ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆಯುವ ಪರೀಕ್ಷಾ ಪೇ ಚರ್ಚಾ 2022ರ ನೋಂದಣಿ ಶನಿವಾರ ಆರಂಭವಾಗಿದೆ.
ಚರ್ಚೆಯಲ್ಲಿ ಭಾಗವಹಿಸಿ, ಶಿಕ್ಷಣದ ಈಗಿನ ಟ್ರೆಂಡ್‌ಗಳ ಬಗ್ಗೆ ತಿಳಿದುಕೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿಯ ವರು, ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಿಗೆ ಕರೆ ನೀಡಿದ್ದಾರೆ.
“ಪರೀಕ್ಷಾ ಪೇ ಚರ್ಚಾ ನನಗೆ ವೈಯಕ್ತಿಕವಾಗಿ ಸಾಕಷ್ಟು ಕಲಿಯುವುದಕ್ಕೆ ಅವಕಾಶ ಮಾಡಿಕೊಟ್ಟಿದೆ. ದೇಶದ ಡೈನಮಿಕ್ ಯುವಕರೊಂದಿಗೆ ಸಂಪರ್ಕ ಸಾಧಿಸಿಕೊಳ್ಳುವುದಕ್ಕೆ, ಅವರ ಬದುಕಿನ ಸವಾಲುಗಳು ಮತ್ತು ಅವರ ಗುರಿಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ’ ಎಂದು ಪ್ರಧಾನಿಯವರು ತಿಳಿಸಿದ್ದಾರೆ.
ಇದನ್ನೂ ಓದಿ:ಭಾರತದ ಪ್ರಸಿದ್ಧ ಮೋಟಾರು ವಾಹನ ಸಂಸ್ಥೆಯಾದ ಮಾರುತಿ ಕಾರುಗಳ ಬೆಲೆ ಶೇ.4.3 ಏರಿಕೆ
“ಪರೀಕ್ಷೆಗಳು ಹತ್ತಿರವಾ ಗುತ್ತಿವೆ ಹಾಗೆಯೇ ಪರೀಕ್ಷಾ ಪೇ ಚರ್ಚಾ 2022 ಕೂಡ. ಚಿಂತೆಯಿಲ್ಲದೆ ಪರೀಕ್ಷೆ ಬರೆಯುವ ಬಗ್ಗೆ ಚರ್ಚಿಸೋಣ, ನಮ್ಮ ಬುದ್ಧಿವಂತ ಮಕ್ಕಳನ್ನು ಪ್ರೋತಾಹಿ ಸೋಣ’ ಎಂದು ಅವರು ಟ್ವಿಟರ್‌ನಲ್ಲಿ ಹೇಳಿದ್ದಾರೆ.
ಪರೀಕ್ಷಾ ಪೇ ಚರ್ಚಾದಲ್ಲಿ ಭಾಗವ ಹಿಸಲು ಬಯಸುವ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು
mygov.in ನಲ್ಲಿ ನೇರವಾಗಿ ನೋಂದಣಿ ಮಾಡಿಕೊಳ್ಳಬಹುದು.