ಡಾ| ವೀರೇಂದ್ರ ಹೆಗ್ಗಡೆ ಅವರ ಸಮಾಜಮುಖೀ ಚಿಂತನೆಗಳು ಸರಕಾರದ ಯೋಜನೆಗಿಂತಲೂ ಮಿಗಿಲಾದುದು. ಈ ಮೂಲಕ ಗ್ರಾಮಗಳು ವ್ಯಸನ ಮುಕ್ತವಾಗಿ ರಾಮರಾಜ್ಯದ ಕನಸು ನನಸಾಗಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅನ್ನಾಸಾಹೇಬ್ ಹೇಳಿದರು. ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆ ಆಶ್ರಯದಲ್ಲಿ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಮಂಗಳವಾರ ನಡೆದ ವ್ಯಸನಮುಕ್ತ ಸಾಧಕರ ಸಮಾವೇಶ ಮತ್ತು ಶತದಿನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
Advertisement
ವ್ಯಸನ ಮಕ್ತಿಯಿಂದ ನವಜೀವನಹೇಮಾವತಿ ವೀ. ಹೆಗ್ಗಡೆ ಮಾತನಾಡಿ, ಮಹಿಳೆಯರು ದುಶ್ಚಟಗಳ ದಮನ ಮಾಡುವ ಸಂಕಲ್ಪ ಶಕ್ತಿ ಮತ್ತು ಆತ್ಮ ಬಲ ಹೊಂದಬೇಕು. ಜನಜಾಗೃತಿ ವೇದಿಕೆಯ ನಿರಂತರ ಪರಿಶ್ರಮ- ಪ್ರಯತ್ನದಿಂದ ಅನೇಕ ಕುಟುಂಬಗಳು ವ್ಯಸನ ಮುಕ್ತವಾಗಿ ಇಂದು ನವಜೀವನ ನಡೆಸುತ್ತಿವೆ ಎಂದು ಹೇಳಿದರು.
Related Articles
- ಜನಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷ ಕೆ. ವಸಂತ ಸಾಲ್ಯಾನ್ ಅವರನ್ನು ಸಮ್ಮಾನಿಸಲಾಯಿತು.
Advertisement
- ರಾಜ್ಯ ಮದ್ಯಪಾನ ಸಂಯಮ ಮಂಡಳಿ ಕಾರ್ಯದರ್ಶಿ ಕೆ. ರೋಹಿಣಿ ಜನಜಾಗೃತಿ ವೇದಿಕೆಗೆ ಮದ್ಯವರ್ಜನ ಶಿಬಿರ ಆಯೋಜಿಸಲು 10 ಲಕ್ಷ ರೂ. ನೆರವು ನೀಡಿದರು.
- ಮದ್ಯವರ್ಜನ ಶಿಬಿರದಲ್ಲಿ ವ್ಯಸನ ಮುಕ್ತರಾಗಿ ನವಜೀವನ ನಡೆಸುತ್ತಿರುವ ಹುಣಸೂರಿನ ಕೃಷ್ಣೇಗೌಡ ಮತ್ತು ಮಂಡ್ಯದ ಸವಿತಾ ರುದ್ರಾಚಾರಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
- ಮದ್ಯ ವ್ಯಸನಿಗಳ ಮನಃಪರಿವರ್ತನೆ ಮಾಡಿ ವ್ಯಸನ ಮುಕ್ತರನ್ನಾಗಿ ಮಾಡಿದ 10 ಮಂದಿ ಸಾಧಕರಿಗೆ ಜಾಗೃತಿ ಅಣ್ಣ ಮತ್ತು ಜಾಗೃತಿ ಮಿತ್ರ ಪುರಸ್ಕಾರ ನೀಡಿ ಗೌರವಿಸಲಾಯಿತು. ವೇದಿಕೆಯ ಅನಂತ್ ರಚಿಸಿದ ಭಕ್ತಿಗೀತೆಯ ಧ್ವನಿಸುರುಳಿಯನ್ನು ಡಾ| ಹೆಗ್ಗಡೆ ಬಿಡುಗಡೆಗೊಳಿಸಿದರು.
- ಸಮಾವೇಶದಲ್ಲಿ 63 ತಾಲೂಕುಗಳ 3,037 ಮಂದಿ ನವಜೀವನ ಸದಸ್ಯರು ಭಾಗವಹಿಸಿದ್ದರು.