Advertisement

Dharmasthala: ಕಾಡಾನೆ ಹಾವಳಿ; ಕೃಷಿಗೆ ಹಾನಿ

11:25 PM Aug 30, 2024 | Team Udayavani |

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಕೆಲವೆಡೆ ಕಾಡಾನೆಗಳು ಕೃಷಿ ಹಾನಿ ಮಾಡಿದೆ. ನೇರ್ತನೆ ನಿವಾಸಿ ಜೋಸೆಫ್‌ ಪಿ.ಕೆ. ಅವರ ತೋಟಕ್ಕೆ ನುಗ್ಗಿದ ಆನೆಗಳು ಅಡಿಕೆ, ಬಾಳೆ ಗಿಡಗಳನ್ನು, ಜೇಮ್ಸ್‌ ಅವರ ತೋಟದಲ್ಲಿ ಎರಡು ತೆಂಗಿನ ಮರ, ಅಡಿಕೆ, ಬಾಳೆಗಿಡಗಳನ್ನು, ರಾಜನ್‌ ಅವರ ತೋಟದಲ್ಲಿ 100ಕ್ಕೂ ಹೆಚ್ಚು ಮರಗೆಣಸಿನ ಗಿಡ ಹಾಗೂ ಬಿಜು ಅವರ ತೋಟಕ್ಕೂ ನುಗ್ಗಿ ಕೃಷಿಗೆ ಹಾನಿ ಮಾಡಿದೆ.

Advertisement

ಒಂದು ಮರಿಯಾನೆ ಸಹಿತ ಎರಡು ಆನೆಗಳು ಓಡಾಟ ನಡೆಸುತ್ತಿದ್ದು,ಕಳೆದ ಎರಡು ಮೂರು ದಿನಗಳಿಂದ ನಿರಂತರವಾಗಿ ಕೃಷಿಗೆ ಹಾನಿಯುಂಟು ಮಾಡುತ್ತಿದೆ. ಧರ್ಮಸ್ಥಳದಿಂದ ನೇರ್ತನೆ ಹೋಗುವ ರಸ್ತೆಯಲ್ಲಿ ಓಡಾಡಲೂ ಜನ ಭಯಪಡುವ ವಾತಾವರಣ ನಿರ್ಮಾಣವಾಗಿದೆ. ಇದೇ ಪರಿಸರದಲ್ಲಿ ಆನೆಗಳು ತಿರುಗಾಟ ನಡೆಸುತ್ತಿದ್ದು ಆನೆಗಳನ್ನು ಓಡಿಸಲು ಕ್ರಮ ಕೈಗೊಳ್ಳುವಂತೆ ಜನ ಆಗ್ರಹಿಸುತ್ತಿದ್ದಾರೆ.

ಕಾಡಾನೆ ದಾಳಿ: ವೃದ್ದೆ ಸಾವು
ಮಡಿಕೇರಿ: ಕಾಡಾನೆ ದಾಳಿಗೆ ಸಿಲುಕಿ ವೃದ್ಧೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚೆನ್ನಯ್ಯನಕೋಟೆ ಗ್ರಾಮ ವ್ಯಾಪ್ತಿಯಲ್ಲಿ ನಡೆದಿದೆ.

ಕಾತಯಿ (72) ಮೃತಪಟ್ಟವರಾಗಿದ್ದು, ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಗನ ಮನೆಯಿಂದ ಹೊರ ಬರುತ್ತಿದ್ದ ಅವರ ಮೇಲೆ ಕಾಡಾನೆ ಏಕಾಏಕಿ ದಾಳಿ ಮಾಡಿದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next