Advertisement
ಡಾ| ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ವೀ. ಹೆಗ್ಗಡೆ ಸಮ್ಮುಖದಲ್ಲಿ ನಡೆದ 17ನೇ ರಾಜ್ಯಮಟ್ಟದ ಅಂಚೆ-ಕುಂಚ ಸ್ಪರ್ಧಾ ವಿಜೇತರ ಪುರಸ್ಕಾರ ಸಮಾರಂಭದಲ್ಲಿ ಕಲಾ ಸಾಧಕರು ಪ್ರತಿಭೆ ಪ್ರದರ್ಶಿಸಿದರು.
ವೇದಿಕೆಯಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರ ಕಲಾವಿದ ಗಂಜೀಫ ರಘುಪತಿ ಭಟ್ ಅವರು ರೇಖಾ ಚಿತ್ರದ ಮೂಲಕ ಮಹಾತ್ಮಾ ಗಾಂಧೀಜಿ ಚಿತ್ರವನ್ನು ಪ್ರಸ್ತುತಪಡಿಸಿದರೆ, ವೇಗದ ಚಿತ್ರ ಕಲಾವಿದೆ ಶಬರಿ ಗಾಣಿಗ ಕುಂಚದಲ್ಲಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಅತ್ಯಾಕರ್ಷಕ ಚಿತ್ತಾರವನ್ನು ಪ್ರದರ್ಶಿಸಿದರು. ವೇದಿಕೆ ಮುಂಭಾಗ ಕಾವ್ಯಶ್ರೀ ಆಜೇರು ಅವರಿಂದ ಯಕ್ಷ ಗಾಯನ ಸುಶ್ರಾವ್ಯ ವಾಗಿ ಮೂಡಿಬಂದಿತು. ಯಕ್ಷ ನೃತ್ಯದ ಮೂಲಕ ಯಕ್ಷಕಲಾ ತಂಡ, ಶ್ರೀ ಧ.ಮಂ. ಕಾಲೇಜು ಉಜಿರೆ, ಹಿಮ್ಮೇಳದಲ್ಲಿ ಚೆಂಡೆವಾದಕರಾಗಿ ಬಿ. ಸೀತಾರಾಮ ತೋಳ್ಪಡಿತ್ತಾಯರು, ಮದ್ದಳೆಯಲ್ಲಿ ಜನಾರ್ದನ ತೋಳ್ಪಡಿತ್ತಾಯ ಅವರಿಂದ ಏಕಕಾಲದಲ್ಲಿ ಕುಂಚ-ಗಾನ-ನೃತ್ಯ ವೈಭವ ಸಾಕಾರಗೊಂಡಿತು. ಕುಂಚಕ್ಕೆ ಸರಿ ಯಾಗಿ ಗಾನ, ಗಾನಕ್ಕೆ ಸರಿಯಾಗಿ ನೃತ್ಯ ರಮಣೀಯವಾಗಿ ಮೂಡಿಬಂದಿತು.
Related Articles
Advertisement
ಚಿತ್ರ ಸಂತೆ ಪ್ರದರ್ಶನ1999ರಿಂದ ಪ್ರತಿ ವರ್ಷ ಅಂಚೆ-ಕುಂಚ ಚಿತ್ರಕಲಾ ಸ್ಪರ್ಧೆಗಳನ್ನು ನಡೆಸುತ್ತಾ ಬಂದಿ ರುವ ಶ್ರೀ ಧ.ಮಂ. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್, ಶ್ರೀಕ್ಷೇತ್ರ ಧರ್ಮಸ್ಥಳವು ಅನೇಕ ಕಲಾವಿದರಿಗೆ ವೇದಿಕೆಯಾಗಿಸಿದೆ. ಈ ವರೆಗೆ 2,09,685 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದು, ವೇದಿಕೆಯ ಹೊರಭಾಗದಲ್ಲಿ ಹಿಂದಿನ ವರ್ಷಗಳಲ್ಲಿ ಪುರಸ್ಕೃತರಾದ ಕುಂಚ ಕಲಾ ವಿದರು ರಚಿಸಿದ ವಿಶಿಷ್ಟ ಕಲೆಯನ್ನು ಚಿತ್ರ ಸಂತೆಯಲ್ಲಿ ಪ್ರದರ್ಶಿಸಲಾಗಿತ್ತು. ಡಾ| ಹೆಗ್ಗಡೆ ಮತ್ತು ಮುಖ್ಯಮಂತ್ರಿ ಚಂದ್ರು ಅವರಿಗೆ ಸ್ಪರ್ಧಾ ವಿಜೇತರು ತಾವು ರಚಿಸಿದ ಕಲಾಕೃತಿಯನ್ನು ಉಡುಗೊರೆ ನೀಡಿದರು. 7ನೇ ಬಾರಿ ಪ್ರಶಸ್ತಿ
ಪ್ರಾಥಮಿಕ ವಿಭಾಗ, ಪ್ರೌಢಶಾಲಾ ವಿಭಾಗ, ಕಾಲೇಜು ವಿಭಾಗ, ಸಾರ್ವಜನಿಕರಿ ಗಾಗಿ ಮಹಾತ್ಮಾ ಗಾಂಧೀಜಿ ವಿಷಯದಲ್ಲಿ ಪ್ರತ್ಯೇಕ ಸ್ಪರ್ಧೆ ಏರ್ಪಡಿಸಲಾಗಿತ್ತು .
ಈವರೆಗೆ ಅಂಕೋಲಾ ಆವರ್ಸೆಯ ದಿನೇಶ ದೇವರಾಯ ಮೇತ್ರಿ ಅಂಚೆ-ಕುಂಚ ಸ್ಪರ್ಧೆಯಲ್ಲಿ 7 ಬಾರಿ ಪ್ರಶಸ್ತಿ ಗಳಿಸಿದ್ದಾರೆ.ಅವರು ಪ್ರತಿಕ್ರಿಯಿಸಿ, ಈವರೆಗೆ ಪ್ರಾಥಮಿಕ-1, ಪ್ರೌಢ-2, ಸಾರ್ವಜನಿಕ-4 ಪ್ರಶಸ್ತಿ ಗಳಿಸಿದ್ದೇನೆ. ಪ್ರತಿ ವರ್ಷ ಹೊಸ ಅನುಭವ ನೀಡುತ್ತದೆ. ಇದು ಪ್ರತಿಭೆಗೆ ಪೂಜ್ಯರು ನೀಡಿದ ಅತ್ಯುತ್ತಮ ಕೊಡುಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕನಸು ನನಸಾಗಿದೆ
ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನನ್ನ ಮೊದಲ ವೇದಿಕೆ ಕಾರ್ಯಕ್ರಮ. ಡಾ| ಹೆಗ್ಗಡೆಯವರ ಆಶೀರ್ವಾದದೊಂದಿಗೆ ಅವರ ಕಲಾಕೃತಿ ರಚಿಸುವ ಮೂಲಕ ನನ್ನ ಕನಸು ನನಸಾಗಿದೆ. ಇಂತಹ ಕಾರ್ಯಕ್ರಮ ಮತ್ತಷ್ಟು ಸಾಧಕರಿಗೆ ವೇದಿಕೆಯಾಗಲಿ.
- ಶಬರಿ ಗಾಣಿಗ, ವೇಗದ ಚಿತ್ರ ಕಲಾವಿದೆ