Advertisement

ನಾಳೆ ಧರ್ಮಾಧಿಕಾರಿ ಡಾ|ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ವರ್ಧಂತಿ ಆಚರಣೆ

01:23 AM Oct 23, 2021 | Team Udayavani |

ಬೆಳ್ತಂಗಡಿ: ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ 54ನೇ ವರ್ಷದ ಪಟ್ಟಾಭಿಷೇಕ ವರ್ಧಂತಿ ಆಚರಣೆ ಅ. 24ರಂದು ರವಿವಾರ ಸರಳವಾಗಿ ನಡೆಯಲಿದೆ.

Advertisement

ಆ ದಿನ ಭಗವಾನ್‌ ಶ್ರೀ ಚಂದ್ರನಾಥ ಸ್ವಾಮಿ ಬಸದಿ ಹಾಗೂ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಲಿದೆ. ಸಂಜೆ 5ಕ್ಕೆ ಮಹೋತ್ಸವ ಸಭಾಭವನದಲ್ಲಿ ನಡೆಯುವ ಸಮಾರಂಭದಲ್ಲಿ ತುಮಕೂರಿನ ನಿವೃತ್ತ ಜಿಲ್ಲಾಧಿಕಾರಿ ಸಿ. ಸೋಮಶೇಖರ್‌ ಅಭಿನಂದನ ಭಾಷಣ ಮಾಡುವರು. ಆ ಬಳಿಕ ಡಾ| ಹೆಗ್ಗಡೆಯವರು ಮುಂದಿನ ವರ್ಷದ ಹೊಸ ಯೋಜನೆಗಳನ್ನು ಪ್ರಕಟಿಸುವರು.

ಹಿರಿಯ ನೌಕರರಾದ ಶುಭಚಂದ್ರರಾಜ ಮತ್ತು ತೋಟಗಾರಿಕಾ ವಿಭಾಗದ ಮುಖ್ಯಸ್ಥ ಬಾಲಕೃಷ್ಣ ಪೂಜಾರಿ ಅವರನ್ನು ಹೆಗ್ಗಡೆಯವರು ಸಮ್ಮಾನಿಸುವರು.

ಇದನ್ನೂ ಓದಿ:ಕೇರಳದಲ್ಲಿ ಇನ್ನೂ 2 ವಾರ ಮಳೆ;  9 ಆಣೆಕಟ್ಟಿಗೆ ರೆಡ್‌, 7 ಜಿಲ್ಲೆಗೆ ಯೆಲ್ಲೋ ಅಲರ್ಟ್‌

ಅಪೂರ್ವ ಸಾಧನೆಗಳ ಸರದಾರ 1968ರ ಅ. 24ರಂದು ನೆಲ್ಯಾಡಿಬೀಡಿನಲ್ಲಿ 21ನೇ ಧರ್ಮಾಧಿಕಾರಿಯಾಗಿ ತನ್ನ 20ನೇ ವರ್ಷದಲ್ಲಿ ಪಟ್ಟಾಭಿಷಿಕ್ತರಾದ ಡಾ| ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ. ವಿನೂತನ ಯೋಜನೆಗಳ ಮೂಲಕ ಡಾ| ಹೆಗ್ಗಡೆಯವರ ಚಿಂತನ-ಮಂಥನದಿಂದ ಯಶಸ್ವಿಯಾಗಿ ಲೋಕಕಲ್ಯಾಣಕ್ಕಾಗಿ ಅನೇಕಾನೇಕ ಸೇವಾ ಕಾರ್ಯಗಳು ಮೂಡಿಬಂದಿವೆ. ಅವರ ಕೆಲವುಯೋಜನೆಗಳಿಗೆ ರಾಜ್ಯ ಹಾಗೂ ಕೇಂದ್ರ ಸರಕಾರ ಮಾನ್ಯತೆ ನೀಡಿ ಅನುಷ್ಠಾನಗೊಳಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next