Advertisement

Dharwad: ಸೆ.21-24 ರವರೆಗೆ ಧಾರವಾಡ ಕೃಷಿ ಮೇಳ; 20 ಲಕ್ಷ ಜನರ ಭೇಟಿ ಸಾಧ್ಯತೆ

01:20 PM Sep 14, 2024 | Team Udayavani |

ಧಾರವಾಡ: ದೇಶದ ಟಾಪ್ ಟೆನ್ ಕೃಷಿ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿರುವ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿ ಮೇಳವನ್ನು ಇದೇ ಸೆಪ್ಟೆಂಬರ್ 21ರಿಂದ 24 ರವರೆಗೆ ನಡೆಸಲಾಗುತ್ತಿದೆ ಎಂದು ಕೃಷಿ ವಿವಿ ಕುಲಪತಿ ಡಾ. ಪಿ.ಎಲ್. ಪಾಟೀಲ್ ಹೇಳಿದರು.

Advertisement

ಕೆವಿವಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹವಾಮಾನ ವೈಪರೀತ್ಯ ನಿರ್ವಹಣೆಗೆ ಕೃಷಿ ತಾಂತ್ರಿಕತೆಗಳು ವಿಷಯದ ಮೇಲೆ ಕೃಷಿ ಮೇಳವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ, ಸಭಾಪತಿ ಬಸವರಾಜ ಹೊರಟ್ಟಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮುಖ್ಯ ಸಚೇತಕ ಸಲೀಂ ಅಹ್ಮದ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಉಪಸ್ಥಿತಿ ವಹಿಸಲಿದ್ದಾರೆ. ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ಕೃಷಿ ಪ್ರಕಟಣೆಗಳನ್ನು ಬಿಡುಗಡೆಗೊಳಿಸಲಿದ್ದಾರೆ‌. ಉಳಿದಂತೆ ಹಲವಾರು ಅತಿಥಿಗಳು ಭಾಗವಹಿಸಲಿದ್ದಾರೆ ಎಂದರು.

ನಾಲ್ಕು ದಿನಗಳ‌ ಕಾಲ ನಡೆಯುವ ಮೇಳದಲ್ಲಿ ಬೀಜಮೇಳ, ಫಲಪುಷ್ಪ ಮೇಳ, ಮತ್ಸ್ಯಮೇಳ, ಜಾನುವಾರು ಮೇಳ, ಕೃಷಿ ತಜ್ಞರೊಂದಿಗೆ ಸಮಾಲೋಚನೆ, ಕೃಷಿಯ ಹೊಸ ಆವಿಷ್ಕಾರಗಳು, ಅಂತರ್ಜಲ ಮರುಪೂರಣ ಸೇರಿದಂತೆ ಹಲವು ಕೃಷಿ ಚಟುಚಟಿಕೆಗಳ ಮಾಹಿತಿಯನ್ನು ರೈತರು ಪಡೆದು ಕೊಳ್ಳಬಹುದು ಎಂದರು.

ಕೃಷಿ ವಸ್ತು ಪ್ರದರ್ಶದಲ್ಲಿ 150 ಹೈಟೆಕ್ ಮಳಿಗೆ, 214 ಸಾಮಾನ್ಯ ಮಳಿಗೆ, 110 ಯಂತ್ರೋಪಕರಣ ಮಳಿಗೆ, 27 ಟ್ರ್ಯಾಕ್ಟರ್ ಸೇರಿದಂತೆ ಭಾರಿ ಯಂತ್ರೋಪಕರಣಗಳ ಮಳಿಗೆ ಹಾಗೂ 28 ಆಹಾರ ಮಳಿಗೆಗಳು ಬುಕ್ ಆಗಿದೆ ಎಂದು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.