Advertisement

ಧರ್ಮಸ್ಥಳ: ರಾಜ್ಯಾದ್ಯಂತ ಮುಷ್ಕರ, ಬಾಣಸಿಗರಾದ ಸಾರಿಗೆ ನೌಕರರು

12:21 PM Dec 12, 2020 | sudhir |

ಬೆಳ್ತಂಗಡಿ: ಸಾರಿಗೆ ನೌಕರರನ್ನು ಸರಕಾರಿ ನೌಕರರಾಗಿ ಪರಿಗಣಿಸಬೇಕು ಎಂಬ ನೆಲೆಯಲ್ಲಿ ರಾಜ್ಯಾದ್ಯಂತ ಹಮ್ಮಿಕೊಂಡ ಮುಷ್ಕರದ‌ ಹಿನ್ನೆಲೆ ಧರ್ಮಸ್ಥಳ ಡಿಪ್ಪೋದಿಂದ ಯಾವುದೇ ಬಸ್ ಓಡಾಟ ನಡೆಸದೆ ಮುಷ್ಕರವನ್ನು ಬೆಂಬಲಿಸಿದೆ.

Advertisement

ಪರಿಣಾಮ ಶನಿವಾರ ಧರ್ಮಸ್ಥಳ ಲಕ್ಷದೀಪೋತ್ಸವಕ್ಕೆ ನಾನಾ ಕಡೆಯಿಂದ ಬಂದ ಭಕ್ತರು ಹಿಂದೆ ತೆರಳಲು ಸಾರಿಗೆ ವ್ಯವಸ್ಥೆ ಇಲ್ಲದೆ ಪರದಾಡಿದರು.

ಬಸ್ ನಿಲ್ದಾಣದಲ್ಲೇ ಉಪಹಾರ ವ್ಯವಸ್ಥೆ

ಶನಿವಾರ ಮುಷ್ಕರದಿಂದಾಗಿ ನೂರಾರು ಸಾರಿಗೆ ಸಿಬಂದಿ ಧರ್ಮಸ್ಥಳ ಬಸ್ ನಿಲ್ದಾಣದಲ್ಲಿ ಉಪಹಾರ ವ್ಯವಸ್ಥೆ ಮಾಡಿಕೊಂಡರು. ಚಾಲಕರ ನಿರ್ವಾಹಕರು ಸೌಟು ಹಿಡಿದು ಅಡುಗೆ ಸಿದ್ಧಪಡಿಸಿದ್ದಾರೆ. ನಿಲ್ದಾಣದಲ್ಲೇ ಪ್ರಯಾಣಿಕರಿಗು ಉಪಹಾರ ವ್ಯವಸ್ಥೆ ಮಾಡಿದರು.

Advertisement

ಎರಡನೇ ಶನಿವಾರವಾದ್ದರಿಂದ ಧರ್ಮಸ್ಥಳಕ್ಕೆ ಬರುವ ಭಕ್ತರಿಗೆ ಅಡಚಣೆಯಾಗಿದೆ. ವಿಶೇಷ ಬಸ್ ಗಳ ವ್ಯವಸ್ಥೆಯೂ ಸ್ಥಗಿತವಾಗಿದೆ.

ಶುಕ್ರವಾರ ಸಹಜ ಸ್ಥಿತಿಯಲ್ಲಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಓಡಾಟವು ಶನಿವಾರ ನೌಕರರ ಮುಷ್ಕರ ಪರಿಣಾಮ ಸ್ಥಗಿತಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next