Advertisement

Dharmasthala: ದೇವರ ದರ್ಶನ ಇನ್ನಷ್ಟು ಸುಲಲಿತ

02:35 PM Jan 08, 2025 | Team Udayavani |

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ದೇವಾಲಯದ ನಿರ್ವ ಹಣೆ ಮತ್ತು ಭಕ್ತರ ನೋಡಿಕೊಳ್ಳುವಿಕೆ ವಿಚಾರದಲ್ಲಿ ಒಂದು ಮಾದರಿ ಧಾರ್ಮಿಕ ಕ್ಷೇತ್ರವೆಂದು ಪರಿಗಣಿಸಲಾಗಿದೆ. ಇದೀಗ ಹೊಸ ಸರತಿ ಸಾಲಿನ ಸಂಕೀರ್ಣ ‘ಶ್ರೀ ಸಾನ್ನಿಧ್ಯ’ ಲೋಕಾರ್ಪಣೆಯೊಂದಿಗೆ ಈ ಗೌರವ ಇನ್ನಷ್ಟು ಹೆಚ್ಚಲಿದೆ.

Advertisement

ದೇವಸ್ಥಾನದ ಒಂದು ಭಾಗದಲ್ಲಿ ನಿರ್ಮಾಣವಾಗಿರುವ ನೂತನ ಸರತಿ ಸಾಲಿನ ಸಂಕೀರ್ಣದ ವಿಸ್ತೀರ್ಣ 2,75, 177 ಚದರ ಅಡಿ ಆಗಿದ್ದು ವೃತ್ತಾಕಾರದಲ್ಲಿದೆ. ಇದುವರೆಗೆ ದೇವಸ್ಥಾನದ ಸುತ್ತ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದ ಭಕ್ತರು ಇನ್ನು ಮುಂದೆ ಈ ಭವನದ ಮೂಲಕ ಆರಾಮವಾಗಿ ದೇವರ ದರ್ಶನಕ್ಕೆ ತೆರಳಬಹುದು. ಈ ಭವನವು ಎರಡು ಅಂತಸ್ತುಗಳು ಮತ್ತು 16 ವಿಶಾಲ ಭವನಗಳೊಂದಿಗೆ ಸಜ್ಜಿತವಾಗಿದೆ. ಪ್ರತಿ ಭವನದಲ್ಲಿ 600ರಿಂದ 800 ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಏಕ ಕಾಲಕ್ಕೆ ಒಟ್ಟು 10,000-12,000 ಜನರಿಗೆ ವ್ಯವಸ್ಥೆಯನ್ನು ಮಾಡಲಾಗಿದೆ. ಅಂದರೆ ಭಕ್ತರು ಸರತಿ ಸಾಲಿನಲ್ಲಿ ನಿಂತು ಕಾಯುವ ಬದಲು ಭವನದಲ್ಲಿ ಆರಾಮವಾಗಿ ಕುಳಿತು ತಮ್ಮ ಸಮಯ ಬಂದಾಗ ಮುಂದಿನ ಭವನಕ್ಕೆ ಸ್ಥಳಾಂತರಗೊಳ್ಳುತ್ತಾ ಸಾಗಿ ನಿರಾಳವಾಗಿ ದೇವರ ದರ್ಶನ ಮಾಡಬಹುದು.

ಕ್ಯೂ ಕಾಂಪ್ಲೆಕ್ಸ್‌ನ ಕಾರ್ಯಾಚರ ಣೆಯು ಸುಧಾರಿತ ತಂತ್ರಜ್ಞಾನದೊಂದಿಗೆ ಸಂಯೋಜಿಸಲ್ಪಟ್ಟಿದೆ. ಪ್ರತೀ ಹಂತದಲ್ಲೂ ದಕ್ಷತೆ ಮತ್ತು ನಾವೀನ್ಯತೆಯನ್ನು ಕಾಣಬಹುದಾಗಿದೆ.

ಸೌರ ವಿದ್ಯುತ್‌
ಕ್ಯೂ ಕಾಂಪ್ಲೆಕ್ಸ್‌ನ ವಿದ್ಯುತ್‌ ಮತ್ತು ನೀರಿನ ನಿರ್ವಹಣೆಗಾಗಿ 650 ಕಿಲೋ ವ್ಯಾಟ್‌ ಸಾಮರ್ಥ್ಯದ ಸೌರ ವಿದ್ಯುತ್‌ ಘಟಕವನ್ನು ಅಳವಡಿಸಲಾಗಿದೆ.

Advertisement

ಭವನಗಳಲ್ಲಿ ಏನೇನಿದೆ?
ಪ್ರತೀ ವಿಶಾಲ ಭವನದಲ್ಲಿ ಪ್ರವೇಶ, ನಿರ್ಗಮನ ಮತ್ತು ತುರ್ತು ನಿರ್ಗಮನ ದ್ವಾರಗಳನ್ನು ಹೊಂದಿದೆ. ಇದರಲ್ಲಿ ಕುಡಿಯುವ ನೀರು, ಶೌಚಾಲಯ ಸೌಲಭ್ಯಗಳು, ಶಿಶುಪಾಲನ ಕೊಠಡಿ ಮತ್ತು ಕಫೆಟೇರಿಯಾ ಸೌಲಭ್ಯಗಳಿವೆ. ಆಧ್ಯಾತ್ಮಿಕ ಮತ್ತು ಇತರ ವಿಷಯಗಳ ಬಗ್ಗೆ ಡಿಜಿಟಲ್‌ ಟಿ.ವಿ.ಗಳ ಮೂಲಕ ಮಾಹಿತಿ, ಮಾರ್ಗದರ್ಶನಗಳನ್ನು ನೀಡಲಾಗುತ್ತದೆ.

ಸುಸಜ್ಜಿತವಾದ 150 ಎಐ ಆಧಾರಿತ ಕೆಮರಾಗಳ ಮೂಲಕ ನಿಖರವಾಗಿ ಜನರ ಎಣಿಕೆ ಮಾಡಬಹುದು. ಈ ಸ್ಮಾರ್ಟ್‌ ಕೆಮೆರಾಗಳನ್ನು ಸೂಕ್ತ ಸಾಫ್ಟ್‌ ವೇರ್‌ ಮತ್ತು ಅಪ್ಲಿಕೇಶನ್‌ಗಳೊಂದಿಗೆ ಅಳವಡಿಸಲಾಗಿದೆ. ಕಣ್ಗಾವಲಿಗೂ ಇವು ಸೂಕ್ತವಾಗಿವೆ.
ಪ್ರತೀ ಸಭಾಂಗಣಗಳಲ್ಲಿ ಹೈ-ವಾಲ್ಯೂಮ್‌, ಕಡಿಮೆ-ವೇಗದ (ಎಚ್‌ಎಎಲ್‌ಎಸ್‌) ಫ್ಯಾನ್‌ ಅಳವಡಿಸಲಾಗಿದೆ.

ವ್ಯಕ್ತಿ, ವಸ್ತು ಪತ್ತೆಗೆ ಸಾಫ್ಟ್ವೇರ್‌!
ಬಾಶ್‌ ವೀಡಿಯೊ ಮ್ಯಾನೇಜ್‌ಮೆಂಟ್‌ ಸಾಫ್ಟ್‌ವೇರ್‌(ಬಿವಿಎಂಎಸ್‌) ಮತ್ತು ದಿವಾರ್‌ ಎಂಡ್‌ 2 ಸರ್ವರ್‌ ಅಳವಡಿಕೆಯ ಮೂಲಕ ರೆಕಾರ್ಡ್‌ ಮಾಡಲಾದ ತುಣುಕುಗಳಿಂದ ವ್ಯಕ್ತಿಗಳು ಅಥವಾ ವಸ್ತುಗಳನ್ನು ಸುಲಭವಾಗಿ ಹುಡುಕಲು ಮತ್ತು ಗುರುತಿಸಲು ಸಾಧ್ಯವಾಗುತ್ತದೆ. ಈ ವ್ಯವಸ್ಥೆಯ ಮೂಲಕ ಭದ್ರತಾ ಕ್ರಮಗಳನ್ನು ಗಮನಾರ್ಹವಾಗಿ ಹೆಚ್ಚಿಸಲು ಸಾಧ್ಯವಾಗಲಿದೆ.

263 ಸ್ಪೀಕರ್‌, 54 ಆಂಪ್ಲಿಫೈಯರ್‌
ಕ್ಯೂ ಕಾಂಪ್ಲೆಕ್ಸ್‌ ಮತ್ತು ದೇವಸ್ಥಾನದಲ್ಲಿ ಒಟ್ಟು 263 ಸ್ಪೀಕರ್‌ ಮತ್ತು 54 ಆಂಪ್ಲಿಫೈಯರ್‌ಗಳನ್ನು ಅಳವಡಿಸಲಾಗಿದೆ. ಕಮಾಂಡ್‌ ಸೆಂಟರ್‌ನಿಂದ ನೇರವಾಗಿ ನಿ ರ್ದಿಷ್ಟ ಮತ್ತು ಸಾಮಾನ್ಯ ಪ್ರಕಟನೆಗಳನ್ನು ಮಾಡಲಾಗುತ್ತದೆ. ಪ್ರಕಟನೆಗಳ ಮೂಲಕ ಪ್ರಮುಖ ಬದಲಾವಣೆಗಳ ಬಗ್ಗೆ ಭಕ್ತರಿಗೆ ತಿಳಿಸುವುದರಿಂದ. ಯಾವುದೇ ಗೊಂದಲವಿಲ್ಲದೆ ಮಾರ್ಗದರ್ಶನ ನೀಡಲು ಸಾಧ್ಯವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next