Advertisement

ಧರ್ಮಸ್ಥಳಕ್ಕೆ ಫೆ. 12 ಕ್ಕೆ ಬನ್ನಿ:ಮಾಜಿ ಶಾಸಕ ಬೇಳೂರಿಗೆ ಶಾಸಕ ಹಾಲಪ್ಪ ಆಹ್ವಾನ

07:39 PM Feb 04, 2022 | Team Udayavani |

ಸಾಗರ: ಮರಳು ಸಾಗಾಣಿಕೆದಾರರಿಂದ ಕಮಿಷನ್ ಪಡೆಯುತ್ತಿರುವ ವಿಚಾರವಾಗಿ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ತಮ್ಮನ್ನು ಧರ್ಮಸ್ಥಳಕ್ಕೆ ಪ್ರಮಾಣ ಮಾಡಲು ಬರಲು ನೀಡಿದ ಆಹ್ವಾನವನ್ನು ಸ್ವೀಕರಿಸಿ ಫೆ. 13 ಕ್ಕೆ ಧರ್ಮಸ್ಥಳದಲ್ಲಿರುವುದಾಗಿ ತಿಳಿಸಿದ್ದ ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್.ಹಾಲಪ್ಪ ಹರತಾಳು ತಮ್ಮ ಕುಟುಂಬದ ಅನಿವಾರ್ಯ ಕಾರಣದಿಂದ ಪ್ರಮಾಣದ ದಿನವನ್ನು24  ಘಂಟೆ ಹಿಂದೂಡಿ ಫೆ12 ಕ್ಕೆ ಬರಲು ಬೇಳೂರು ಅವರನ್ನು ಆಮಂತ್ರಿಸಿದ್ದಾರೆ.

Advertisement

ಮಾಜಿ ಶಾಸಕ ಬೇಳೂರು ಸಾಗರ ಮತ್ತು ಹೊಸನಗರ ತಾಲೂಕಿನ ಮರಳು ಸಾಗಾಣಿಕೆದಾರರಿಂದ ನಾನು ಕಮೀಷನ್ ವಸೂಲಿ ಮಾಡುತ್ತಿದ್ದೇನೆ. ಇದನ್ನು ನಾನು ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲು ಸಿದ್ದ ಎಂದು ಹೇಳಿಕೆ ನೀಡಿದ್ದರು. ಮಾಜಿ ಶಾಸಕರ ಸವಾಲು ನಾನು ಸ್ವೀಕರಿಸಿ ಫೆ. 13 ಕ್ಕೆ ಧರ್ಮಸ್ಥಳಕ್ಕೆ ಬರುವಂತೆ ದಿನಾಂಕ ನಿಗದಿ ಮಾಡಲಾಗಿತ್ತು. ಆದರೆ ನಮ್ಮ ಮನೆಯಲ್ಲಿ ವಿವಾಹ ಸಂಬಂಧಿತ ಪೂರ್ವನಿಗದಿತ ಶುಭಕಾರ್ಯ ಇರುವುದರಿಂದ 13ರ ಬದಲು ಫೆ. 12ಕ್ಕೆ ನಾನು ಧರ್ಮಸ್ಥಳಕ್ಕೆ ಬರಲು ಸಿದ್ದನಿದ್ದು, ಅದೇ ದಿನ ಮಾಜಿ ಶಾಸಕರು ಧರ್ಮಸ್ಥಳಕ್ಕೆ ಬರಬೇಕು ಎಂದು ಆಹ್ವಾನ ನೀಡಿದ್ದಾರೆ.

ಫೆ. ೧೪ರಿಂದ ವಿಧಾನಸಭಾ ಅಧಿವೇಶನ ಪ್ರಾರಂಭವಾಗಲಿದೆ. ನಂತರ ಕ್ಷೇತ್ರಕ್ಕೆ ಹೋಗಲು ವಿಳಂಬವಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಒಂದು ದಿನ ಮುಂಚಿತವಾಗಿ ದಿನ ನಿಗದಿಗೊಳಿಸಲಾಗಿದೆ. ಈ ಸಂಬಂಧ ಮಾಜಿ ಶಾಸಕರಿಗೆ ಸಹ ತಮ್ಮ ಆಪ್ತಕಾರ್ಯದರ್ಶಿ ಮೂಲಕ ಮಾಹಿತಿ ತಲುಪಿಸಿದ್ದಾಗಿ ಕೂಡ ಶಾಸಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next