Advertisement
ಸರಕಾರಿ ಇಲಾಖೆಗಳ ಮಳಿಗೆಪ್ರದರ್ಶನದಲ್ಲಿ ರುಡ್‌ಸೆಟ್ ಬಜಾರ್, ಗ್ರಾಮಾಭಿವೃದ್ಧಿ ಯೋಜನೆ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳು, ಧರ್ಮೋತ್ಥಾನ ಟ್ರಸ್ಟ್, ರತ್ನಮಾನಸ, ಮಂಜುವಾಣಿ, ಎಸ್‌ಡಿಎಂ ಐಟಿಐ ವೇಣೂರು, ಪ್ರಕೃತಿ ಚಿಕಿತ್ಸೆ, ಎಸ್‌ಡಿಎಂ ಪಾಲಿಟೆಕ್ನಿಕ್, ಸಿರಿ ಉತ್ಪನ್ನಗಳ ಮಳಿಗೆಯ ಜತೆಗೆ ಅನೇಕ ಸರಕಾರಿ ಇಲಾಖೆಗಳ ಮಳಿಗೆಗಳಿವೆ.
ಜತೆಗೆ ಬ್ಯಾಂಕುಗಳು, ಧಾರ್ಮಿಕ ಮಳಿಗೆಗಳು, ಎಲ್‌ಐಸಿ, ಅಂಚೆ ಇಲಾಖೆ, ಬಿಎಸ್‌ಎನ್‌ಎಲ್, ಪುಸ್ತಕ ಮಳಿಗೆಗಳು, ನಂದಿನಿ ಉತ್ಪನ್ನಗಳು, ವಾಹನ ಶೋರೂಮ್ ಮಳಿಗೆ, ಕೃಷಿ ಯಂತ್ರೋಪಕರಣ, ನರ್ಸರಿ ಉಪಕರಣಗಳು, ಟರ್ಪಾಲು, ಹೊಲಿಗೆ ಯಂತ್ರ, ಕರಕುಶಲ ವಸ್ತುಗಳು, ಸುರಕ್ಷಾ ಮಣ್ಣಿನ ಇಟ್ಟಿಗೆ, ಮರದ ವಸ್ತುಗಳು, ನಾಟಿ ಔಷಧಿ, ತರಕಾರಿ ಬೀಜಗಳು, ಗೋಬರ್ ಗ್ಯಾಸ್, ಕೆಂಪುಕಲ್ಲಿನ ಇಟ್ಟಿಗೆ, ವಸ್ತ್ರಮಳಿಗೆಗಳು, ತಿಂಡಿ ತಿನಿಸುಗಳು, ಸಾವಯವ ಕೃಷಿ ಉತ್ಪನ್ನಗಳು ಹೀಗೆ ಅನೇಕ ಮಳಿಗೆಗಳಿವೆ. ಪ್ರಾತ್ಯಕ್ಷಿಕೆ
ಗ್ರಾಮಾಭಿವೃದ್ಧಿ ಯೋಜನೆಯ ವಿಶೇಷ ಮಳಿಗೆಯಲ್ಲಿ ಮಡಿಕೆ, ಮರದ ವಸ್ತುಗಳ ತಯಾರಿ ಪ್ರಾತ್ಯಕ್ಷಿಕೆ, ಸಾವಯವ ಕೃಷಿ, ಗುಡಿ ಕೈಗಾರಿಕೆ, ಕಾನೂರಾಯಣ ಚಲನಚಿತ್ರ ಪ್ರದರ್ಶನ ಹೀಗೆ ಕ್ಷೇತ್ರದ ವತಿಯಿಂದ ನಡೆಯುವ ಸೇವಾ ಕಾರ್ಯಗಳ ಕುರಿತು ಅಲ್ಲಿ ಮಾಹಿತಿ ನೀಡಲಾಗುತ್ತಿದೆ. ಜತೆಗೆ ವಸ್ತು ಪ್ರದರ್ಶನದ ಒಂದು ಬದಿಯ ವೇದಿಕೆಯಲ್ಲಿ ಸಂಗೀತ, ನೃತ್ಯ, ಯಕ್ಷಗಾನ ಹೀಗೆ ಅನೇಕ ಮನ ರಂಜನಾ ಕಾರ್ಯಕ್ರಮಗಳು ಕೂಡ ನಡೆಯುತ್ತಿರುತ್ತವೆ. ಕಳೆದ 2 ತಿಂಗಳಿನಿಂದ ಇಲ್ಲಿನ ಮಳಿಗೆಗಳಿಗೆ ಬುಕ್ಕಿಂಗ್ ಆರಂಭ ಗೊಂಡಿದ್ದು, ಈಗಲೂ ಅನೇಕ ಮಂದಿ ಕರೆ ಮಾಡಿ ಮಳಿಗೆ ಸಿಗಬಹುದೇ ಎಂದು ವಿಚಾರಿಸುತ್ತಿದ್ದಾರೆ ಎಂದು ವ್ಯವಸ್ಥಾಪಕ ಎಂ.ಕೃಷ್ಣ ಶೆಟ್ಟಿ ರತ್ನಮಾನಸ ಹೇಳುತ್ತಾರೆ.
Related Articles
Advertisement
ಉದ್ಯಮ ಆರಂಭಜೀವನದಲ್ಲಿ ಉದ್ಯಮ ಆರಂಭಿಸುವವರು ಶ್ರೀ ಮಂಜುನಾಥ ಸ್ವಾಮಿಯ ಆಶೀರ್ವಾದವನ್ನು ಪಡೆಯುವುದಕ್ಕಾಗಿ ಇಲ್ಲಿಗೆ ಮಳಿಗೆಯನ್ನು ಹಾಕಿ ಬಳಿಕ ಅವರು ತಮ್ಮ ಉದ್ಯಮ ಆರಂಭಿಸುತ್ತಾರೆ. ಇನ್ನು ಕೆಲವರು ಇಲ್ಲಿ ಮಾತ್ರ ಮಳಿಗೆ ತೆರೆಯುವವರು ಇರುತ್ತಾರೆ. ಉಳಿದವರು ಎಲ್ಲಾ ಕಡೆಯಂತೆ ಇಲ್ಲೂ ಮಳಿಗೆಗಳನ್ನು ಹಾಕುತ್ತಾರೆ. ಹೀಗೆ ಬೇರೆ ಬೇರೆ ರೀತಿಯ ವರ್ತಕರು ಪ್ರದರ್ಶನ ಮಳಿಗೆಗೆ ಆಗಮಿಸುತ್ತಾರೆ.