Advertisement

ಪಾದಯಾತ್ರೆಯಿಂದ ಆರಂಭವಾಯಿತು ಲಕ್ಷದೀಪೋತ್ಸವ

02:43 PM Nov 30, 2021 | Team Udayavani |

ಧರ್ಮಸ್ಥಳದ ಲಕ್ಷದೀಪೋತ್ಸವ ಅಂದರೆ ನಮ್ಮ ಮೈಯೆಲ್ಲಾ ಒಮ್ಮೆ ರೋಮಾಂಚನಗೊಳ್ಳುತ್ತದೆ. ಅಲ್ಲಿ ಬರುವ ಪಾದಯಾತ್ರಿಗಳು, ಅಂಗಡಿ, ದೀಪ, ಹೆಜ್ಜೆ ಹೆಜ್ಜೆಗೂ ಒಂದೊಂದೂತರಹದ ಬೆಳಕು, ದೇವರಿಗೆ ಮಾಡಿದ ಶೃಂಗಾರ, ದೇವರನ್ನು ಹೊತ್ತುಕೊಂಳ್ಳುವವರು, ಅರ್ಚಕರು, ಒಂದೊಂದು ದಿನವೂ ಒಂದೊಂದು ತರಹದ ಉತ್ಸವ. ಅಬ್ಬಾ! ಹೇಳುತ್ತಾ ಹೋದರೆ ಹಾಗೆ ಪಟ್ಟಿ ಬೆಳೆಯುತ್ತಲೇ  ಹೋಗುತ್ತದೆ. ಅದರಲ್ಲಿಯೂ ಲಕ್ಷ ದೀಪೋತ್ಸವಕ್ಕೆಂದು ದೂರ ದೂರದ ಊರಿನಿಂದ ಬರುವ ಪಾದಯಾತ್ರಿಗಳ ಪಾದಯಾತ್ರೆ ನೋಡುವುದೇ ಒಂದು ಖುಷಿ. ತಮ್ಮ ಕನಸು, ಸೇವೆ, ಆಸೆಗಳ ಈಡೇರಿಕೆಗಾಗಿ ದೇವರ ದರ್ಶನ ಪಡೆಯಲು ಯಾತ್ರಿಗಳು ಬಂದಿದ್ದಾರೆ.

Advertisement

ಅದರಲ್ಲಿಯೂ ಕೊರೋನಾ ಮಹಾಮಾರಿ ಬಂದ ಮೇಲಂತು ಯಾವುದೇ ಉತ್ಸವ, ಹಬ್ಬ, ಜಾತ್ರೆಗಳನ್ನೂ ಆಚರಿಸಲು ಅವಕಾಶವೇ ಇರಲಿಲ್ಲ. ಆದರೆ ಈ ಬಾರಿ ತಾವು ಕಳೆದುಕೊಂಡ ದಿನವನ್ನು ಪುನಃ ಪಡೆದುಕೊಳ್ಳಲು ಪಾದಯಾತ್ರಿಗಳ ಗುಂಪು ಗುಂಪೆ ಹರಿದು ಬಂದಿದೆ. ಅವರಲ್ಲಿ 12 ವರ್ಷದ ಬಾಲಕಾರಿನಿಂದ ಹಿಡಿದು 70 ವರ್ಷದ ಮುದುಕ, ಮುದುಕಿಯರನ್ನು ಕಾಣಬಹುದಾಗಿದೆ. ಎಲ್ಲಿ ನೋಡಿದರಲ್ಲಿ ಜನರ ಗುಂಪೆ ಎದ್ದು ಕಾಣುತ್ತಿದೆ. ಅಲ್ಲಲ್ಲಿ ಪಾದಯಾತ್ರಿಗಳಿಗೆ ಸೇವೆಸಲ್ಲಿಸಲು ಪಾನಕ, ಮಜ್ಜಿಗೆ, ನೀರಿನ ವ್ಯವಸ್ಥೆ ಮಾಡಲಾಗಿತ್ತು. ಜನರು ಮಂಜುನಾಥನ ಸ್ಮರಣೆಮಾಡುತ್ತಾ ಜನಾರ್ದನ ದೇವಸ್ಥಾನದಿಂದ ಧರ್ಮಸ್ಥಳದವರೆಗೂ ಸಾಗಿದರು.

ಉಜಿರೆಯ ತುಂಬೆಲ್ಲ ಪಾದಯಾತ್ರಿಗಳ ಗುಂಪು  ಎಲ್ಲರನ್ನೂ ಸೆಳೆಯುವಂತೆ ಎದ್ದು ಕಾಣುತಿತ್ತು. ಬೇರೆ ಬೇರೆ ಜಿಲ್ಲೆ, ರಾಜ್ಯಗಳಿಂದ ಪಾದಯಾತ್ರಿಗಳು ದೇವರ ದರ್ಶನಕ್ಕಾಗಿ ಆಗಮಿಸಿದ್ದರು. ಸುಮಾರು 10 ಸಾವಿರಕ್ಕೂ ಹೆಚ್ಚಿನ ಪಾದಯಾತ್ರೆಯನ್ನು ಗಮನಿಸಬಹುದಾಗಿತ್ತು. ಈ ಪಾದಯಾತ್ರಿಗಳ ಮಧ್ಯದಲ್ಲಿ ಸ್ತಬ್ದ ಚಿತ್ರಣಗಳ ಪ್ರದರ್ಶನವು ಇತ್ತು.  ಚಂಡೆವಾದ್ಯ, ಭಜನೆ, ರೈತರ ಚಿತ್ರಣ ಹೀಗೆ ಹಲವಾರು ಅಂಶಗಳು ಜನರನ್ನು ಸೆಳೆಯುತ್ತಿದ್ದವು.

Advertisement

ಹೀಗೆ 9 ನೇ ವರ್ಷದ ಲಕ್ಸದೀಪೋತ್ಸವ ಪಾದಯಾತ್ರೆಯ ಮೂಲಕ ಆರಂಭವಾಯಿತು. ಇನ್ನೂ 5 ದಿನಗಳ ಕಾಲ ಧರ್ಮಸ್ಥಳ ದೀಪ, ಬಣ್ಣ ಬಣ್ಣದ ಬೆಳಕುಗಳಿಂದ ಬೆಳಗುವುದನು ನೋಡುವುದೇ ಒಂದು ಚಂದ.

-ಮಧುರಾ ಎಲ್ ಭಟ್ಟ

ಎಸ್ ಡಿ ಎಂ ಸ್ನಾತಕೋತ್ತರ ಕೇಂದ್ರ ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next