಿತ್ತು. ಒಂದು ಉತ್ತಮ ಬಸ್‌ ಇಲ್ಲಿಗೆ ಬರುತ್ತಿರಲಿಲ್ಲ. ಒಂದು ಒಳ್ಳೆಯ ಆಸ್ಪತ್ರೆ ಇಲ್ಲಿ ಇರಲಿಲ್ಲ. ಅಂತಹ ಸಂದರ್ಭದಲ್ಲಿ ಈ ಭಾಗದ ಜನರ ಧ್ವನಿಯಾಗಿ ಕೆಲಸ ಮಾಡಿದೆ. ಸರಕಾರ, ಸಚಿವರು ಸ್ಪಂದಿಸಿದರು. ಇಂದು ಧಾರವಾಡ ವಿದ್ಯಾಕಾಶಿಯಾಗಿ ಅಭಿವೃದ್ಧಿ ಹೊಂದಿ ನಿಂತಿದೆ.

Advertisement

ಇನ್ನು ಚುನಾವಣೆಯಲ್ಲಿ ಇಷ್ಟೊಂದು ದೊಡ್ಡ ಪಡೆ, ಖರ್ಚು, ಜಾತ್ರೆಯಂತಹ ಜನಸ್ತೋಮ ಅಂದು ಇರಲಿಲ್ಲ. ನಾವೆಲ್ಲ ಸ್ನೇಹಿತರು, ಹಿತೈಷಿಗಳು, ಸಂಬಂಧಿಗಳನ್ನು ಭೇಟಿಯಾಗಿ ಅಲ್ಲಲ್ಲಿ ಸಭೆ ಸಮಾರಂಭಗಳನ್ನು ಮಾಡಿ ಮತ ಯಾಚಿಸುತ್ತಿದ್ದೆವು. ಇಂದು ಚುನಾವಣೆ ಸ್ವರೂಪವೇ ಬದಲಾಗಿ ಹೋ ಗಿದೆ. ಮತ್ತೆ ಎಸ್‌.ನಿಜಲಿಂಗಪ್ಪ, ರಾಮಕೃಷ್ಣ ಹೆಗಡೆ ಅವರಂತಹ ಮಹನೀಯರು ರಾಜಕಾರಣದಲ್ಲಿ ಹುಟ್ಟಿ ಬರಬೇಕು. ಅವರಿಂದ ಮೌಲ್ಯಾಧಾರಿತ ರಾಜಕಾರಣ ಮತ್ತೆ ನೆಲೆಗೊಳ್ಳಬೇಕು.

-ಬಸವರಾಜ್‌ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next