Advertisement

ಚತುರ್ವಿಂಶತಿ ತೀರ್ಥಂಕರರ ಆರಾಧನೆ

12:30 AM Feb 05, 2019 | |

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಫೆ. 9ರಿಂದ 18ರ ವರೆಗೆ ನಡೆಯಲಿರುವ ಭಗವಾನ್‌ ಬಾಹುಬಲಿ ಮಹಾಮಸ್ತಕಾಭಿಷೇಕದ ಪೂರ್ವಭಾವಿಯಾಗಿ ಸೋಮವಾರ ಭಗವಾನ್‌ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಚತುರ್ವಿಂಶತಿ (24) ತೀರ್ಥಂಕರರ ಅಷ್ಟವಿಧಾರ್ಚನೆ ನಡೆಯಿತು.

Advertisement

ಆಚಾರ್ಯ ಶ್ರೀ 108 ವರ್ಧಮಾನ ಸಾಗರ್‌ಜಿ ಮುನಿ ಮಹಾರಾಜರು, ಆಚಾರ್ಯ ಶ್ರೀ 108 ಪುಷ್ಪದಂತಸಾಗರ ಮುನಿಮಹಾರಾಜರು, ಆಚಾರ್ಯ ಸಿದ್ಧಸೇನ ಮುನಿಮಹಾರಾಜರು, ಮುನಿಸಂಘದವರು ಹಾಗೂ ಮಾತಾಜಿ ಯವರು, ಪ್ರೊ| ಎಸ್‌. ಪ್ರಭಾಕರ್‌, ಡಿ. ಸುರೇಂದ್ರ ಕುಮಾರ್‌, ಡಿ. ಹರ್ಷೇಂದ್ರ ಕುಮಾರ್‌ ಉಪಸ್ಥಿತರಿದ್ದರು.

ಡಾ| ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ವೀ. ಹೆಗ್ಗಡೆ, ಅನಿತಾ ಸುರೇಂದ್ರ ಕುಮಾರ್‌, ಹರ್ಷೇಂದ್ರ ಕುಮಾರ್‌, ಶ್ರದ್ಧಾ ಅಮಿತ್‌, ಸೋನಿಯಾ ವರ್ಮ ಮತ್ತು ಸ್ಥಳೀಯ ಶ್ರಾವಕಿಯರು ಭಾಗವಹಿಸಿದ್ದರು.

ವಜ್ರ ಪಂಜರ ಆರಾಧನೆ
ಫೆ. 5ರಂದು ಬೆಳಗ್ಗೆ 9ಕ್ಕೆ ಭಗವಾನ್‌ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ವಜ್ರ ಪಂಜರ ಆರಾಧನೆ, ಫೆ. 6ರಂದು ಗಣಧರ ವಲಯ ಆರಾಧನೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next