Advertisement

ಧರ್ಮಸ್ಥಳ ಸಂಸ್ಥೆ ಕಾರ್ಯ ಶ್ಲಾಘನೀಯ

11:29 AM Nov 27, 2018 | |

ಅಫಜಲಪುರ: ಧರ್ಮಸ್ಥಳದ ವೀರೇಂದ್ರ ಹೆಗ್ಡೆ ಅವರು ಸ್ಥಾಪಿಸಿದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಮಾಜಮುಖೀ ಕಾರ್ಯ ಶ್ಲಾಘನೀಯ ಎಂದು ಶಾಸಕ ಎಂ.ವೈ. ಪಾಟೀಲ ಹೇಳಿದರು. ತಾಲೂಕಿನ ಬಡದಾಳ ಗ್ರಾಮದಲ್ಲಿ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಬಡದಾಳ ವಲಯದಲ್ಲಿ ನೂತನ ಒಕ್ಕೂಟಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

Advertisement

ಧರ್ಮಸ್ಥಳ ಸಂಸ್ಥೆ ಹೆಣ್ಣು ಮಕ್ಕಳನ್ನು ಮುಖ್ಯವಾಹಿನಿಗೆ ತರುವ ಕೆಲಸ ಮಾಡಿದೆ. ಹೆಣ್ಣುಮಕ್ಕಳೇ ಅಭಿವೃದ್ಧಿ ರಾಯಭಾರಿಗಳಾಗಿದ್ದಾರೆ. ಮಹಿಳಾ ಸಬಲೀಕರಣಕ್ಕೆ ಧರ್ಮಸ್ಥಳ ಸಂಸ್ಥೆ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು. ಸಾನ್ನಿಧ್ಯ ವಹಿಸಿದ್ದ ಬಡದಾಳ ಮಠದ ಶ್ರೀ ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರು ಮಾತನಾಡಿ, ಸಂಸಾರ ಸರಿದಾಯಲ್ಲಿ ನಡೆಯಲು ಮಹಿಳೆ ಮುಖ್ಯ ಕಾರಣವಾಗುತ್ತಾಳೆ. ಮಹಿಳೆ ಸಂಸಾರದ ಕಣ್ಣು ಎಂದು ಸುಮ್ಮನೆ ಹೇಳಿಲ್ಲ. ಸುಂದರ, ಸ್ವಾವಲಂಬಿ ಬದುಕು ನಡೆಸಲು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಕೆಲಸ ಶ್ಲಾಘನೀಯಾಗಿದೆ ಎಂದು ಹೇಳಿದರು.

ಧರ್ಮಸ್ಥಳ ಸಂಸ್ಥೆ ಜಿಲ್ಲಾ ನಿರ್ದೇಶಕ ನಾಗರಾಜ ಶೆಟ್ಟಿ ಮಾತನಾಡಿ, ಧರ್ಮಸ್ಥಳ ಸಂಸ್ಥೆ ಈ ಭಾಗಕ್ಕೆ ಕಾಲಿಟ್ಟು 3 ವರ್ಷ ಗತಿಸಿದೆ. 3 ವರ್ಷಗಳಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ. ಸಂಘದಲ್ಲಿರುವ ಹೆಣ್ಣುಮಕ್ಕಳು ವಾರಕ್ಕೆ 10 ರೂ. ಜಮಾ ಮಾಡುತ್ತಾರೆ. ಬಡದಾಳ ವಲಯದವರು ತುಂಬಿದ ಹಣ ಇಲ್ಲಿಯವರೆಗೆ 1.5 ಕೋಟಿ ದಾಟಿ ಸಂಗ್ರಹವಾಗಿದೆ ಎಂದು ವಿವರಿಸಿದರು.

ಚಿಂಚೋಳಿ ಗದ್ದುಗೇಶ್ವರ ಮಲ್ಲಿಕಾರ್ಜುನ ಶಿವಾಚಾರ್ಯರು, ಬಡದಾಳ ವಲಯ ಅಧ್ಯಕ್ಷೆ ಚಂದಮ್ಮ ಪಾಟೀಲ, ಮುಖಂಡರಾದ ಅಶೋಕ ಗುತ್ತೇದಾರ, ಮಹಾಂತಪ್ಪ ಬಬಲೇಶ್ವರ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಕವಿತಾ ಸೋನಾರ, ಸದಸ್ಯರಾದ ಶರಣಬಸಪ್ಪ ಅತನೂರೆ, ಚನ್ನಪ್ಪ ಮಳಗಿ, ವಿನೋದ ಅತನೂರ, ಶರಣು ರುದ್ದೇವಾಡಿ, ಪಿಡಿಒ ವಾಸೀಮ್‌ ಮಣೂರಕರ, ಮುಖಂಡರಾದ ಸಿದ್ದಾರ್ಥ ಬಸರಿಗಿಡ, ಬೀರಣ್ಣ ಕಲ್ಲೂರ ಇದ್ದರು. ಧರ್ಮಸ್ಥಳ ಸಂಸ್ಥೆಯ ನಾಗೇಶ ಸ್ವಾಗತಿಸಿದರು. ಯೋಜನಾಧಿಕಾರಿ ನವಿನಕುಮಾರ ನಿರೂಪಿಸಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next