Advertisement

ಧರ್ಮಸ್ಥಳ ಲಕ್ಷದೀಪೋತ್ಸವ ಸಂಪನ್ನ

11:22 PM Dec 15, 2020 | mahesh |

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಸೋಮವಾರ ರಾತ್ರಿ ಭಗವಾನ್‌ ಶ್ರೀ ಮಂಜುನಾಥ ಸ್ವಾಮಿಯ ಲಕ್ಷ ದೀಪೋತ್ಸವ ನಡೆಯಿತು. ನಾಡಿನೆಲ್ಲೆಡೆಯಿಂದ ಆಗಮಿಸಿದ ಭಕ್ತರು ಉತ್ಸವವನ್ನು ವೀಕ್ಷಿಸಿದರು. ಶಂಖ, ಜಾಗಟೆ, ಕೊಂಬು, ಕಹಳೆ, ವೀರಗಾಸೆ ಮೊದಲಾದ ಸಹಸ್ರಾರು ಜಾನಪದ ಕಲಾವಿದರು ಕಲಾಸೇವೆಯನ್ನು ಅರ್ಪಿಸಿದರು.

Advertisement

ಬೆಂಗಳೂರಿನ ಭಕ್ತರು ಸ್ವಯಂ ಸೇವಕರಾಗಿ ರಾತ್ರಿ ಅನ್ನದಾನದ ವ್ಯವಸ್ಥೆ ಮಾಡಿದರು. ಡಿ. 10ರಿಂದ 14ರ ವರೆಗೆ
ಲಕ್ಷದೀಪೋತ್ಸವದ ಎಲ್ಲ ಕಾರ್ಯಕ್ರಮಗಳು ಸುಗಮವಾಗಿ, ಸರಳವಾಗಿ ನಡೆದವು. ಕೊರೊನಾ ಕುರಿತು ಸರಕಾರದ ಮಾರ್ಗದರ್ಶಿ ನಿಯಮಗಳನ್ನು ಎಲ್ಲೆಡೆ ಕಟ್ಟುನಿಟ್ಟಾಗಿ ಪಾಲಿಸಲಾಗಿತ್ತು.

ಎಲ್ಲ ಕಾರ್ಯಕ್ರಮಗಳನ್ನು ಸರಳವಾಗಿ ಆಯೋಜಿಸಿದ್ದು, ಪ್ರತ್ಯಕ್ಷವಾಗಿ ಸೀಮಿತ ಸಂಖ್ಯೆಯ ಜನರು ಭಾಗ
ವಹಿಸಿದ್ದರೂ ಲಕ್ಷಾಂತರ ಮಂದಿ ಮನೆಯಲ್ಲೇ ಕುಳಿತು ಯುಟ್ಯೂಬ್‌ ಮತ್ತು ಫೇಸ್‌ಬುಕ್‌ನಲ್ಲಿ ಕಾರ್ಯ ಕ್ರಮಗಳನ್ನು ವೀಕ್ಷಿಸಿದರು.

ಗೌರಿ ಮಾರುಕಟ್ಟೆ ಉತ್ಸವ
ಸೋಮವಾರ ರಾತ್ರಿ ನಡೆದ ಶ್ರೀಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವದ ಗೌರಿ ಮಾರುಕಟ್ಟೆ ಉತ್ಸವಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರು ಸಾಕ್ಷಿಯಾದರು. ದೇವಸ್ಥಾನ ಬಳಿಯಿಂದ ಕ್ಷೇತ್ರದ ಮುಖ್ಯದ್ವಾರದ ಬಳಿ ಇರುವ ಗೌರಿ ಮಾರುಕಟ್ಟೆಗೆ ಶ್ರೀ ಮಂಜುನಾಥ ಸ್ವಾಮಿಯನ್ನು ಬೆಳ್ಳಿಯ ರಥದಲ್ಲಿ ಕುಳ್ಳಿರಿಸಿ ಮೆರವಣಿಗೆಯಲ್ಲಿ ಕರೆತರಲಾಯಿತು. ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಮತ್ತು ಕುಟುಂಬಸ್ಥರು, ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಪಾಲ್ಗೊಂಡರು.

ಸಮವಸರಣ ಪೂಜೆ
ಧರ್ಮಸ್ಥಳದಲ್ಲಿ ಮಂಗಳವಾರ ಸಂಜೆ ಗಂಟೆ 6ರಿಂದ ಸಮವಸರಣ ಪೂಜೆ ನಡೆಯಿತು. ಅಷ್ಟವಿಧಾರ್ಚನೆ ಪೂಜೆ, ಪಂಚನಮಸ್ಕಾರ ಮಂತ್ರ ಪಠಣ, ಜಿನಭಕ್ತಿ ಗೀತೆಗಳ ಗಾಯನ ಮೊದಲಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next